ಕಿಲ್ಪಾಡಿ ಮುಲ್ಕಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಂತನ ದಿನಾಚರಣೆ

ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ – ಸಿಸ್ಟರ್ ರೀಟಾ ಶರಲ್
ಕಿಲ್ಪಾಡಿ ಮುಲ್ಕಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಂತನ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಗೈಡ್ಸ್ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಗೈಡ್ ವಿದ್ಯಾರ್ಥಿನಿಯಾಗಿರುವ ಅನಿಷ್ಕ ಎಲ್ಲರನ್ನು ಸ್ವಾಗತಿಸಿದರು. ಸ್ಕೌಟ್ ವಿದ್ಯಾರ್ಥಿಗಳಾಗಿರುವ ಇಸ್ಥಿಯಾಕ್ ಹಾಗೂ ರಿಯಾನ್ ಚಿಂತನ ದಿನಾಚರಣೆ ಮಹತ್ವವನ್ನು ತಿಳಿಸಿಕೊಟ್ಟರು.
ಪಾಠದ ಜೊತೆಗೆ ಕಬ್ ಬುಲ್ ಬುಲ್ ಹಾಗೂ ಸ್ಕೌಟ್ ಗೈಡ್ಸ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಬೇಕೆಂದು ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಸಿಸ್ಟರ್ ರೀಟಾ ಶರಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಳಿಕ ಎಲ್ಲಾ ಶಿಕ್ಷಕರ ಪೂರ್ಣ ಸಹಕಾರದೊಂದಿಗೆ ಬೆಂಕಿ ಇಲ್ಲದೆ ಅಡುಗೆ ತಯಾರಿಸುವುದು ಹಾಗೂ ಕಸದಿಂದ ರಸ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಶಾಲಾ ವತಿಯಿಂದ ಬಹುಮಾನವನ್ನು ವಿತರಿಸಿದರು. ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್ ಬುಲ್ಸ್ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸಿದರು. ಸ್ಕೌಟ್ ವಿದ್ಯಾರ್ಥಿ ತನುಷ್ ಕಾರ್ಯಕ್ರಮವನ್ನು ನಿರೂಪಿಸಿದರು.
ಚಿಂತನಾ ದಿನದ ಪ್ರಯುಕ್ತ ಮುಲ್ಕಿ ಪೊಲೀಸ್ ಠಾಣೆಗೆ ಭೇಟಿ ನೀಡಲಾಯಿತು. ಸಮಾಜದಲ್ಲಿ ಪೊಲೀಸರ ಪಾತ್ರ, ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದಿಂದ ಆಗುವ ದುಷ್ಪರಿಣಾಮಗಳನ್ನು, ಅಂತರ್ಜಾಲದ ಉಪಯೋಗ ಹಾಗೂ ದುರುಪಯೋಗಗಳನ್ನು ಬಹಳ ವಿವರಣಾತ್ಮಕವಾಗಿ ಪೊಲೀಸ್ ಅಧಿಕಾರಿ ಸಂಜೀವ ಮಾಹಿತಿಯನ್ನು ನೀಡಿದರು. ಗೈಡ್ ವಿದ್ಯಾರ್ಥಿನಿಯಾಗಿರುವ ಶನೂಮ್ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.