ಚಪ್ಪಾರಪಡವು ಜಾಮಿಅ: ಇರ್ಫಾನಿಯ್ಯಾ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ – ಮಸೂದ್ ಸಾಲ್ಮರ ಪ್ರಥಮ

2024-25 ರ ಶೈಕ್ಷಣಿಕ ವರ್ಷದ ಮೌಲವಿ ಫಾಝಿಲ್ ಇರ್ಫಾನಿ ಹಾಗೂ ತಖಸ್ಸುಸ್ ಸ್ನಾತಕೋತ್ತರ ಕರ್ಮ ಶಾಸ್ತ್ರ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕರ್ನಾಟಕದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ತಖಸ್ಸುಸ್ ಕರ್ಮ ಶಾಸ್ತ್ರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಮಸೂದ್ ಇರ್ಫಾನಿ ಸಾಲ್ಮರ ಪಡೆದುಕೊಂಡರೆ, ದ್ವೀತಿಯ ಸ್ಥಾನವನ್ನು ಬಿಲಾಲ್ ಇರ್ಫಾನಿ ವಿಟ್ಲರವರು ತನ್ನದಾಗಿಸಿಕೊಂಡಿದ್ದಾರೆ.
ತೃತೀಯ ಸ್ಥಾನದಲ್ಲಿ ಮುಹಮ್ಮದ್ ಇರ್ಫಾನಿ ಕೇರಳ ಭಾಗದವರು ತೃಪ್ತಿ ಕೊಂಡರೆ, ಮುತವ್ವಲ್ ಕೋರ್ಸಿನಲ್ಲಿ ಅಜ್ಮಲ್ ಮಾಟ್ಟೂಲ್, ಮುಖೀತ್ ಮೇಲಾಟೂರ್, ಅಸ್ಕರ್ ಇರಿಕ್ಕೂರ್, ಸಲ್ಮಾನ್ ಬೆಂಗ್ರೆ ಇವರು ಕ್ರಮನುಸಾರವಾಗಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳ ಅವಿರತ ಪರಿಶ್ರಮಕ್ಕೆ ಜಂಇಯ್ಯತುಲ್ ಇರ್ಫಾನಿಯೀನ್ ಕರ್ನಾಟಕ ಇತರ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆಗಳು ಕೋರಿದ್ದಾರೆ.
ದರ್ಸ್ ಪರಂಪರೆಯನ್ನು ಎತ್ತಿಹಿಡಿದ ಇರ್ಫಾನಿಯ್ಯಾ ಮಖ್ದೂಮಿ ಪಾರಂಪರಿಕ ಸಿಲೆಬಸ್ಸಿನೊಂದಿಗೆ ನೈಜ ಇಲ್ಮಿನ ಫ್ರೌಡಿಯನ್ನು ಆತ್ಮೀಯತೆಯನ್ನು ಮುಖಮುದ್ರೆ ಮಾಡಿಕೊಂಡು ಸುದೀರ್ಘ 33 ವರ್ಷಗಳ ನಿಷ್ಕಳಂಕ ದೀನೀ ಸೇವೆಯನ್ನು ಜನರ ಮುಂದೆ ತೆರೆದಿಟ್ಟದೆ. ನಮ್ಮೆಲ್ಲರ ಆತ್ಮೀಯ ಗುರುವರ್ಯರು, ಸೂಫಿವರ್ಯರಾದ, ಶೈಖುನಾ ಚಪ್ಪಾರಪಡವು ಉಸ್ತಾದರ ನೇತೃತ್ವದಲ್ಲಿ ಚಪ್ಪಾರಪಡವು ಜಾಮಿಅ ಇರ್ಫಾನಿಯ್ಯಾ ಅರಬಿಕ್ ಕಾಲೇಜು ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಿರುವುದಲ್ಲದೇ ಜನಮನಸ್ಸುಗಳಿಗೆ ಅಭಯ ಕೇಂದ್ರವಾಗಿ ಮಾರ್ಪಟ್ಟಿದೆ.
ಮುಖ್ತಸರ್ ಹಾಗೂ ಮುತವ್ವಲ್ ಕೋರ್ಸಿನ ಸೆಲೆಕ್ಷನ್ ಬಯಸುವ ವಿದ್ಯಾರ್ಥಿಗಳು ರಂಝಾನ್ ನಂತರ ಎಪ್ರಿಲ್ 11ಕ್ಕೆ ಪ್ರವೇಶಾತಿ ಪರೀಕ್ಷೆ ನಡೆಯಲಿದೆ. ರಂಝಾನ್ ರಜೆಯ ನಂತರ ಶೈಕ್ಷಣಿಕ ವರ್ಷದ ಅಧ್ಯಾಯನವು ಎಪ್ರಿಲ್ ಹತ್ತಕ್ಕೆ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಈ ಮೂಲಕ ತಿಳಿಸಿದ್ದಾರೆ.