ವಿಟ್ಲ ವಲಯದ ಮಾನೆಲಾ ಧರ್ಮಕೇಂದ್ರದಲ್ಲಿ ವಿಶ್ವ ಮಹಿಳಾ ದಿನ ಆಚರಣೆ

ವಿಟ್ಲ ವಲಯದ ಕ್ರಿಸ್ತರಾಜ ದೇವಾಲಯ ಮನೆಲಾ ಇಲ್ಲಿ ಮಾರ್ಚ್ 2ರಂದು ಆದಿತ್ಯವಾರ ವಿಶ್ವ ಮಹಿಳಾ ದಿನವನ್ನು ಆಚರಿಸಲಾಯಿತು.
ಚರ್ಚ್ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿಸ್ಲಸ್ ರೊಡ್ರಿಗಸ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರಿನ ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಫ್ಲಾವಿಯ ಆಲ್ಬುಕರ್ಕ್ ಆಗಮಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಆಧುನಿಕ ಯುಗದಲ್ಲಿ ಮಹಿಳೆಯರು ಹಿಂದಕ್ಕೆ ಹೋಗದೆ ಪ್ರತಿಯೊಂದರಲ್ಲಿಯೂ ಮುಂದೆ ಬಂದು ತಮ್ಮ ಹಕ್ಕುಗಳಿಗೋಸ್ಕರ ಧ್ವನಿಯೆತ್ತುವಂತೆ’ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ರೋಷನ್ ಟೆಲ್ಲಿಸ್, ಕಾರ್ಯದರ್ಶಿ ಫಿಲೋಮಿನಾ ಡಿಸೋಜ ಪಲಸ್ತಡ್ಕ, ಆಯೋಗಗಳ ಸಂಯೋಜಕ ವಿಕ್ಟರ್ ಕುಟಿನ್ಹೊ, ಧರ್ಮ ಭಗಿನಿಯರು, ಮಾನೆಲ ಘಟದ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಮೇರಿ ಡಿಸೋಜಾ, ಕಾರ್ಯದರ್ಶಿ ಜ್ಯೋತಿ ಡಿಸೋಜಾ ಹಾಗೂ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಮಹಿಳೆಯರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಲೀಮಾ ಟೆಲ್ಲಿಸ್ ಸ್ವಾಗತಿಸಿ, ಜ್ಯೋತಿ ಡಿಸೋಜ ವಂದಿಸಿದರು. ಉಪನ್ಯಾಸಕಿ ಶೈಲಾ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.