ಪಾಳ್ಯತ್ತಡ್ಕ ಮಹ್ಳರತ್ತುಲ್ ಬದ್ರಿಯಾ ಮಜ್ಲಿಸ್ ಹಾಗೂ ಹಾಫಿಳ್ ಮಸ್ಹೂದ್ ಸಖಾಫಿ ಉಸ್ತಾದ್ ಅನುಸ್ಮರಣೆ

ಹಾಫಿಳ್ ಮಸ್ಹೂದ್ ಸಖಾಫಿ ಉಸ್ತಾದ್ ಮಾದರಿ ಪುರುಷ – ಅಬ್ದುಲ್ ರಝಾಕ್ ಖಾಸಿಮಿ
ಈಶ್ವರ ಮಂಗಳ: ಹಾಫಿಳ್ ಮಸ್ಹೂದ್ ಸಖಾಫಿ ಉಸ್ತಾದ್ ಅಲ್ಲಾಹನನ್ನು ಭಯಪಟ್ಟು ಜೀವಿಸಿದ ಒಬ್ಬ ಮಹಾನ್ ವ್ಯಕ್ತಿ. ಅವರ ಜೀವನ ಶೈಲಿ ನಾವೂ ಅವಲಂಬಿಸಬೇಕು ಎಂದು KMJ ಪಾಳ್ಯತ್ತಡ್ಕ ಶಾಖಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಖಾಸಿಮಿ ರವರು KMJ SჄS SSF ಪಾಳ್ಯತ್ತಡ್ಕ ಶಾಖೆ ಸಂಘಟಿಸಿದ ಹಾಫಿಳ್ ಮಸ್ಹೂದ್ ಸಖಾಫಿ ಉಸ್ತಾದ್ ಅನುಸ್ಮರಣೆ ಹಾಗೂ ಮಹ್ಳರತ್ತುಲ್ ಬದ್ರಿಯಾ ಮಜ್ಲಿಸ್ ನ ಉದ್ಘಾಟನಾ ಭಾಷಣದಲ್ಲಿ ಕರೆ ನೀಡಿದರು.
SჄS ಪಾಳ್ಯತ್ತಡ್ಕ ಶಾಖೆ ಪ್ರಧಾನ ಕಾರ್ಯದರ್ಶಿ ಹುಸೈನ್ ಜೌಹರಿ ಸ್ವಾಗತಿಸಿ, ಉಮರ್ ಸ ಅದಿ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. KMJ ಪಾಳ್ಯತ್ತಡ್ಕ ಶಾಖಾ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ ರವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ KMJ ಈಶ್ವರ ಮಂಗಳ ಸರ್ಕಲ್ ಪ್ರಧಾನ ಕಾರ್ಯದರ್ಶಿ ಆದಂ ಹಾಜಿ.ಕೆ.ಪಿ ,SSF ಪುತ್ತೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಿನಾನ್ ಸ ಅದಿ, SჄS ಪಾಳ್ಯತ್ತಡ್ಕ ಶಾಖಾ ಅಧ್ಯಕ್ಷರಾದ ಅಬ್ಬಾಸ್ ರೋಯಲ್, ಇಬ್ರಾಹಿಂ ಮುಸ್ಲಿಯಾರ್ ಟಿ.ಪಿ., ಆದಂ ಮುಸ್ಲಿಯಾರ್, ಇಬ್ರಾಹಿಂ ಹಾಜಿ, ರಶೀದ್ ಹಿಮಮಿ ಸಖಾಫಿ, ಅಶ್ರಫ್ ಸ ಅದಿ, ಶಿಹಾಬ್ ಸಖಾಫಿ ಹಾಗೂ KMJ SჄS SSF SBS ನ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.