ಪಂಚ ಗ್ಯಾರಂಟಿಗಳು ಜನಸಾಮಾನ್ಯರ ಬದುಕಿನ ಜೀವಾಳ – MLC ಐವನ್ ಡಿಸೋಜಾ

ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದ ರಾಜ್ಯ ಸರ್ಕಾರವು ಜನ ಸಾಮಾನ್ಯರ ಬದುಕಿನಲ್ಲಿ ಹಾಗೂ ಅರ್ಥಿಕ ಸ್ಸಿತಿಗತಿಗಳಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಪಂಚ ಗ್ಯಾರಂಟಿಗಳ ಮೂಲಕ ಅನೇಕ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ. ಯಾರಿಗೆ ಪಂಚ ಗ್ಯಾರಂಟಿಗಳು ಸಿಗಲಿಲ್ಲವೋ ಅವರನ್ನು ಹುಡುಕಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯ ನೇತೃತ್ವದಲ್ಲಿ ಪಂಚ ಗ್ಯಾರಂಟಿಗಳ ಯೋಜನೆಯ ಅನುಷ್ಠಾನದ ವಿಲೇವಾರಿ ಶಿಬಿರವನ್ನು ಆಯೋಜಿಸಿ ಆ ಮೂಲಕ ಯೋಜನೆಗಳನ್ನು ಪಡೆಯಲು ಅಸಾಧ್ಯವಾಗಿರುವವರ ಮನೆ ಬಾಗಿಲಿಗೆ ತೆರಳಿ ಈ ಯೋಜನೆಯ ಸದುಪಯೋಗವನ್ನು ಪಡೆಯುವಂತೆ ಮಾಡಬೇಕು ಎಂದು ಮಂಗಳೂರಿನ ಬೋಳಾರದ ಸರಕಾರಿ ಶಾಲೆಯಲ್ಲಿ ನಡೆದ ಪಂಚ ಗ್ಯಾರಂಟಿಗಳ ಶಿಬಿರವನ್ನು ಉದ್ಘಾಟಿಸಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾರವರು ಮಾತನಾಡಿದರು.
ಈ ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋರವರು ಉಪಸ್ಥಿತರಿದ್ದು ಈ ಪಂಚ ಗ್ಯಾರಂಟಿಗಳ ಯೋಜನೆಯ ಸದುಪಯೋಗವನ್ನು ಪತ್ರಿಯೊಬ್ಬರು ಪಡೆಯುವಂತಾಗಬೇಕು ಯಾರೊಬ್ಬರೂ ವಂಚಿತರಾಗಬಾರದು ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾಜಿ ಉಪಮೇಯರ್ ಕವಿತಾ ವಾಸು, ಸೌತ್ ಬ್ಲಾಕ್ ಅಧ್ಯಕ್ಷ ಸಲೀಂ, ಬಿ.ಇ.ಒ. ಈಶ್ವರ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸುಪರ್‌ವೈಸರ್ ಅನುಪಮ, ಮೆಸ್ಕಾಂ ಸೆಕ್ಷನ್ ಆಫೀಸರ್ ಸ್ಪರ್ಶ, ಅಲ್ಟೈನ್ ಡಿಕುನ್ಹಾ, ಶಾಲಿನಿ, ವಿದ್ಯಾ, ನೀತು, ಮುಸ್ಥಾಫ, ದಿನೇಶ್ ಮುಂತಾದವರು ಉಪಸ್ಥಿತರಿದ್ದರು.