ಕಾರ್ಕಳಕ್ಕೆ ನೂತನ ASPಯಾಗಿ ಡಾ. ಹರ್ಷ ಪ್ರೀಯಂವದ

2023ರ ಫೆಬ್ರವರಿ 1ರಿಂದ ಇಲ್ಲಿಯವರೆಗೆ ಕಾರ್ಕಳದ DYSP ಆಗಿ ಕಾರ್ಯನಿರ್ವಹಿಸಿದ ಅರವಿಂದ್ ಎನ್. ಕಲಗುಜ್ಜಿ ಅವರು ವರ್ಗಾವಣೆಯಾಗಿ ಹೊಸ ASP ಆಗಿ ಡಾ. ಹರ್ಷ ಪ್ರಿಯಂವದ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
2023ರ ಫೆಬ್ರವರಿ 1ರಂದು ಕಾರ್ಕಳದ DYSP ಆಗಿ ಅಧಿಕಾರ ವಹಿಸಿಕೊಂಡ ಅರವಿಂದ್ ಎನ್. ಕಲಗುಜ್ಜಿ ಇದೀಗ ವರ್ಗಾವಣೆಯಾಗುತ್ತಿದ್ದು ಮೂಲತಃ ಜಾರ್ಖಂಡ್ ನ ಧನ್ಭಾದ ಜಿಲ್ಲೆಯ ಡಾ. ಹರ್ಷ ಪ್ರಿಯಂವದ ಲೋಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 165ನೇ ರ್‍ಯಾಂಕ್ ಪಡೆದು ಇದೀಗ ಕಾರ್ಕಳದ ನೂತನ ASP ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಡಾ. ಹರ್ಷ ಪ್ರಿಯಂವದ ಅವರು 2018ರಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ MBBS ಶಿಕ್ಷಣ ಪೂರೈಸಿದ್ದಾರೆ.