ಮಂಗಳೂರಿನ ಸಂತ ತೆರೆಜಾ ಚರ್ಚ್ ಇಲ್ಲಿಯ ವಾರ್ಷಿಕೋತ್ಸವವು ಚರ್ಚ್ ನ ತೆರೆದ ಮೈದಾನಿನಲ್ಲಿ ವಿಜೃಂಭಣೆಯಿಂದ ನಡೆಯಿತು

ಮಂಗಳೂರಿನ ಸಂತ ತೆರೆಜಾ ಚರ್ಚ್ ಇಲ್ಲಿಯ ವಾರ್ಷಿಕೋತ್ಸವವು ಚರ್ಚ್ ನ ತೆರೆದ ಮೈದಾನಿನಲ್ಲಿ ಮಾರ್ಚ್ 2ರಂದು ಆದಿತ್ಯವಾರ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ನಿಯೋಜಿತ ನಿರ್ದೇಶಕರಾದ ಹಾಗೂ ಫಾದರ್ ಮುಲ್ಲರ್ ಹೊಮಿಯೋಪತಿ ಆಸ್ಪತ್ರೆ ದೇರಲಕಟ್ಟೆ ಇದರ ಆಡಳಿತಾಧಿಕಾರಿಯಾದ ವಂದನೀಯ ಫಾದರ್ ಪಾವೊಸ್ತಿನ್ ಲೋಬೊ ಭಾಗವಹಿಸಿ ಚರ್ಚ್ ನ ಪ್ರತಿಯೊಂದು ಕುಟುಂಬವೂ ಬಹಳ ಪ್ರಾಮುಖ್ಯವಾಗಿದೆ ಪರಸ್ಪರ ಪ್ರೀತಿಯಿಂದ ಬಾಳಿದರೆ ಆ ಚರ್ಚ್ ನ ಏಳಿಗೆಯಾಗುತ್ತದೆ ಎಂದರು.
ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ಆಲ್ಬನ್ ಡಿಸೋಜರವರು ಮಾತನಾಡಿ ಪ್ರತಿ ಸದಸ್ಯರು ಒಟ್ಟಾಗಿ ಬಾಳಬೇಕು. ಪರಸ್ಪರ ಹೊಂದಾಣಿಕೆಯ ಬಾಳನ್ನು ಬಾಳಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದರು. ಚರ್ಚ್ ನ ವಾರ್ಡುಗಳ ಸದಸ್ಯರಿಂದ ಮನೋರಂಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅತಿಥಿಗಳಾಗಿ ಸ್ಥಳೀಯ ಕಾರ್ಪೊರೇಟರ್ ಭಾಸ್ಕರ್ ಕೆ. ಹಾಗೂ ಹ್ಯಾಂಡ್ ಮೇಡ್ ಆಫ್ ಜೀಸಜ್ ಇದರ ಪ್ರೊವಿನ್ಸಿಯಲ್ ಭಗಿನಿ ಬಿಂದು ಮೈಕಲ್ ಭಾಗವಹಿಸಿದ್ದರು.
ಚರ್ಚ್ ನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಒಂದು ವರ್ಷದ ಚರ್ಚ್ ನ ಚಟುವಟಿಕೆಯ ಬಗ್ಗೆ ಸಂಕ್ಷಿಪ್ತವಾಗಿ ವರದಿ ವಾಚಿಸಿದರು. ಎಲ್ಲಾ ಆಯೋಗಗಳ ಸಂಚಾಲಕ ಜೊಸ್ಲಿನ್ ಲೋಬೊ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಪೆಟ್ಸಿ ಮೊಂತೇರೊ ವಂದಿಸಿದರು. ಮರಿಯೋ ರೇಗೊ ಹಾಗೂ ಆಲಿಶ್ಯಾ ಮೊಂತೇರೊ ನಿರೂಪಿಸಿದರು. ಈ ಸಂದರ್ಭದಲ್ಲಿ ಚರ್ಚ್ ನ ಪೈಂಟಿಗ್ ಕೆಲಸವನ್ನು ಸುಸೂತ್ರವಾಗಿ ನಡೆಸಿಕೊಟ್ಟ ರೋಕಿ ಡಿಸೋಜರವರನ್ನು ಸನ್ಮಾನಿಸಲಾಯಿತು.