ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27ರಂದು ಕರ್ನಾಟಕ ಗಡಿನಾಡ ಉತ್ಸವ, ಸುಗಮ ಸಂಗೀತ ಗಾಯನ, ವಿಶ್ವ ರಂಗಭೂಮಿ ದಿನಾಚರಣೆ, ಬೆಂಗಳೂರು ಕನ್ನಡ ನಾಟಕೋತ್ಸವ

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ, ಕಾಸರಗೋಡು ಇದರ ಸಹಕಾರದಲ್ಲಿ ಕರ್ನಾಟಕ ರಾಜ್ಯದ ಹಿರಿಯ ನಾಟಕ ಮತ್ತು ಸಾಂಸ್ಕೃತಿಕ ಸಂಘಟನೆಯಾದ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ 44ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27ರಂದು ಅಪರಾಹ್ನ ಗಂಟೆ 4.30ರಿಂದ ಕರ್ನಾಟಕ ಗಡಿನಾಡ ಉತ್ಸವ, ವಿಶ್ವರಂಗ ಭೂಮಿ ದಿನಾಚರಣೆಯ ಅಂಗವಾಗಿ ಹಳೆ ನಾಟಕಗಳ ಸವಿನೆನಪು, ಬೆಂಗಳೂರು ಕನ್ನಡ ನಾಟಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ ನೇತೃತ್ವದಲ್ಲಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ. ತಿಮ್ಮಯ್ಯ ಬೆಂಗಳೂರು ಇವರ ಸಾರಥ್ಯದಲ್ಲಿ –
1) ರೂಪ ಕಲಾನಿಕೇತನ ಬೆಂಗಳೂರು ಅಭಿನಯಿಸುವ ಎನ್.ಎಸ್. ರಾವ್ ವಿರಚಿತ:- “ವರ ಭ್ರಷ್ಟ” ಕನ್ನಡ ನಾಟಕ, ನಿರ್ದೇಶನ:- ಡಿ. ವೆಂಕಟರಮಣಯ್ಯ (ಅಪ್ಪಾಜಿ)
2) ವಿ.ಕೆ.ಎಂ. ಅರ್ಪಿಸುವ ರಂಗಸೇತುವೆ ಟ್ರಸ್ಟ್ ಬೆಂಗಳೂರು ಅಭಿನಯಿಸುವ, ರಚನೆ:-ಡಾ II ಪ್ರಭು ಶಂಕರ ಅವರ “ಅಂಗುಲೀಮಾಲ” ಕನ್ನಡ ನಾಟಕ, ನಿರ್ದೇಶನ ಮತ್ತು ಸಂಗೀತ:- ಐ.ಟಿ.ಐ. ರಾಮಮೂರ್ತಿ
3) ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಅಭಿನಯಿಸುವ ಬೇಲೂರು ಕೃಷ್ಣಮೂರ್ತಿ ಅವರ “ಲಚ್ಚಿ” ಸಾಮಾಜಿಕ ನಾಟಕ, ನಿರ್ದೇಶನ:-ಸಿ.ಎಂ.ಟಿ.
4) ರಂಗ ಪರಿಸರ ಧಾರವಾಡ ಅಭಿನಯಿಸುವ ಖರೇ ಖರೇ ಸಂಗ್ಯಾ ಬಾಳ್ಯ – ನಾಟಕ ಹಾಗೂ ಭರತನಾಟ್ಯ, ನಿರ್ದೇಶನ:- ವಿಠಲ್ ಕೊಪ್ಪದ್
5) ಲಕ್ಷಣ ಸುವರ್ಣ ಬೆಂಗಳೂರು ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಸಾದರಪಡಿಸಲಿದ್ದಾರೆ.
ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ ಸಂಸ್ಥಾಪಕರಾದ ಸಿ.ಎಂ. ತಿಮ್ಮಯ್ಯ ಅವರು ಗಡಿನಾಡು, ಹೊರನಾಡು ಮತ್ತು ವಿವಿಧ ರಾಜ್ಯಗಳಲ್ಲಿ ವರ್ಷಂಪ್ರತಿ ನೂರಾರು ನಾಟಕ ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ಸಂಘಟಿಸಿ ಕರ್ನಾಟಕ ರಾಜ್ಯದಿಂದ ವಿವಿಧ ನಾಟಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳ ಕಾರ್ಯಕ್ರಮಗಳನ್ನು ತಮ್ಮ ನೇತೃತ್ವದಲ್ಲಿ ಸಾಂಸ್ಕೃತಿಕ ನಿಯೋಗದೊಂದಿಗೆ ಕೊಂಡೊಯ್ಯುತ್ತಿದ್ದಾರೆ. ಸಿ.ಎಂ. ತಿಮ್ಮಯ್ಯ ಅವರಿಗೆ 2025ರ ಅವಧಿಯ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಲ್ಪಡಲು ಈಗಾಗಲೇ ವಿವಿಧ ಸಂಘ-ಸಂಸ್ಥೆಗಳು ಶಿಫಾರಸ್ಸು ಮಾಡುತ್ತಿದ್ದಾರೆ. ವಿ.ಕೆ.ಎಂ. ಕಲಾವಿದರು ಬೆಂಗಳೂರು ಇದರ ಸ್ಥಾಪಕ – ಪ್ರಧಾನ ಕಾರ್ಯದರ್ಶಿ ಸಿ.ಎಂ. ತಿಮ್ಮಯ್ಯ ಬೆಂಗಳೂರು ಅವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರತಿಷ್ಠಿತ ಕೇರಳ ರಾಜ್ಯ ಮಟ್ಟದ ವಿಶ್ವರಂಗ ಭೂಮಿ ದಿನಾಚರಣೆ ಸಂದರ್ಭದಲ್ಲಿ ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಲ್ಲಿಸಿದ ಜೀವಮಾನದ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27ರಂದು ಕರ್ನಾಟಕ ಗಡಿನಾಡ ಉತ್ಸವ ವಿಶ್ವರಂಗ ಭೂಮಿ ದಿನಾಚರಣೆಯ ಅಂಗವಾಗಿ ಬೆಂಗಳೂರು ಕನ್ನಡ ನಾಟಕೋತ್ಸವ ಮತ್ತು 100 ಮಂದಿ ಗಾಯಕ, ಗಾಯಕಿಯರಿಂದ ಏಕಕಂಠಗಾಯನ ನೂರಾರು ಗಾಯಕ ಗಾಯಕಿಯರಿಂದ ಏಕಕಾಲದಲ್ಲಿ ಸಮೂಹ ಕನ್ನಡ ನಾಡ ಗೀತಾಗಾಯನ, ರೈತ ಗೀತಾಗಾಯನ, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಕನ್ನಡ ಚಿತ್ರ ಗೀತಾ ಗಾಯನವನ್ನು ಏರ್ಪಡಿಸಲಾಗಿದೆ. ಕಾಸರಗೋಡು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಗಾಯಕರು ಏಕಕಂಠ ಗಾಯನದಲ್ಲಿ ಜೊತೆಗೂಡಿ ಭಾಗವಹಿಸಲಿದ್ದಾರೆ.
ವಿಶೇಷ ಸೂಚನೆ:- ಕಾಸರಗೋಡು ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ – 2025 ಮಾರ್ಚ್ 27ರಂದು ಗುರುವಾರ ಬೆಳಿಗ್ಗೆ ಗಂಟೆ 6.30 ರಿಂದ ಸಂಜೆ ಗಂಟೆ 4.00ರ ವರೆಗೆ ಕಾರ್ಯಕ್ರಮಗಳು ನಡೆಯಲಿದೆ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ಮೈಸೂರು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮಂಗಳೂರು ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕೇರಳ ರಾಜ್ಯ ಕನ್ನಡ ದಾಸ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆಯಲಿದೆ. ಕೇರಳ ಮತ್ತು ಕರ್ನಾಟಕ ರಾಜ್ಯದ ನೂರಾರು ಕಲಾವಿದರು ರಂಗ ಭೂಮಿ ನಿರ್ದೇಶಕರು, ರಂಗ ಕಲಾವಿದರು, ಕವಿಗಳು, ಸಾಹಿತಿಗಳು, ಲೇಖಕರು, ಬರಹಗಾರರು, ಮಾಧ್ಯಮದವರು, ಪ್ರಕಾಶಕರು, ವಿದ್ವಾಂಸರು, ಸಾಂಸ್ಕೃತಿಕ, ಸಾಹಿತ್ಯ ಅಭಿಮಾನಿಗಳು ಭಾಗವಹಿಸಲಿದ್ದಾರೆ.ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಮತ್ತು ವಿವಿಧ ಕನ್ನಡ ಸಂಘಟನೆಗಳು ಸಹಕಾರ ನೀಡಲಿದೆ.
ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),
ಕನ್ನಡ ಗ್ರಾಮ,ಕನ್ನಡ ಗ್ರಾಮ ರಸ್ತೆ ಕಾಸರಗೋಡು -671121
ಮೊಬೈಲ್ :-9448572016, 9901951965