April 20, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬ್ರಹ್ಮಾವರದ ಲ್ಲಿ ಎಂ.ಸಿ.ಸಿ ಬ್ಯಾಂಕಿನ ATM ಉದ್ಘಾಟನೆ

ಬ್ರಹ್ಮಾವರ ಶಾಖೆಯು ಆರಂಭಗೊoಡು ಒಂದು ವರ್ಷ ಪೂರ್ಣಗೊಂಡ ಸಂದರ್ಭ ವಾರ್ಷಿಕೋತ್ಸವ, ರೂಪಾಯಿ 10 ಕೋಟಿ ವ್ಯವಹಾರದ ಸಾಧನೆ ಮತ್ತು ನೂತನ ATM ಉದ್ಘಾಟಣಾ ಸಮಾರಂಭ 2025 ಮಾರ್ಚ್ 3ರಂದು ಬ್ರಹ್ಮಾವರ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಂ.ಸಿ.ಸಿ. ಬ್ಯಾಂಕಿನ ೮ನೇ ಎಟಿಎಮ್ ಅನ್ನು ಬ್ರಹ್ಮಾವರ ಶಾಖೆಯಲ್ಲಿ ಬ್ರಹ್ಮಾವರ ಕ್ಯಾಥೋಲಿಕ್ ಕ್ರೇಡಿಟ್ ಸಹಕಾರ ಸಂಘದ ಅಧ್ಯಕ್ಷರಾದ ಜೆರಾಲ್ಡ್ ಗೊನ್ಸಾಲ್ವಿಸ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೋಲಿ ಫ್ಯಾಮಿಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಜೋನ್ ಫೆರ್ನಾಂಡಿಸ್ ಆಶೀರ್ವದಿಸಿದರು. ಎಟಿಎಮ್ ಯಂತ್ರವನ್ನು ಎ ಎಸ್ ಯೂಸ್ಡ್ ಕರ‍್ಸ್ ಇದರ ಮ್ಹಾಲಕರಾದ ಸೌರಬ್ ಶೆಟ್ಟಿ ಇವರು ಎಟಿಎಮ್‌ನಿಂದ ಹಣ ತೆಗೆಯುವ ಮೂಲಕ ಉದ್ಘಾಟಿಸಿದರು. ಉದ್ಯಮಿ ಶಂಶುದ್ದಿನ್ ಮೋಯ್ದಿನ್ ಮುಖ್ಯ ಅತಿಥಿಯಾಗಿದ್ದರು ಹಾಗೂ ಶಾಖಾ ನಿರ್ದೇಶಕ ಎಲ್‌ರೋಯ್ ಕಿರಣ್ ಕ್ರಾಸ್ಟೊ ಸಮಾರಂಭದಲ್ಲಿ ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬ್ರಹ್ಮಾವರದಲ್ಲಿ ಶಾಖೆಯು ಆರಂಭಗೊಳ್ಳಲು ಹಾಗೂ ರೂಪಾಯಿ 10 ಕೋಟಿ ವ್ಯವಹಾರ ದಾಖಲಿಸಲು ಸಹಕರಿಸಿದ ಬ್ರಹ್ಮಾವರದ ಗ್ರಾಹಕರಿಗೆ ವಂದನೆಗಳನ್ನು ಸಲ್ಲಿಸಿದರು. ಬ್ರಹ್ಮಾವರದ ಜನತೆ ನೀಡಿದ ಸಹಕಾರದಿಂದ ಬ್ರಹ್ಮಾವರ ಶಾಖೆಯು ಈ ಸಾಧನೆ ಮಾಡಲು ಸಾಧ್ಯವಾಯಿತು.

ಶಾಖೆಯಲ್ಲಿ ಉತ್ತಮ ಸೇವೆ ಮತ್ತು ವಿಶ್ವಾಸರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾದರೆ ಮಾತ್ರ ಸಾಧನೆ ಮಾಡಲು ಸಾದ್ಯ. ಇದಕ್ಕಾಗಿ ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಮುಂದಿನ ವರ್ಷ 30 ಕೋಟಿ ವ್ಯವಹಾರವನ್ನು ದಾಖಲಿಸಿ, ಶಾಖೆಯು ಲಾಭ ಗಳಿಸುವಲ್ಲಿ ಗ್ರಾಹಕರು ಸಹಕರಿಸಲು ಮತ್ತು ಶಾಖೆಯ ಸಿಬ್ಬಂದಿ ಶ್ರಮಿಸಲು ಕರೆ ಕೊಟ್ಟರು. ಕಳೆದ ವರ್ಷ ಶಾಖೆಯ ಉದ್ಘಾಟನಾ ಸಂದರ್ಭದಲ್ಲಿ ಆಶೀರ್ವಚಿಸಿದ ಧರ್ಮಗುರುಗಳಾದ ವಂದನೀಯ ಫಾದರ್ ಜೋನ್ ಫೆರ್ನಾಂಡಿಸ್ ಇವರಿಗೆ ವಂದನೆಗಳನ್ನು ಸಲ್ಲಿಸಿದರು.

ನೂತನ ಎಟಿಎಮ್‌ನ್ನು ಆಶೀರ್ವಚಿಸಿ ಮಾತನಾಡಿದ ವಂದನೀಯ ಫಾದರ್ ಜೋನ್ ಫೆರ್ನಾಂಡಿಸ್ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ಶುಭ ಹಾರೈಸಿದರು. ಎಟಿಎಮ್ ಉಧ್ಘಾಟಿಸಿ ಮಾತನಾಡಿದ ಜೆರಾಲ್ಡ್ ಗೊನ್ಸಾಲ್ವಿಸ್ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಇವರ ಮುಂದಾಳುತ್ವದ ಆಡಳಿತ ಮಂಡಳಿಯ ಇತ್ತೀಚಿನ ಸಾಧನೆಯನ್ನು ಮತ್ತು ಫಲಿತಾಂಶದ ಬಗ್ಗೆ ಶ್ಲಾಘಿಸಿದರು. ಶಾಖೆಯು ಒಂದು ವರ್ಷದಲ್ಲಿಯೇ ರೂಪಾಯಿ 10 ಕೋಟಿ ಸಾಧನೆಗೈದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ನೂತನ ತಂತ್ರಜ್ಞಾನದಲ್ಲಿ ಹಿಂದೆ ಬಿದ್ದರೆ ಪ್ರಗತಿ ಅಸಾದ್ಯ, ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಿದ್ದರಿಂದ ಬ್ಯಾಂಕ್ ಪ್ರಗತಿಯಲ್ಲಿ ಮುಂದೆ ಇದೆ. ಬ್ಯಾಂಕ್ ತಂತ್ರಜ್ಞಾನದಲ್ಲಿ ಮೂಂಚೂಣಿಯಲ್ಲಿದ್ದು ಮುಂದೆಯೂ ಉತ್ತಮ ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು.

ಶಾಖೆಯ ವಾರ್ಷಿಕೋತ್ಸವ ಸಂದರ್ಭವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ರೂಪಾಯಿ 10 ಕೋಟಿ ವ್ಯವಹಾರದ ಸಾಧನೆ ಮಾಡಿದ ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಇವರನ್ನು ಸನ್ಮಾನಿಸಲಾಯಿತು. ಬ್ರಹ್ಮಾವರ ಕ್ಯಾಥೋಲಿಕ್ ಕ್ರೇಡಿಟ್ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಜೆರಾಲ್ಡ್ ಗೊನ್ಸಾಲ್ವಿಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿರ್ದೇಶಕರಾದ ಡಾ. ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಮಹಾಪ್ರಬಂಧಕ ಸುನಿಲ್ ಮಿನೆಜಸ್ ವಂದಿಸಿದರು. ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ನಿರೂಪಿಸಿದರು. ಉಡುಪಿ ಶಾಖಾ ವ್ಯವಸ್ಥಾಪಕ ಪ್ರದೀಪ್ ಡಿಸೋಜ, ಶಿರ್ವ ಶಾಖಾ ವ್ಯವಸ್ಥಾಪಕಿ ಅನ್ಸಿಲ್ಲಾ ಫೆರ್ನಾಂಡಿಸ್, ಕುಂದಾಪುರ ಶಾಖಾ ವ್ಯವಸ್ಥಾಪಕಿ ಜ್ಯೋತಿ ಬಾರೆಟ್ಟೊ ಹಾಗೂ ಗ್ರಾಹಕರು ಹಾಜರಿದ್ದರು.

You may also like

News

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಶೃದ್ಧಾಭಕ್ತಿಯಿಂದ ಶುಭ ಶುಕ್ರವಾರ ಆಚರಣೆ

ಆಧುನಿಕ ಜೀವನದಲ್ಲಿ ನಾವು ಕ್ರಿಸ್ತನಿಗೆ ಯಾವ ರೀತಿಯ ಶಿಲುಬೆಯನ್ನು ನೀಡುತ್ತೇವೆ – ಫಾದರ್ ವಿಜಯ್ ಮಚಾದೊ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಇಂದು ಎಪ್ರಿಲ್ 18ರಂದು
News

ಯೇಸುವಿನಂತೆ ನಮ್ರತೆ ಹಾಗೂ ಪ್ರೀತಿಯಿಂದ ಸೇವೆ ಸಲ್ಲಿಸಲು ಕರೆ ನೀಡಿದ ಮಂಗಳೂರು ಬಿಷಪ್

ಇಂದು ಕಾಸರಗೋಡಿನ ಬೋವಿಕ್ಕಾನಾ ಚರ್ಚ್ ನಲ್ಲಿ ಬಿಷಪ್ ರಿಂದ ಶುಭ ಶುಕ್ರವಾರ ಹಾಗೂ ನಾಳೆ ಶನಿವಾರ ಮಂಗಳೂರಿನಲ್ಲಿರುವ ರೊಸಾರಿಯೊ ಕಥೆದ್ರಲ್ ನಲ್ಲಿ ಈಸ್ಟರ್ ಹಬ್ಬದ ಆಚರಣೆ ಪರಸ್ಪರ

You cannot copy content of this page