May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಕಾಶ್ಮೀರ್ ಮಿನೇಜಸ್ ಇನ್ನಿಲ್ಲ

ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ಡಾ. ಜೆ.ಬಿ. ಸಲ್ಡಾನ್ಹಾ ಹಾಗೂ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರಿಂದ ತೀವ್ರ ಸಂತಾಪ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ 1991-93 ಅವಧಿಯ ಕೇಂದ್ರೀಯ ಮಾಜಿ ಅಧ್ಯಕ್ಷ, ಸಮಾಜ ಸೇವಕ, ಸಂಘಟನಾ ಚತುರ ಹಾಗೂ ನಿವೃತ್ತ ಶಿಕ್ಷಕ ಬೆಳ್ತಂಗಡಿ ನಿವಾಸಿ 79 ವರ್ಷ ಪ್ರಾಯದ ಕಾಶ್ಮೀರ್ ಮಿನೇಜಸ್ ರವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 12ರಂದು ಬುಧವಾರ ನಿಧನ ಹೊಂದಿದರು.

ಉಜಿರೆಯ ರತ್ನಮಾನಸದ ಮುಖ್ಯ ಪಾಲಕರಾಗಿ 1972 ರಿಂದ 2012 ಕಾರ್ಯನಿರ್ವಹಿಸಿರುವ ಇವರು ಉಜಿರೆ ಶ್ರೀ ಧರ್ಮಸ್ಥಳ ಸೆಕೆಂಡರಿ ಶಾಲೆ, ಧರ್ಮಸ್ಥಳ ಎಸ್.ಡಿ.ಎಂ. ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿ, ಎಸ್.ಡಿ.ಎಂ. ರೆಸಿಡೆನ್ಸಿಯಲ್ ಕಾಲೇಜಿನ ನಿರ್ದೇಶಕರಾಗಿ, ಕೃಷಿ ತಜ್ಞರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು, ಮೊಮ್ಮಕ್ಕಳನ್ನು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಸಂಘಟನೆಯಲ್ಲಿ ನಿಷ್ಟಾವಂತರಾಗಿ ಸೇವೆಯನ್ನು ಸಲ್ಲಿಸಿ ಸಂಘಟನೆ ಬಲಿಷ್ಠಗೊಳಿಸುವುದರೊಂದಿಗೆ ಅದರ ಅಭಿವೃದ್ಧಿಗೆ ಕಾರಣಕರ್ತರಾದ ಇವರ ನಿಧನಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ, ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ನಿಕಟ ಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ ಬಂಟ್ವಾಳ, ಎಲ್ಲಾ ಮಾಜಿ ಅಧ್ಯಕ್ಷರು, ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.

You may also like

News

Mumbai Archbishop Cardinal Oswald Gracias Offers Solace to Residents of Saint Anthony’s Ashram

MANGALURU: His Eminence Cardinal Oswald Gracias, Archbishop of Mumbai and a member of the Pope’s Council of Cardinals, paid a
News

ಸೂರಿಕುಮೇರು – ಮಾಣಿಯಲ್ಲಿ ಅದ್ದೂರಿ ‘ಅನ್ಫಾಲ್ ರೆಸ್ಟೋರೆಂಟ್’ ಮೇ 3ರಂದು ಉದ್ಘಾಟನೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾಗಿ ಉದ್ಘಾಟನಾ ಭವ್ಯ ಸಮಾರಂಭದಲ್ಲಿ ಮೂವರು ಸಾಧಕರಾದ ಚೇತನ್ ರೈ, ನಾಗರಾಜ್ ಶೆಟ್ಟಿ ಹಾಗೂ ಯಾಸೀರ್ ಕಲ್ಲಡ್ಕ

You cannot copy content of this page