April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫಾದರ್ ಮುಲ್ಲರ್ – “ಜೆನೆಸಿಸ್” ಫರ್ಟಿಲಿಟಿ ಕ್ಲಿನಿಕ್ ಯಶಸ್ಸಿನ ಕುರಿತು ಪತ್ರಿಕಾ ಗೋಷ್ಠಿ

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು 1985ರಿಂದ ಹೋಮಿಯೋಪಥಿ ಚಿಕಿತ್ಸೆ ನೀಡುತ್ತಿದ್ದು,  ನಿರಂತರವಾಗಿ ವೈದ್ಯಕೀಯ, ಮಕ್ಕಳ, ಸ್ತ್ರೀರೋಗ, ಶಸ್ತ್ರಚಿಕಿತ್ಸೆ, ಚರ್ಮರೋಗ, ಮನೋರೋಗ ಚಿಕಿತ್ಸೆಗಳನ್ನೊಳಗೊಂಡ ಹೊರರೋಗಿ ವಿಭಾಗ, 24×7 ಒಳರೋಗಿ ವಿಭಾಗ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ,  ಫಿಸಿಯೋಥೆರಪಿ, ಎಕ್ಸ್-ರೇ ಮತ್ತು ಪ್ರಯೋಗಾಲಯ ಸೌಲಭ್ಯ, ಸ್ಪೆಷಾಲಿಟಿ ಕ್ಲಿನಿಕ್, ಆನ್‌ಲೈನ್ ಸಮಾಲೋಚನೆ,  ಆರೋಗ್ಯ ತಪಾಸಣೆ ಯೋಜನೆ, ಉಪಶಾಮಕ ಆರೈಕೆ ಕೇಂದ್ರದೊಂದಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಾ ಇದೆ.

8 ಮಾರ್ಚ್ 2022ರಂದು ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಅಂದಿನ ಆಡಳಿತಾಧಿಕಾರಿಗಳಾದ ವಂದನೀಯ ಫಾದರ್ ರೋಷನ್ ಕ್ರಾಸ್ತಾರವರ ನೇತೃತ್ವದಲ್ಲಿ  “ಜೆನೆಸಿಸ್ – ಫರ್ಟಿಲಿಟಿ ಕ್ಲಿನಿಕ್”ಅನ್ನು ಆರಂಭಿಸುವ ಮೂಲಕ ಸಂತಾನ ಭಾಗ್ಯ ಲಭಿಸದೆ ಇರುವ ದಂಪತಿಗಳ ಕನಸ್ಸನ್ನು ನನಸಾಗಿಸಲು ಒಂದು ಹೊಸ ಹೆಜ್ಜೆಯನ್ನು  ಮುಂದಿಟ್ಟಿತು.

ಅತ್ಯುತ್ತಮ ಹಾಗೂ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತಿರುವ ಈ ಫರ್ಟಿಲಿಟಿ ಕ್ಲಿನಿಕ್ 3 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಆರೈಕೆ ಮತ್ತು ಚಿಕಿತ್ಸೆಯೊಂದಿಗೆ ಗರ್ಭ ಧರಿಸಿದ ಫಲಾನುಭವಿಗಳೊಂದಿಗೆ ಯಶೋಗಾಥೆಗಳನ್ನು ಆಚರಿಸುತ್ತಿದ್ದೇವೆ.

ಫರ್ಟಿಲಿಟಿ ಕ್ಲಿನಿಕ್ ನಮ್ಮ ಉದ್ದೇಶ :

  • ಸಂತಾನೋತ್ಪತ್ತಿ ಆರೈಕೆಯನ್ನು ಸಮಗ್ರವಾಗಿ ಒದಗಿಸುವುದು – ಸಮಯೋಚಿತ ರೋಗನಿರ್ಣಯ, ಜೀವನ ಶೈಲಿಯ ಮಾರ್ಪಾಡು, ಸಲಹೆ ಮತ್ತು ಸಮಾಲೋಚನೆಯೊಂದಿಗೆ ತನಿಖೆಗಳ ಮೂಲಕ ಸಮಗ್ರ ಆರೋಗ್ಯ ರಕ್ಷಣೆಯನ್ನು ನೀಡುವುದು.
  • ಜಾಗೃತಿ ಮತ್ತು ಶಿಕ್ಷಣವನ್ನು ಹೆಚ್ಚಿಸುವುದು – ಸಮರ್ಥ ಮತ್ತು ಅನುಭವಿ ವೈದ್ಯರುಗಳಿಂದ ದಂಪತಿಗಳಿಗೆ ಹೋಮಿಯೋಪಥಿ ಚಿಕಿತ್ಸೆಯ ಮೂಲಕ ವ್ಯಕ್ತಿಗತ ಆರೈಕೆಯಿಂದ ತಾವು ಪೋಷಕರಾಗುವ ಕನಸ್ಸನ್ನು ನನಸಾಗಿಸಲು ಸಮುದಾಯಕ್ಕೆ ಶಿಕ್ಷಣ ನೀಡುವುದು.

‘ಜೆನೆಸಿಸ್ ಫರ್ಟಿಲಿಟಿ ಕ್ಲಿನಿಕ್’ ಕಾಲಿಡುವ ಪ್ರತಿಯೊಂದು ದಂಪತಿ ನಮ್ಮ ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲಿ ವ್ಯಕ್ತಿಗತ ಆರೈಕೆಯೊಂದಿಗೆ ಹೋಮಿಯೋಪಥಿ ಚಿಕಿತ್ಸೆಯನ್ನು ಪಡೆಯುತ್ತಾರೆ. ಈ 91 ನೋಂದಾಯಿತ ದಂಪತಿಗಳು ಮತ್ತು 43 ಫಲಾನುಭವಿ ದಂಪತಿಗಳೊಂದಿಗೆ ಫರ್ಟಿಲಿಟಿ ಕ್ಲಿನಿಕ್‌ನ ಯಶೋಗಾಥೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು ಡಾ. ವಿಲ್ಮಾ ಡಿಸೋಜರವರ ನೇತ್ರತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಈ ಕೆಳಕಂಡ ವೈದ್ಯರ ತಂಡವು ಹೊರರೋಗಿ ವಿಭಾಗದಲ್ಲಿ ಬೆಳಿಗ್ಗೆ 8.45 ರಿಂದ ಸಾಯಂಕಾಲ 4 ರ ವರೆಗೆ ಲಭ್ಯವಿರುವುದು.

ವಿಭಾಗ 1 (ಸೋಮವಾರ)      :  ಡಾ. ಜೆನಿಟಾ ಫೆರ್ನಾಂಡಿಸ್ ಮತ್ತು ಡಾ. ಆಡ್ಲಿನ್ ಗೊನ್ಸಾಲ್ವಿಸ್.

ವಿಭಾಗ 2 (ಮಂಗಳವಾರ)     :  ಡಾ. ವಿಲ್ಮಾ ಡಿಸೋಜ ಮತ್ತು ಡಾ. ಶರ್ಲಿನ್ ಪೌಲ್.

ವಿಭಾಗ 3 (ಬುಧವಾರ)           :  ಡಾ. ಸಾವಿಯೋನಾ ಫೆರ್ನಾಂಡಿಸ್ ಮತ್ತು  ಡಾ. ಅನಿಲಾ ಇ.ಟಿ.

ವಿಭಾಗ 4 (ಗುರುವಾರ)         :  ಡಾ. ಅನಿತಾ ಲೋಬೊ ಮತ್ತು ಡಾ. ಆಡ್ಲಿನ್ ಗೊನ್ಸಾಲ್ವಿಸ್

ವಿಭಾಗ 5 (ಶುಕ್ರವಾರ)           :  ಡಾ. ವಿಲ್ಮಾ ಡಿಸೋಜ ಮತ್ತು ಡಾ. ಶರ್ಲಿನ್ ಪೌಲ್.

ವಿಭಾಗ 6 (ಶನಿವಾರ)           :  ಡಾ. ಸಾವಿಯೋನಾ ಫೆರ್ನಾಂಡಿಸ್ ಮತ್ತು ಡಾ. ಶಹನಾಜ್.

 

ಕಂಕನಾಡಿ ಹೋಮಿಯೋಪಥಿ ಹೊರರೋಗಿ ವಿಭಾಗ   : ಡಾ. ವಿಲ್ಮಾ  ಡಿಸೋಜ ಮತ್ತು ಡಾ. ಅನಿತಾ ಲೋಬೊ  (ಪ್ರತಿ ಸೋಮವಾರ)

ಈ ವಿಭಾಗದಲ್ಲಿ ಮಹಿಳೆಯರ ಇನ್ನಿತರ ಸಮಸ್ಯೆಗಳಾದ ಪಿ.ಸಿ.ಒ.ಡಿ (PCOD), ಅಸಹಜ ರಕ್ತಸ್ರಾವದ ಅಸ್ವಸ್ಥತೆಗಳು, ಗರ್ಭಕೋಶದಲ್ಲಿನ ಗಡ್ಡೆ, ಪೆಲ್ವಿಕ್ ಉರಿಯೂತದ ಕಾಯಿಲೆಗಳು, ಎಂಡೊಮೆಟ್ರಿಯೋಸಿಸ್, ಮೂತ್ರದ ಅಸ್ವಸ್ಥತೆಗಳು, ಅಮೆನೋರಿಯಾ, ಡಿಸ್ಮೆನೋರಿಯ ಮತ್ತು ಲ್ಯುಕೋರಿಯಾ, ಜನನಾಂಗದ ಕ್ಯಾನ್ಸರ್‌ಗಳು, ಸ್ತನ ಗಡ್ಡೆಗಳು ಇಂತಹ ಅನೇಕ ಸ್ತ್ರೀರೋಗ ಅಸ್ವಸ್ಥತೆಗಳಿಗೆ ಉತ್ತಮ ಗುಣಮಟ್ಟದ ಹೋಮಿಯೋಪಥಿ ಚಿಕಿತ್ಸೆಯನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ  : 0824-2203901/ 2203902/  9459456633 (ವಾಟ್ಸಾಪ್)

Members present for the Press Meet:

  • Fr Richard Aloysious Coelho, Director, FMCI.
  • Fr Roshan Crasta, Guest of Honour
  • Nelson Dheeraj Pais, Administrator, FMHPD
  • Dr ESJ Prabhu Kiran, Principal, FMHMC
  • Dr Satish S, Principal, FMCOPS
  • Dr Vilma Meera Dsouza, Vice Principal, Professor & HOD, Dept of OBG, FMHMC, Coordinator, GENESIS Fertility Clinic, FMHMCH
  • Dr Girish Navada U.K., Medical Superintendent, FMHMCH.
  • Dr Deepa Pais, Deputy Medical Superintendent, FMHMCH.
  • OBG Unit Doctors

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page