ಮುಂಡೂರು ಜಾತ್ರೋತ್ಸವ ಸಂಪನ್ನ

ಬೆಳ್ತಂಗಡಿ : ಮುಂಡೂರು ಶ್ರೀ ಮಂಗಳಗಿರಿ ಕ್ಷೇತ್ರ ಶ್ರೀ ನಾಗಕಲ್ಲುರ್ಟಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಕ್ಷೇತ್ರದಲ್ಲಿ ವಿಶೇಷ ಪೂಜೆ ಮತ್ತು ರಂಗಪೂಜೆ ಫ್ರೆಬ್ರವರಿ 13ರಂದು ಗುರುವಾರ ನಡೆಯಿತು.
ಬೆಳಗ್ಗೆ ನಾಗತಂಬಿಲ, ನಾಗಬ್ರಹ್ಮ ದೇವರಿಗೆ ತನುತಂಬಿಲ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಉದ್ಭವ ಗಣಪತಿಗೆ ಮತ್ತು ಶ್ರೀ ನಾಗಾಂಬಿಕೆ ಅಮ್ಮನವರಿಗೆ ಜೋಡು ರಂಗಪೂಜೆ ನಡೆಯಿತು. ಕಾರ್ಕಳ ಡೆನ್ನಾನ ಕಲಾವಿದರಿಂದ ಡೆನ್ನಾನ ತುಳುನಾಟಕ ನಡೆಯಿತು.
ಕ್ಷೇತ್ರದ ವತಿಯಿಂದ ಕ್ಷೇತ್ರದ ಅರ್ಚಕ ವೆಂಕಟೇಶ ಶಾಂತಿ, ನಾಟಕ ಕಲಾವಿದೆ ಅನುಷಾ ಆಚಾರ್ಯ, ಅಭಯ ಹಸ್ತ ತಂಡದ ಉಮನಾಥ್ ಕೋಟ್ಯಾನ್ ಮತ್ತು ತಂಡದವರಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜಕ ಜಯರಾಜ್ ಬಂಗೇರ, ಪುಷ್ಪಾಲಂಕಾರ ಸೇವಾಕರ್ತರಾದ ಸುಧಾಮಣಿ, ಗೋಪಾಲ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕ್ಷೇತ್ರದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ 200 ಮಂದಿಗೆ ವಸ್ತ್ರ ವಿತರಿಸಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ರಾಜೀವ, ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಜಯರಾಜ್ ಬಂಗೇರ, ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಮತ್ತು ಭಕ್ತರು ಉಪಸ್ಥಿತರಿದ್ದರು.