ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಇದರ ಸದಸ್ಯತ್ವ ನವೀಕರಣ/ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ – ಮಾರ್ಚ್ 15 ಕೊನೆಯ ದಿನ

ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣಕ್ಕೆ ಮತ್ತು ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು 2025 ಮಾರ್ಚ್ 15 ಕೊನೆಯ ದಿನವಾಗಿರುತ್ತದೆ.
ಸದಸ್ಯರು ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ 2 ಭಾವಚಿತ್ರಗಳೊಂದಿಗೆ 500 ರೂಪಾಯಿ ಸದಸ್ಯತ್ವ ಶುಲ್ಕವನ್ನು ಸಂಘದ ಕಚೇರಿ (ಮಂಗಳೂರು ಪ್ರೆಸ್ ಕ್ಲಬ್)ನಲ್ಲಿ ಪಾವತಿಸಿ ಸದಸ್ಯತ್ವ ನವೀಕರಿಸಬಹುದಾಗಿದೆ.
ಮಾರ್ಚ್ 15 ಸಂಜೆ 4 ಗಂಟೆಯ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸಂಘದ ಸದಸ್ಯರಾಗಿರುವ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಜಿಲ್ಲಾ ಸಂಘದ ಅಧೀನದಲ್ಲಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕವೇ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಅರ್ಜಿಯಲ್ಲಿ ಸೂಚಕರ ಮತ್ತು ಅನುಮೋದಕರ ಸಹಿ ಮತ್ತು ವಿಳಾಸ ಕಡ್ಡಾಯ. ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಗದಿತ ನಮೂನೆಯ ಅರ್ಜಿ ಫಾರಂಗಳು ಸಂಘದ ಕಚೇರಿಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಘದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.