November 9, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೊಂಕಣ್ ಮೈನಾ ಮೀನಾ ರೆಬಿಂಬಸ್ ಇವರಿಗೆ ‘ಮಿಲೇನಿಯಮ್ ಮೈನಾ’ ಬಿರುದು ಪ್ರದಾನ

ಮಂಗಳೂರು:  ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯದೆ, ಸಂಗೀತದ ಮೂಲಕ ಸಮಾಜ ಸೇವೆ ಮಾಡಿದ ಲಿಯೋ ರಾಣಿಪುರಾ ತಮ್ಮ ಗಾಯನದ ಮೂಲಕ ಎಲ್ಲರ ಹೃದಯಗಳನ್ನು ಗೆದ್ದಿದ್ದು ಶ್ಲಾಘನೀಯ ಎಂದು ಇನ್ಫೆಂಟ್ ಮೇರಿ ದೇವಾಲಯ ಬಜ್ಜೋಡಿಯ ಪ್ರಧಾನ ಧರ್ಮ ಗುರುಗಳಾದ ವಂದನೀಯ ಫಾದರ್ ಡೊಮಿನಿಕ್ ವಾಸ್ ಹೇಳಿದರು. ಸಂದೇಶ ಕಲಾ ಕೇಂದ್ರ ಬಜ್ಜೋಡಿ ಮಂಗಳೂರು ಸಭಾಗೃಹದಲ್ಲಿ ನಡೆದ ಲಿಯೋ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಮ್ಯೂಸಿಕಲ್ ಧಮಾಕಾ 99 ಮ್ಯೂಸಿಕಲ್ ಕನ್ಸರ್ಟ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭ  ಸಂಗೀತ ಕ್ಷೇತ್ರದಲ್ಲಿ ಸಾವಿರಾರು ಹಾಡುಗಳನ್ನು ರಚಿಸಿ, ಹಾಡಿ ಲಕ್ಷಾಂತರ ಜನರ ಮನ ಗೆದ್ದ ಅಂತರಾಷ್ಟ್ರೀಯ ಪ್ರಸಿದ್ಧ ಗಾಯಕಿ ‘ಕೊಂಕಣ್  ಮೈನಾ’ ಮೀನಾ ರೆಬಿಂಬಸ್ ಇವರಿಗೆ  ‘ಮಿಲೇನಿಯಮ್ ಮೈನಾ’  ಬಿರುದು ನೀಡಿ ಗೌರವಿಸಲಾಯಿತು.

ಈ ಸಂದರ್ಭ ದೆಹಲಿಯ ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ಇದರ  ನಿರ್ದೇಶಕರು ಮತ್ತು ಪಿಟಿಐ ಕನ್ಸಲ್ಟೆಂಟ್ ಬಾಂಬೆ ಮಾಲಕರಾದ ಜೋಸೆಫ್ ಎಲಿಯಾಸ್ ಮೀನೆಜಸ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷರು ರೋನ್ಸ್  ಬಂಟ್ವಾಳ್, ಸೂಕ್ತ ಮೀಡಿಯಾ ನೆಟ್ ವರ್ಕ್ ವ್ಯವಸ್ಥಾಪಕ ನಿರ್ದೇಶಕ ಜೋನ್ ವಿಲ್ಸನ್ ಲೋಬೊ, ಮಂಗಳೂರಿನ ಖ್ಯಾತ ಕೊಂಕಣಿ ನಾಟಕ ಬರಹಗಾರ, ನಿರ್ದೇಶಕ, ನಟ, ಕಾಮಿಡಿ ಕಿಂಗ್ ಪ್ರಸಿದ್ಧರಾದ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯ, ಲಿಯೋ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಟ್ರಸ್ಟಿ ಹಾಗೂ ಸ್ಥಾಪಕ ಲಿಯೋ ರಾಣಿಪುರ, ಸಹ ಸಂಚಾಲಕ  ಸ್ಟಾನ್ಲಿ ಬಂಟ್ವಾಳ್, ಜೊತೆ ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್, ಕೋಶಾಧಿಕಾರಿ ರೋಷನ್ ಕ್ರಾಸ್ತಾ, ಟ್ರಸ್ಟಿ ಮೇಬುಲ್ ಡಿಕುನ್ಹಾ ಮತ್ತಿತರರು  ಉಪಸ್ಥಿತರಿದ್ದರು.

ಕಾರ್ಯದರ್ಶಿ ಲಿ‍ಸ್ಟನ್ ಡಿಸೋಜ ಸ್ವಾಗತಿಸಿ ರವಿರಾಜ್ ಡಿಸೋಜ ವಂದಿಸಿದರು. ರೋಷನ್ ಕ್ರಾಸ್ತಾ ಮತ್ತು ಪ್ರೀತಮ್  ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಸಂಗೀತ ರಸಮಂಜರಿ ಕಾರ್ಯಕ್ರಮವು ಸರಿಸುಮಾರು 10 ಕಲಾವಿದರಿಂದ ನಡೆಯಿತು.

You may also like

News

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಡಳಿತ ಮಂಡಳಿ ಚುನಾವಣೆ 2025-28

ನವಂಬರ್ 9ರಂದು ನಾಳೆ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಸಿದ್ಧ ಘಟಾನುಘಟಿಗಳ ನಡುವೆ ನಡೆಯಲಿದೆ ಫೈಟ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ
News

ಸೈಂಟ್ ತೆರೆಸಾ ಆಫ್ ಲಿಶುಕ್ಸ್ ರವರ ಸಂತ ಪದವಿಯ ಶತಮಾನೋತ್ಸವ

ನಾಳೆ ನವೆಂಬರ್ 9ರಂದು ಬೆಂದೂರ್ ಚರ್ಚ್ ಇಲ್ಲಿ ದಿವ್ಯ ಬಲಿಪೂಜೆ   ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರ ನೇತೃತ್ವ ಸೈಂಟ್ ತೆರೆಸಾ ಆಫ್

You cannot copy content of this page