March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಬೆಳ್ತಂಗಡಿಯಲ್ಲಿ ಅತೀ ಬೇಡಿಕೆಯ ಡಿಪ್ಲೋಮಾ ಮತ್ತು ಪಿ.ಜಿ. ಡಿಪ್ಲೋಮಾ ಕೋರ್ಸುಗಳು – MIFSE ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಹೊಸ ಯೋಜನೆ”

ಬೆಳ್ತಂಗಡಿಯಲ್ಲಿ ಮೊಟ್ಟ ಮೊದಲ ಭಾರಿ ಮೈಫ್ಸ್ MIFSE (Mangalore Institute of Fire and Safety Engineering) ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಜಂಟಿ ಸಹಯೋಗದಲ್ಲಿ ಬೆಳ್ತಂಗಡಿಯಲ್ಲಿ ಡಿಪ್ಲೊಮಾ, ಪಿ.ಜಿ. ಡಿಪ್ಲೋಮಾ ಹಾಗೂ ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆ ಬೆಳ್ತಂಗಡಿಯ ಸಂತೆಕಟ್ಟೆ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭ.

ತಲ್ ಹತ್ ಎಂ.ಜಿ. ಸವಣಾಲು ಇವರು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ.) ಇದರ ಅಂಗ ಸಂಸ್ಥೆಯಾದ ಕಳೆದ ಹತ್ತು ವರ್ಷಗಳಿಂದ ತಾಂತ್ರಿಕ ವೃತ್ತಿಪರ ತರಬೇತಿಗಳನ್ನು ನೀಡುತ್ತಿರುವ ಹಾಗೂ ಬೆಳ್ತಂಗಡಿಯ ಮೊದಲ ಫ್ಯಾಷನ್ ಡಿಸೈನ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಂಸ್ಥೆ, ಮಾತ್ರವಲ್ಲ ಇದೀಗ ಮಂಗಳೂರಿನ ಮುಡಿಪು ಎಂಬಲ್ಲಿ ಇನ್ನೊಂದು ಶಾಖೆಯನ್ನು ತೆರೆದು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಂಸ್ಥೆಯಾಗಿದೆ ಅನುಗ್ರಹ ಟ್ರೈನಿಂಗ್ ಕಾಲೇಜ್.

MIFSE ಮತ್ತು ಅನುಗ್ರಹ ಎರಡು ವಿದ್ಯಾಸಂಸ್ಥೆಗಳ ಜಂಟಿ ಸಹಯೋಗ ಮತ್ತು ಯೋಜನೆಗಳೊಂದಿಗೆ ಬೆಳ್ತಂಗಡಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಯರಿಗೆ ಬೆಳ್ತಂಗಡಿಯಲ್ಲಿಯೆ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಬೆಳ್ತಂಗಡಿಯ ಸಂತೆಕಟ್ಟೆ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ಕಾಲೇಜು ಕ್ಯಾಂಪಸ್ ಆರಂಬಗೊಳ್ಳುತ್ತಿದೆ ಮತ್ತು ಪರಿಚಯಿಸುತಿದ್ದೇವೆ. ಅತ್ಯುತ್ತಮ ಆಧುನಿಕ ಮತ್ತು ಅತೀ ಬೇಡಿಕೆಗಳಿರುವ ಡಿಪ್ಲೋಮಾ ಮತ್ತು ಪಿ.ಜಿ. ಡಿಪ್ಲೋಮಾ ಹಾಗೂ ವೃತ್ತಿಪರ ತರಬೇತಿಗಳ ಶಿಕ್ಷಣ.

2025 ಜನವರಿ 02ರಂದು ಮಂಗಳೂರಿನ ಮೈಫ್ಸ್ (MIFSE) ಮಿನರ್ವ ಕಾಲೇಜು ಕ್ಯಾಂಪಸ್ ನಲ್ಲಿ ನಡೆದ ವಿಶೇಷ ಸಬೆಯಲ್ಲಿ ಮೈಫ್ಸ್ (MIFSE) ಮಿನರ್ವ ಕಾಲೇಜು ಇದರ ಚೇರ್ಮೆನ್ ಆಗಿರುವ ವಿನೋದ್ ಕೆ. ಜಾನ್ ಇವರು ಮತ್ತು ಸಂಸ್ತೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮನೋಜ್ ಪಿ.ವಿ. ಇವರುಗಳ ತಂಡದ ಸಭೆಯಲ್ಲಿ ಭಾಗವಹಿಸಿದ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ.) ಸಂಸ್ಥೆಯ ಸಂಸ್ಥಾಪಕ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಹಾಗೂ ಅನುಗ್ರಹ ಟ್ರೈನಿಂಗ್ ಕಾಲೇಜು ಪ್ರಾಂಶುಪಾಲರಾದ ಮಾತ್ರವಲ್ಲ ಶೈಕ್ಷಣಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾಳಜಿ ಹೊಂದಿದ ಹಾಗೂ ತಾಲೂಕಿನಾದ್ಯಂತ ಎಲ್ಲರಿಗೂ ಚಿರಪರಿಚಿತ ವ್ಯಕ್ತಿ ತಲ್ ಹತ್ ಎಂ.ಜಿ. ಸವಣಾಲು ಇವರು ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಆಡಳಿತ ಮಂಡಳಿ ನಿರ್ದೇಶಕರುಗಳಾದ ಅಬ್ದುಲ್ ಖಾದರ್ ನಾವೂರು ಹಾಗೂ ಮುಹಮ್ಮದ್ ತೌಸೀಫ್ ಕಕ್ಕಿಂಜೆ, ಜಂಟಿ ಸಭೆಯಲ್ಲಿ ಪಾಳ್ಗೊಂಡು ಎಲ್ಲಾ ರೀತಿಯ ಸಾದಕ ಬಾದಕಗಳನ್ನು ಚರ್ಚಿಸಿ ಬೆಳ್ತಂಗಡಿಯ ಅತೀ ಬೇಡಿಕೆಗೆ ಅನುಸಾರವಾಗಿ ವಿಶೇಷ ಮತ್ತು ಮಾನ್ಯ ಡಿಪ್ಲೋಮಾ ಕೋರ್ಸುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಜಂಟಿ ಕರಾರಿನೊಂದಿಗೆ ಸಂಸ್ಥೆ ಬೆಳ್ತಂಗಡಿಯಲ್ಲಿ ಅತೀ ಶೀಘ್ರದಲ್ಲಿಆರಂಭಗೊಳ್ಳಲಿದೆ ಎಂದು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸುತ್ತಿದ್ದೇವೆ.

ಇದೀಗ ಮತ್ತೆ ಬೆಳ್ತಂಗಡಿಯಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜು ಇದೇ ಶೈಕ್ಷಣಿಕ ವರ್ಷದಲ್ಲಿ ಹೊಸ ಮತ್ತು ಅಂತರರಾಷ್ಟ್ರೀಯ ಮಟ್ಟದ ಪದವಿ ಕೋರ್ಸು ಗಳೊಂದಿಗೆ ಪ್ರಾರಂಭಿಸುವ ತಯಾರಿ ಕೆಲಸಗಳು ನಡೆಯುತ್ತಿದೆ. ಬೆಳ್ತಂಗಡಿಗೆ ಪರಿಚಯಿಸುತ್ತಿರುವ ಡಿಪ್ಲೋಮಾ ಮತ್ತು ಪಿ.ಜಿ. ಡಿಪ್ಲೋಮಾ ಹಾಗೂ ವೃತ್ತಿಪರ ಕೋರ್ಸುಗಳ ವಿವರ ಇಲ್ಲಿದೆ.

ಡಿಪ್ಲೋಮಾ ಮತ್ತು ಪಿಜಿ ಡಿಪ್ಲೋಮಾ ಕೋರ್ಸುಗಳು, ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್, ಹೆಲ್ತ್ ಅಂಡ್ ಸೇಫ್ಟಿ ಇಂಜಿನಿಯರಿಂಗ್, ಏರೋನಾಟಿಕಲ್ ಮತ್ತು ಮರೈನ್ ಸೇಫ್ಟಿ ಇಂಜಿನಿಯರಿಂಗ್, ಲಾಜಿಸ್ಟಿಕ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಫ್ಯಾಷನ್ ಡಿಸೈನಿಂಗ್, ಎಸಿ ಮತ್ತು ರೆಫ್ರಿಜರೇಟರ್ ಮೆಕ್ಯಾನಿಕಲ್, ಟೀಚರ್ಸ್ ಟ್ರೈನಿಂಗ್ ಗಳಂತಹ ಅತೀ ಬೇಡಿಕೆಗಳ ಡಿಪ್ಲೋಮಾ ಪದವಿ ಕೋರ್ಸುಗಳನ್ನು ಬೆಳ್ತಂಗಡಿಯ ಕಾಲೇಜು ಕ್ಯಾಂಪಸ್ ನಲ್ಲೇ ಶಿಕ್ಷಣ ಪಡೆಯುವ ಅವಕಾಶ ಲಭಿಸಲಿದೆ ಎಂದು ಮಂಗಳೂರಿನ MIFSE ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಅಧ್ಯಕ್ಷ ಎಂ.ಜಿ. ತಲ್ಹತ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page