March 25, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫರಂಗಿಪೇಟೆಯ ನಾಪತ್ತೆಯಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಕೊನೆಗೂ ಪತ್ತೆ

ಸುರಕ್ಷಿತವಾಗಿ ಕರೆತರುತ್ತಿರುವ ಪೊಲೀಸರು

ಮಂಗಳೂರು: ನಗರದ ಫರಂಗಿಪೇಟೆಯ ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ಕೊನೆಗೂ ಪತ್ತೆಯಾಗಿದ್ದಾನೆ. ಫೆಬ್ರವರಿ 25ರಂದು ನಾಪತ್ತೆಯಾಗಿದ್ದ ದಿಗಂತ್ ಇದೀಗ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

ಪಶ್ಚಿಮ ‌ವಲಯ ಐ.ಜಿ. ಅಮೀತ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ‌ಕನ್ನಡ ಜಿಲ್ಲಾ ಎಸ್ಪಿ ಯತೀಶ್‌ ನೇತೃತ್ವದಲ್ಲಿ ‌ಮತ್ತಷ್ಟು ತನಿಖೆ ತೀವ್ರಗೊಳಿಸಲಾಗಿತ್ತು. ಜಿಲ್ಲೆಯ ವಿವಿಧ ಠಾಣೆಗಳ ಸಬ್ ಇನ್ಸ್ ಪೆಕ್ಟರ್ ‌ಗಳು ಮತ್ತು ಜಿಲ್ಲೆಯ ವಿವಿಧ ಠಾಣೆಗಳ ಕ್ರೈಮ್ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿರುವ ಸಿಬ್ಬಂದಿಗಳು ತನಿಖೆ ಕಾರ್ಯ ನಡೆಸುತ್ತಿದ್ದರು.

ಇಂದು ಬೆಳಿಗ್ಗೆಯಿಂದ ದಿಗಂತ್ ಪತ್ತೆಗಾಗಿ ಕೂಬಿಂಗ್ ಕಾರ್ಯ ಕೊಡ ನಡೆದಿತ್ತು ಮತ್ತು ಸದನದಲ್ಲಿ ವಿಧಾನಸಭಾ ಅಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್ ರವರು ಸ್ವತಃ ಪ್ರಸ್ತಾಪಿಸಿದ್ದರು. ಪತ್ತೆಗಾಗಿ ಏಳು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದರು.

You may also like

News

MLC ಐವನ್‌ ಡಿಸೋಜಾರವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸೌಹಾರ್ದ ಇಫ್ತಾರ್‌ ಕೂಟ

ಮಂಗಳೂರು ಪಂಪ್ ವೆಲ್ ಬಳಿಯ ಫಾದರ್‌ ಮುಲ್ಲರ್‌ ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ವಿಧಾನ ಪರಿಷತ್‌ ಶಾಸಕ ಐವನ್‌ ಡಿಸೋಜಾರವರ ನೇತೃತ್ವದಲ್ಲಿ 10ನೇ ವರ್ಷದ ಸೌಹಾರ್ಧ ಇಪ್ತಾರ್‌ ಕೂಟವನ್ನು
News

ಮೊಗರ್ನಾಡ್ ಚರ್ಚ್ ನ ‘ಹೊಸಾನ್ನ ವಲಯ’ದಲ್ಲಿ ಸಂಬ್ರಮದ ಮಹಿಳಾ ದಿನಾಚರಣೆ

ದೇವಮಾತ ಮೊಗರ್ನಾಡ್ ಚರ್ಚ್ ಸ್ಥಾಪನೆಯ 250 ವರ್ಷದ ಜುಬಿಲಿ ಆಚರಣೆ ಪ್ರಯುಕ್ತ ಮಾರ್ಚ್ ತಿಂಗಳಲ್ಲಿ 16 ವರ್ಷ ಮೇಲ್ಪಟ್ಟ ಕುವರಿಯರಿಗೆ ಹಾಗೂ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

You cannot copy content of this page