ಮಂಗಳೂರಿನ ಪಾಲ್ದಾನೆ ಚರ್ಚ್ ನಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ

ಮಂಗಳೂರಿನ ಪಾಲ್ದಾನೆ ಸಂತ ತೆರೆಸಾ ಚರ್ಚ್ ನಲ್ಲಿ ಕ್ರೈಸ್ತ ಶಿಕ್ಷಣ ದಿನವನ್ನು ಇಂದು ಮಾರ್ಚ್ 9 ರಂದು ಆದಿತ್ಯವಾರ ಆಚರಿಸಲಾಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳು ಮತ್ತು ಮಕ್ಕಳ ಪ್ರತಿನಿಧಿಯಾಗಿ ಬಾಲಕಿ ಇವಾ ಡಿಮೆಲ್ಲೊ ಹಾಗೂ ಬಾಲಕ ರೀವನ್ ಮೊಂತೇರೊ ದೀಪ ಬೆಳಗಿಸಿದರು. ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಆಲ್ಬನ್ ಡಿಸೋಜಾರವರು ಮಕ್ಕಳಿಗೆ ಹಿತ ವಚನ ನುಡಿದರು.
ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಆಯೋಗಗಳ ಸಂಯೋಜಕಿ ಜೋಸ್ಲಿನ್ ಲೋಬೊ ಉಪಸ್ಥಿತರಿದ್ದರು. ಶಿಕ್ಷಕರ ಸಂಚಾಲಕಿ ಲಿಝೀ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರತಿ ತರಗತಿಯ ಕ್ರೈಸ್ತ ಶಿಕ್ಷಣ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಶಿಕ್ಷಕರು ಮತ್ತು ಶಿಕ್ಷಕಿಯರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಮಕ್ಕಳಿಂದ ವಿವಿಧ ವಿನೋದಾವಳಿ ಮತ್ತು ಕಿರು ನಾಟಕವನ್ನು ಆಯೋಜಿಸಲಾಗಿತ್ತು. ಶಿಕ್ಷಕಿ ರೆನಿಟಾ ಟೆಲ್ಲಿಸ್ ವಂದಿಸಿದರು. ಫ್ಲೋರಾ ಡಿಕುನ್ಹಾ ನಿರೂಪಿಸಿದರು. ನೆರೆದ ಎಲ್ಲರಿಗೂ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.