ಕರಾವಳಿ ಸೇವಾ ಮಾಣಿಕ್ಯ (ರಿ.) ಮಂಗಳೂರು ತಂಡದಿಂದ ಮನೆ ದುರಸ್ಠಿಗೆ ದಾನಿಗಳಿಂದ ಧನ ಸಹಾಯ

ಮಂಗಳೂರಿನ ಪಂಪ್ವೆಲ್ ಶಿವಭಾಗ್ ಕುಕ್ಕುದಡಿ ಪ್ರದೇಶದ ಉಷಾ ಆರ್ಥಿಕವಾಗಿ ಹಿಂದುಳಿದ ಒಂಟಿ ಮಹಿಳೆ ತನ್ನವರೊಂದಿಗೆ ವಾಸಿಸುತ್ತಿದ್ದು ತನ್ನ ಮನೆಯ ಮೇಲ್ಛಾವಣಿ ಹದಗೆಟ್ಟು ಮಳೆಯ ನೀರು ಸೂರ್ಯನ ಕಿರಣ ನೇರವಾಗಿ ಮನೆಯ ಒಳಬಾಗಕ್ಕೆ ಸೋರುತ್ತಿತ್ತು. ಈ ಬಗ್ಗೆ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿ ಸಂಸ್ಥೆ ದಾನಿಗಳ ಸಹಾಯದಿಂದ ಮಹಿಳೆಗೆ ಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ವಸಂತ್ ಜೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ನಟರಾಜ್ ಪಚ್ಚನಾಡಿ, ಜೊತೆ ಕಾರ್ಯದರ್ಶಿ ಪ್ರಸಾದ್ ಕುಂಪಲ ಹಾಗೂ ಖಜಾಂಚಿ ಅರುಣ್ ಡಿಸೋಜ ಉಪಸ್ಥಿತರಿದ್ದರು.
ಹಣದ ವ್ಯವಸ್ಥೆಗೆ ಸಹಕರಿಸಿದ ಸಂಸ್ಥೆಯ ಸದಸ್ಯರಾದ ಮಹೇಶ್ ಮತ್ತು ರಿಶಾನ್ ಇವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಕೋರಲಾಯಿತು.