ಕರ್ನಾಟಕ ರಾಜ್ಯ ಜಂಇಯ್ಯತುಲ್ ಇರ್ಫಾನಿಯೀನ್ ಅಧ್ಯಕ್ಷರಾಗಿ ಶೈಕ್ ಮುಹಮ್ಮದ್ ಇರ್ಫಾನೀ ಪುನರಾಯ್ಕೆ

ಮಂಗಳೂರು: ಶೈಖುನಾ ಚಪ್ಪಾರಪಡವು ಉಸ್ತಾದರ ನಿರ್ದೇಶನ ಮೇರೆಗೆ ರೂಪೀಕರಿಸ್ಪಟ್ಟ ಕರ್ನಾಟಕ ಜಂಇಯ್ಯತುಲ್ ಇರ್ಫಾನಿಯೀನ್ ಇದರ ಮಹಾಸಭೆಯು ಫೆಬ್ರವರಿ 11ರಂದು ಮಂಗಳವಾರ 11 ಗಂಟೆಗೆ ಸರಿಯಾಗಿ ಮೌಲ ಮೆಮೋರಿಯಲ್ ಅಕಾಡಮಿಯಲ್ಲಿ ಕೇಂದ್ರ ಸಮಿತಿ ಸದಸ್ಯರಾದ ಉಬೈದುಲ್ಲಾ ಫೈಝಿ ಇರ್ಫಾನಿ ಅಲ್ ಅಝ್ಝರಿಯವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಸಲೀಂ ಫೈಝಿ ಇರ್ಫಾನಿ ಮಾಡಿದರು.
ಯಾಕೂಬ್ ಫೈಝಿ ಇರ್ಫಾನಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಸೈಯ್ಯದ್ ಶರೀಫ್ ತಂಙಲ್ ಇರ್ಫಾನಿ ಹಿತೋಪದೇಶ ನೀಡಿದರು. ಶೈಖ್ ಮುಹಮ್ಮದ್ ಫೈಝಿ ಇರ್ಫಾನಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಸವಾದ್ ಫೈಝಿ ಇರ್ಫಾನಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮೌಲಾ ಅಕಾಡೆಮಿ ಮುದರ್ರಿಸರಾದ ಅಬ್ದುಲ್ ಅಝೀಝ್ ಇರ್ಫಾನಿ, ಮಸೂದ್ ಇರ್ಫಾನಿ, ಬಿಲಾಲ್ ಇರ್ಫಾನಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
2023-24ಸಾಲಿನ ಖರ್ಚು ವೆಚ್ಚಗಳ ಆಯವ್ಯಯವನ್ನು ಮಂಡಿಸಿದ ನಂತರ 2025-26ರ ನೂತನ ಸಮಿತಿಯು ಸರ್ವ ಇರ್ಫಾನಿಗಳ ಸಮ್ಮುಕದಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಪಂಡಿತರಾದ ಶೈಖ್ ಮುಹಮ್ಮದ್ ಫೈಝಿ ಇರ್ಫಾನಿ ಮುದರರಿಸ್ ಪಲ್ಲಂಗೊಡುರನ್ನು ಎಲ್ಲರ ಒತ್ತಾಯ ಮೇರೆಗೆ ಪುನರಾಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ ಯುವ ಪಂಡಿತರಾದ ಕೊಳ್ತಿಗೆ ಮುದರ್ರಿಸ್ ಇಲ್ಯಾಸ್ ಇರ್ಫಾನಿಯವರನ್ನು, ಕೋಶಾಧಿಕಾರಿಯಾಗಿ ಕಡಂಬಾರ್ ಮುದರ್ರಿಸ್ ಸಲೀಂ ಫೈಝಿ ಇರ್ಫಾನಿ ಮೂಡಿಗೆರೆ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸೈಯ್ಯದ್ ಶರೀಫ್ ತಂಙಲ್, ಅಬ್ದುಲ್ ಅಝೀಝ್ ಇರ್ಫಾನಿಯವರನ್ನು, ಜೊತೆ ಕಾರ್ಯದರ್ಶಿಗಳಾಗಿ ಶಂಸುದ್ದೀನ್ ಇರ್ಫಾನಿ ಕೊಡಗು, ಬಾದುಶಾ ಇರ್ಫಾನಿ ಸಾಲ್ಮರ, ಯೂನಸ್ ಇರ್ಫಾನಿ ಕೆರೆಮೂಲೆಯವರನ್ನು ನೇಮಕಗೊಳಿಸಲಾಯ್ತು.
ಇಕ್ಬಾಲ್ ಇರ್ಫಾನಿ ಮುಂಡೋಳೆ, ಅಬ್ದುಲ್ ಹಮೀದ್ ಇರ್ಫಾನಿ, ಶಾಫಿ ಮೌಲವಿ, ಸ್ವಲಾಹುದ್ದೀನ್ ಇರ್ಫಾನಿ, ಹೈದರ್ ಇರ್ಫಾನಿ, ಮುಸ್ತಫ ಇರ್ಫಾನಿ, ನಿಝಾಂ ಇರ್ಫಾನಿ, ತ್ವಾಹ ಇರ್ಫಾನಿ, ಅಲಿ ಇರ್ಫಾನಿ, ಜವಾದ್ ಇರ್ಫಾನಿ ದೇರಳಕಟ್ಟೆಯವರನ್ನು ಒಟ್ಟು 20 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು. ಮೌಲ ಅಕಾಡಮಿಯ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವುದು, ಸಮಸ್ತ ಶತಮಾನೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮ, ಇಫ್ತಾರ್ ಕೂಟ, ರಂಝಾನ್ ವಿಶೇಷ ತರಬೇತಿ ಇನ್ನಿತರ ಕಾರ್ಯ ಕ್ರಮಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಚರ್ಚಿಸಿ, ಕೊನೆಗೆ ಇಲ್ಯಾಸ್ ಇರ್ಫಾನಿ ಸಾಲ್ಮರ ಇವರು ಎಲ್ಲರಿಗೂ ವಂದಿಸಿದರು.