ಜೇಸಿಐ ವಿಟ್ಲ ಆಶ್ರಯದಲ್ಲಿ ಬಂಟ್ವಾಳದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “ಪರೀಕ್ಷೆ ಒಂದು ಹಬ್ಬ, ಬನ್ನಿ ಸಂಭ್ರಮಿಸೋಣ” ಕಾರ್ಯಕ್ರಮ

ಜೇಸಿಐ ವಿಟ್ಲ ಆಶ್ರಯದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಬಂಟ್ವಾಳದಲ್ಲಿ “ಪರೀಕ್ಷೆ ಒಂದು ಹಬ್ಬ, ಬನ್ನಿ ಸಂಭ್ರಮಿಸೋಣ” ಕಾರ್ಯಕ್ರಮದಡಿಯಲ್ಲಿ ತರಬೇತಿಯನ್ನು ಫೆಬ್ರವರಿ 22ರಂದು ಶನಿವಾರ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಚ್. ನರಸಿಂಹ ಭಟ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಅತಿಥಿಯಾಗಿ ಆಗಮಿಸಿದ NSS ಅಧಿಕಾರಿ ಭಾಸ್ಕರ್ ಎಲ್. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಾಷ್ಟ್ರೀಯ ತರಬೇತುದಾರರದ Jc Sen. ದೀಪಕ್ ರಾಜ್ ತರಬೇತಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಕಾರ್ಯಕ್ರದಲ್ಲಿ ಜೆಸಿ ಸದಸ್ಯರಾದ ಜೆಸಿ ಮಹೇಶ್, ಜೆಸಿ ಸಂದೀಪ್ ಅಮೀನ್, ಜಿಪಿಟಿ ಕಾಲೇಜಿನ ಉಪನ್ಯಾಸಕ ಜೆಸಿ ವಿಕೆಶ್ ಮಾನ್ಯ ಉಪಸ್ಥಿತಿದ್ದರಿದ್ದರು. ಕಾರ್ಯಕ್ರಮ ಯಶಸ್ವಿಗೊಳಿಸಿದ ಜೆಸಿ ಬಂಧುಗಳಿಗೆ ಹಾಗೂ ಜಿಪಿಟಿ ಕಾಲೇಜಿನ ಎಲ್ಲಾ ಸಿಬ್ಬಂವರ್ಗದವರಿಗೆ ಜೆಸಿಐ ಸೆನೆಟರ್ ಅಧ್ಯಕ್ಷ ಸೌಮ್ಯಾ ಚಂದ್ರಹಾಸ್ ಧನ್ಯವಾದ ಸಮರ್ಪಿಸಿದರು.