ಸೂರಿಕುಮೇರು ಮಸೀದಿಯಲ್ಲಿ ಇಸಾಬಾ ಸ್ವಯಂ ಸೇವಕರಿಂದ ಸ್ವಚ್ಛತಾ ಕಾರ್ಯಕ್ರಮ

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ರಾಜ್ಯ ಸಮಿತಿಯ ನಿರ್ದೇಶನದಂತೆ ರಂಝಾನ್ ತಿಂಗಳನ್ನು ಸ್ವಾಗತಿಸುವ ಸಲುವಾಗಿ “ಮನೆ ಮನಗಳನ್ನು ಶುಚಿಗೊಳಿಸೋಣ ಪವಿತ್ರ ಮಾಸವನ್ನು ಸ್ವಾಗತಿಸೋಣ” ಎಂಬ ಧ್ಯೇಯ ವಾಕ್ಯದಡಿ ಸ್ವಚ್ಛತಾ ಕಾರ್ಯಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ಸೆಸ್ಸೆಫ್, ಎಸ್‌ವೈಎಸ್ ಸೂರಿಕುಮೇರು ಯುನಿಟ್ ವತಿಯಿಂದ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ಪರಿಸರದಲ್ಲಿ ಇಸಾಬಾ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು.
ಅಲ್ ಮುರ್ಶಿದ್ ಅಕಾಡೆಮಿ ಕೆದಿಲ ಇದರ ಮುಖ್ಯಸ್ಥರು ಹಾಗೂ ಸೂರಿಕುಮೇರು ಮಸೀದಿಯ ಅಧ್ಯಕ್ಷರೂ ಆದ ಬಹು| ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ದುಆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯೂಸುಫ್ ಹಾಜಿ, ಅಶ್ರಫ್ ಸಖಾಫಿ, ಹನೀಫ್ ಸಂಕ, ಅಝೀಂ ನೆಲ್ಲಿ, ಹಮೀದ್ ಮಾಣಿ, ಇಬ್ರಾಹಿಂ ಮುಸ್ಲಿಯಾರ್ ಮಾಣಿ, ಸೂರಿಕುಮೇರು ಇಲ್ಲಿಯವರಾದ ಅಬ್ದುಲ್ ಕರೀಂ, ಉಮ್ಮರ್ ಫಾರೂಕ್, ಇಮ್ರಾನ್, ಉಮ್ಮರ್ ಚಿಕನ್, ಹಂಝ, ಸಮೀರ್ ಲೈಮ್, ಹಾಫಿಳ್ ಮುರ್ಶಿದ್ ಸ್ವಚ್ಛತಾ ಕಾರ್ಯ ನಡೆಸಿದರು. ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.