ದೈವ ದೇವರ ಭಕ್ತಿಯಿಂದ ಇಷ್ಟಾರ್ಥ ಸಿದ್ಧಿ – ಶಶಿಧರ ಶೆಟ್ಟಿ ಬರೋಡ

ಬೆಳ್ತಂಗಡಿ : ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ, ಯಾರಿಗೆ ದೈವ ದೇವರ ಮೇಲೆ ಶ್ರದ್ಧಾ – ಭಕ್ತಿ ಇರುತ್ತದೋ ಅವರಿಗೆ ಇಷ್ಟಾರ್ಥ ಈಡೇರುತ್ತದೆ, ಶ್ರೀ ಕ್ಷೇತ್ರ ಅರಮಲೆಬೆಟ್ಟ ದೈವಸ್ಥಾನದಲ್ಲಿ ಸಂಪ್ರದಾಯದಂತೆ 12 ವರ್ಷಗಳಿಗೊಮ್ಮೆ ದೈವದ ಬ್ರಹ್ಮಕುಂಭಾಭಿಷೇಕ ನಡೆಯುತ್ತದೆ, ಈ ಬಾರಿ ಚಂಡಿಕಾ ಹೋಮದ ಮಹಾ ಮಂಗಳಾರತಿ ವೇಳೆ ಸೂರ್ಯ ದೇವರ ಸೂರ್ಯ ರಶ್ಮಿಯು ನೇರವಾಗಿ ದೇವರ ಬಿಂಬಕ್ಕೆ ಬಿದ್ದು ಸುಮಾರು 3 ಸೆಕುಂಡು ಶ್ರದ್ಧಾ ಭಕ್ತಿಯಿಂದ ನೆರೆದಿರುವ ಭಕ್ತರನ್ನು ಮಂತ್ರ ಮುಗ್ದರನ್ನಾಗಿಸಿತು. ಯಾರಿಗೆ ದೈವ ದೇವರ ಮೇಲೆ ಶ್ರದ್ದಾ ಭಕ್ತಿ ಇರುತ್ತದೋ ಅವರ ಇಷ್ಟಾರ್ಥ ಸಿದ್ದಿಸುತ್ತದೆ ಎಂದು ಶಶಿಧರ್ ಶೆಟ್ಟಿ ಬರೋಡ ಹೇಳಿದರು. ಅವರು ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧಾರ್ಮಿಕ ಉಪನ್ಯಾಸ ನೀಡಿದ ತುಳು ಜನಪದ ವಿದ್ವಾಂಸ ಕೆ.ಕೆ. ಪೇಜಾವರ ಮಾತನಾಡಿ, ತುಳುನಾಡಿನಲ್ಲಿ 2500 ದೈವಗಳ ಆರಾಧನೆ ನಡೆಯುತ್ತಿದ್ದು, ದೈವಾರಾಧನೆ ಆಚರಣೆಗಳಲ್ಲಿ ಈಗ ಅನೇಕ ಬದಲಾವಣೆಗಳಾಗುತ್ತಿದ್ದು ನಮ್ಮ ಆಚರಣೆ, ಸಂಸ್ಕೃತಿ ಸಂಸ್ಕಾರ, ಸಂಪ್ರದಾಯ ಕಟ್ಟುಪಾಡುಗಳು ಮುಂದಿನ ಪೀಳಿಗೆಗೆ ಉಳಿಸಿ, ತಿಳಿಸುವಲ್ಲಿ ನಾವು ಪ್ರಾಜ್ಞರಾಗಬೇಕು ಎಂದು ತಿಳಿಸಿದರು.
ಇನ್ನೊರ್ವ ಧಾರ್ಮಿಕ ಉಪನ್ಯಾಸಕ, ದೈವನರ್ತಕ ಡಾ. ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಿ ದೈವಗಳ ನಾಡು ತುಳುನಾಡು, ದೈವದ ಕೊಡಿಯಡಿಯಲ್ಲಿ 16 ಜಾತಿ ಕಟ್ಟಲೆಯವರು ದೈವ ಚಾಕರಿಯಲ್ಲಿ ಯಾವುದೇ ತಾರತಮ್ಯ ಮಾಡದೆ ಒಂದೇ ಭಾವದಲ್ಲಿ ತಮ್ಮ ತಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಪಾಲಿಸಿ ದೈವಕಾರ್ಯಗಳನ್ನು ಸಂಪ್ರದಾಯ ಪ್ರಕಾರ ನಡೆದು ಕೊಳ್ಳಬೇಕು ಎಂದು ಹೇಳಿದರು.
ಅರಮಲೆಬೆಟ್ಟದ ಅನುವಂಶಿಕ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು ಮಾತನಾಡುತ್ತಾ ಬ್ರಹ್ಮ ಕುಂಭಾಭಿಷೇಕಕ್ಕೆ ಸಹಕರಿಸಿದ ಎಲ್ಲಾ ಸಮಿತಿ ಸದಸ್ಯರನ್ನು ಹಾಗೂ ಊರ ಪರವೂರ ಭಕ್ತಾಧಿಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಓಡೀಲು ದೇವಸ್ಥಾನ ಅರ್ಚಕ ವಿಷ್ಣುಪ್ರಕಾಶ್ ಭಟ್, ರಾಜೇಶ್ ಶೆಟ್ಟಿ ನವಶಕ್ತಿ, ಹರೀಶ್ ಶೆಟ್ಟಿ ನವಶಕ್ತಿ, ದಿನೇಶ್ ಶೆಟ್ಟಿ ಪೂನಾ, ನ್ಯಾಯವಾದಿ ನೋಟರಿ ಶಶಿಕಿರಣ್ ಜೈನ್, ಅನ್ನಪೂರ್ಣ ಮೆಟಲ್ಸ್ ಮಾಲೀಕ ರಾಗ್ನೀಶ್, ಪ್ರಕಾಶ್ ಜೈನ್ ಡೇವುಣಿ ಬಳಂಜ, ಉದ್ಯಮಿ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಗುರುವಾಯನಕೆರೆ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಮುಗುಳಿ ನಾರಾಯಣ್ ಭಟ್, ಪ್ರಕಾಶ್ ಇಲೆಕ್ಟ್ರಾನಿಕ್ಸ್ ಮಾಲೀಕ ಪುಷ್ಪರಾಜ್ ಶೆಟ್ಟಿ, ಪ್ರಗತಿಪರ ಕೃಷಿಕ ರಾಧಾಕೃಷ್ಣ ರೈ, ಮಾಜಿ ಶಾಸಕ ವಸಂತ ಕೆ. ಬಂಗೇರರ ಮಗಳು, ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತಾ ವಿ. ಬಂಗೇರ, ಪ್ರಮೋದ್ ಶೆಟ್ಟಿ ಕಜೆ, ಶೆಣೈ ರೆಸ್ಟೋರೆಂಟ್ ಮಾಲಕಿ ದೀಪಾ ಶೆಣೈ, ಹಿರಿಯರಾದ ಆನಂದ ಶೆಟ್ಟಿ ವಾತ್ಸಲ್ಯ, ವಿತೇಶ್ ಜೈನ್ ಪಡಂಗಡಿ ಭಾಗವಹಿಸಿದ್ದರು.
ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು, ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ವಾತ್ಸಲ್ಯ ಉಪಸ್ಥಿತರಿದ್ದರು. ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಸ್ವಾಗತಿಸಿದರು. ನಿತಿನ್ ಬರಾಯ ನಿರೂಪಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ವಂದಿಸಿದರು.