September 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ – ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ, ಸಂಚಾಲಕರಾಗಿ ಶಾಸಕ ಹರೀಶ್ ಪೂಂಜಾ

ತೆಕ್ಕಾರು: ಏಳುನೂರು ವರುಷಗಳ ಪುರಾತನವಾದ ದೇವಸ್ಥಾನ ಕಾರಣಾಂತರಗಳಿಂದ ಭೂಗರ್ಭದಲ್ಲಿ ಲೀನವಾಗಿ ಸಂಪೂರ್ಣ ಕುರುಹು ಇಲ್ಲವಾಗಿದ್ದ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಮುತುವರ್ಜಿ ವಹಿಸಿ ಜಮೀನಿನ ದಾಖಲೆ ಪತ್ರ ಮಾಡಿಸಿಕೊಟ್ಟಿದ್ದರಿಂದ ಪುರಾತನ ದೇವಾಲಯ ಇದ್ದ ಜಮೀನು ವಶಕ್ಕೆ ಪಡೆಯಲಾಗಿ, 2023 ಅಕ್ಟೋಬರ್ 30ರಂದು ಮಾಡವು ವೆಂಕಟ್ರಮಣ ಭಟ್ ದೈವಜ್ಞರ ನಿರ್ದೇಶನದಂತೆ 2023 ನವಂಬರ್ 5ರಂದು ಭೂಮಿಪೂಜೆ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿ ಭೂ ಉತ್ಖನನ ಮಾಡಿದಾಗ ಬಾವಿ ಇದ್ದ ಜಾಗದಲ್ಲಿ 15 ಅಡಿ ಆಳದಲ್ಲಿ ಭವ್ಯವಾದ ಶ್ರೀ ಗೋಪಾಲಕೃಷ್ಣ ದೇವರ ಭಿನ್ನವಾದ ದೇವರ ವಿಗ್ರಹ ಹಾಗೂ ಅವಶೇಷಗಳು ಪತ್ತೆಯಾಗಿ ಮಾಧ್ಯಮಗಳ ಮೂಲಕ ಜಗಜ್ಜಾಹೀರಾಗಿದೆ.

ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ 2023 ಎಪ್ರಿಲ್ 22ರಂದು ಶಾಸಕರಾದ ಹರೀಶ್ ಪೂಂಜಾ ಭಾಗವಹಿಸಿ ಶಿಲಾನ್ಯಾಸ ಜರುಗಿತು. 2024 ನವಂಬರ್ 13ರಂದು ನೂತನವಾಗಿ ನಿರ್ಮಿಸಿದ ಗರ್ಭಗುಡಿಯ ಷಢಾದಾರ ಹಾಗೂ ಗರ್ಭನ್ಯಾಸವನ್ನು ನಡೆಸಲಾಗಿ ಇದೀಗ ಪುನರುತ್ಥಾನದ ಕಾರ್ಯ ಭರದಿಂದ ಸಾಗುತ್ತಿದೆ. ಊರ ಹಾಗೂ ನೆರೆಯ ಗ್ರಾಮದ ದಾನಿಗಳ ನೆರವಿನಿಂದ ಈಗಾಗಲೇ ಗರ್ಭಗುಡಿಯ ಕೆಲಸ ಸಂಪೂರ್ಣಗೊಂಡಿದ್ದು ಇದೀಗ ಸುತ್ತು ಪೌಳಿಯ ಕೆಲಸ ಸಾಗುತ್ತಿದ್ದು ಏಪ್ರಿಲ್ 30ರಂದು ವಿಜೃಂಭಣೆಯಿಂದ ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದೆಂದು ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು.

ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ ಬರೋಡ, ಗೌರವಾಧ್ಯಕ್ಷರಾಗಿ ಗಣೇಶ ರಾವ್, ಸಂಸದ ಬ್ರಿಜೇಶ್ ಚೌಟ, ಯೋಗೀಂದ್ರ ಭಟ್ ಉಳಿ, ಕರುಣಾಕರ ಸುವರ್ಣ ಉಪ್ಪಿನಂಗಡಿ, ಸಂಚಾಲಕರಾಗಿ ಹರೀಶ್ ಪೂಂಜಾ, ಕಾರ್ಯಾಧ್ಯಕ್ಷರಾಗಿ ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ರೈ, ಕೋಶಾಧಿಕಾರಿಯಾಗಿ ಅಣ್ಣು ಪೂಜಾರಿ ಹಾಗೂ ವಿವಿಧ ಉಪ ಸಮಿತಿಗಳಿಗೆ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಸಮಾಲೋಚನಾ ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ನಾಗಭೂಷಣ್ ರಾವ್, ತುಕಾರಾಮ್ ನಾಯಕ್, ಶಶಿಧರ್ ಶೆಟ್ಟಿ ಬರೋಡ, ಗಣೇಶ ರಾವ್, ಹರೀಶ್ ಪೂಂಜಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಯಾನಂದ ಪೂಜಾರಿ ಹಾಗೂ ನವೀನ್ ನೆರಿಯ ಉಪಸ್ಥಿತರಿದ್ದರು.

You may also like

News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ–2026’ ಅನ್ನು ಸೆಪ್ಟೆಂಬರ್ 1ರಂದು
News

ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್

You cannot copy content of this page