SYS ಈಶ್ವರ ಮಂಗಳ ಸರ್ಕಲ್ ಮಹಾ ಸಭೆ ಹಾಗೂ ಸಮಿತಿ ಪುನರಚನೆ

ಈಶ್ವರ ಮಂಗಳ: ಕರ್ನಾಟಕ ರಾಜ್ಯ ಯುವಜನ ಸಂಘ SჄS ಈಶ್ವರ ಮಂಗಳ ಸರ್ಕಲ್ ಮಹಾ ಸಭೆಯು ಉಮರ್ ಸ ಅದಿಯವರ ಅಧ್ಯಕ್ಷತೆಯಲ್ಲಿ ಈಶ್ವರ ಮಂಗಳ ತ್ವೈಬ ಸೆಂಟರ್ ನಲ್ಲಿ ನಡೆಯಿತು. SჄS ಪುತ್ತೂರು ಝೋನ್ ನಾಯಕರಾದ ಅಬ್ದುಲ್ ಜಲೀಲ್ ಸಖಾಫಿ ಉದ್ಘಾಟಿಸಿ ಆತ್ಮೀಯ ಸಂದೇಶವನ್ನು ನೀಡಿದರು. ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ಹಾಗೂ ಝೋನ್ ನಾಯಕರಾದ ಹಮೀದ್ ಕೊಯಿಲರವರು ಸಂಘಟನಾ ತರಗತಿ ನಡೆಸಿದರು. ಶರೀಫ್ ಪಿ.ಎಚ್. ವರದಿ ಹಾಗೂ ಸಂಶುದ್ದೀನ್ ಹನೀಫಿ ಲೆಕ್ಕ ಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆದರು.
PTC ಕ್ಯಾಂಪ್ ನಲ್ಲಿ ಭಾಗವಹಿಸಿದವರಿಗೆ ಸರ್ಟಿಫಿಕೇಟ್ ವಿತರಣೆ ಹಾಗೂ ಸರ್ಕಲ್ ಗಾಗಿ ದುಡಿದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸರ್ಕಲ್ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ ಅಝೀಝ್ ಮಾಸ್ಟರ್ ಚೆನ್ನಾರ್ ರವರ ನೇತೃತ್ವದಲ್ಲಿ ಸಮಿತಿ ಬರ್ಕಾಸ್ತುಗೊಳಿಸಿ ನೂತನ ಸರ್ಕಲ್ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಸಂಶುದ್ದೀನ್ ಹನೀಫಿ, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಸ ಅದಿ ಕರ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ತ್ವಾಹ ಸ ಅದಿ, ಕೋಶಾಧಿಕಾರಿಯಾಗಿ ಅಬ್ದುಲ್ಲಾ ಕಾವು, ದ ಅವಾ ಕಾರ್ಯದರ್ಶಿಯಾಗಿ ಹುಸೈನ್ ಜೌಹರಿ, ಟ್ರೈನಿಂಗ್ ಕಾರ್ಯದರ್ಶಿಯಾಗಿ ದಾವೂದ್ ಲತೀಫಿ, ಸಾಂತ್ವನ ಕಾರ್ಯದರ್ಶಿಯಾಗಿ ಹಾರಿಸ್ ಪಿ.ಎಸ್, ಇಸಾಬ ಕಾರ್ಯದರ್ಶಿಯಾಗಿ ಆದಂ ಬಡಗನ್ನೂರು, ಓರ್ಗನೈಸಿಂಗ್ ಕಾರ್ಯದರ್ಶಿಯಾಗಿ ತಾಜುದ್ದೀನ್ ಮಾಡನ್ನೂರು ಹಾಗೂ ಕಾರ್ಯಕಾರಿ ಸದಸ್ಯರಾಗಿ ಅಬ್ಬಾಸ್ ಶಾಮಿಯಾನ, ಉಮರ್ ಸ ಅದಿ, ಶರೀಫ್ ಪಿ.ಎಚ್., ಇಬ್ರಾಹಿಂ ಮದನಿ, ಅಬ್ದುಲ್ ರಹಿಮಾನ್ ಅನಿಲೆ, ಲತೀಫ್ ಕರ್ನೂರು, ರಶೀದ್ ಕರ್ನೂರು, ಹಂಝ ಕುಕ್ಕಾಜೆ, ಇಬ್ರಾಹಿಂ ಝುಹ್ರಿ, ರಝಾಕ್ ಮೇನಾಲ, ಮೊಯಿದಿನ್ ಕುಂಞಿ ಕರ್ನೂರು, ಮೊಯಿದು ಮುಸ್ಲಿಯಾರ್ ಮೀನಾವುರವರನ್ನು ಆರಿಸಲಾಯಿತು.
ಸಂಶುದ್ದೀನ್ ಹನೀಫಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ತ್ವಾಹ ಸ ಅದಿ ಧನ್ಯವಾದ ಅರ್ಪಿಸಿ ಮೂರು ಸ್ವಲಾತ್ ನೊಂದಿಗೆ ಸಭೆ ಮುಕ್ತಾಯ ಗೊಂಡಿತು.