ಆಂಜೆಲೊರ್ ಧರ್ಮಕೇಂದ್ರದ ಸೆಕ್ಯುಲರ್ ಫ್ರಾನ್ಸಿಸ್ಕನ್ ಮೇಳದ ಸದಸ್ಯರಿಂದ ಮುಡಿಪು ಹಾಗೂ ಬಂಟ್ವಾಳ ಮೊಡಂಕಾಪು ಪುಣ್ಯಕ್ಷೇತ್ರಗಳಿಗೆ ಭೇಟಿ

ಮಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರ ಸೂಚನೆಯ ಮೇರೆಗೆ ಮಂಗಳೂರಿನ ಆಂಜೆಲೊರ್ ಕ್ರೈಸ್ತ ಧರ್ಮಕೇಂದ್ರದ ಸೆಕ್ಯುಲರ್ ಫ್ರಾನ್ಸಿಸ್ಕನ್ ಮೇಳದ 37 ಸದಸ್ಯರು ಫೆಬ್ರವರಿ 26ರಂದು ಬುಧವಾರ ಮುಡಿಪು ಹಾಗೂ ಬಂಟ್ವಾಳ ಮೊಡಂಕಾಪು ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡರು. ಆರಾಧನೆ, ಕೀರ್ತನೆ ಮತ್ತು ಪವಿತ್ರ ಬೈಬಲ್ ವಾಚನದೊಂದಿಗೆ ಯಾತ್ರೆ ಆರಂಭಗೊಂಡಿತು. ಮುಡಿಪು ಪುಣ್ಯಕ್ಷೇತ್ರದಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾದರ್ ಆಸಿಸಿ ರೆಬೆಲ್ಲೊರವರು ಯಾತ್ರಾರ್ಥಿಗಳಿಗಾಗಿ ದಿವ್ಯ ಬಲಿಪೂಜೆ ಅರ್ಪಿಸಿದರು. ದೇವರ ವಾಕ್ಯದ ವಿವರ ನೀಡಿ ಪರಮ ಪ್ರಸಾದ ನೀಡಿದರು.
ನಂತರ ಮೊಡಂಕಾಪು ಬಂಟ್ವಾಳ ಪುಣ್ಯಕ್ಷೇತ್ರದ ಬಾಲಯೇಸುವಿನ ದೇವಾಲಯದಲ್ಲಿ ಧರ್ಮಗುರು ಅತೀ ವಂದನೀಯ ಫಾದರ್ ವಲೇರಿಯನ್ ಡಿಸೋಜರವರ ಮಾರ್ಗದರ್ಶನದಲ್ಲಿ ಆರಾಧನೆ, ಧನ್ಯವಾದ ಸಮರ್ಪಣೆಯ ಬಳಿಕ ದಿವ್ಯ ಪರಮ ಪ್ರಸಾದದ ಆಶೀರ್ವಚನ ಪಡೆದು ಯಾತ್ರಿಕರು ಭಕ್ತಿಗೀತೆ, ಜಪಮಾಲೆ, ಪಠಣವು ಸಂಜೆ 4ಗಂಟೆಗೆಯ ವರೆಗೆ ಏರ್ಪಡಿಸಲಾಗಿತ್ತು. ಅಧ್ಯಕ್ಷೆ ಭಗಿನಿ ಸಿಂತಿಯಾ ರೊಜಾರಿಯೊರವರ ಮುತುವರ್ಜಿಯಲ್ಲಿ ಈ ಯಾತ್ರೆ ನಡೆಯಿತು.