ಸೂರಿಕುಮೇರು ಜಂಕ್ಷನ್ ಬಳಿ ರಿಕ್ಷಾ ಮತ್ತು ಕಾರು ಅಪಘಾತ

ಮಾಣಿ ಇಲ್ಲಿನ ಸೂರಿಕುಮೇರು ಜಂಕ್ಷನ್ ಬಳಿ ಅತೀ ವೇಗವಾಗಿ ಬಂದ ಕಾರೊಂದು ರಿಕ್ಷಾವೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾದ ಘಟನೆ ಇಂದು ಮಾರ್ಚ್ 14ರಂದು ಶುಕ್ರವಾರ ಬೆಳಿಗ್ಗೆ ಸೂರಿಕುಮೇರುವಿನಲ್ಲಿ ನಡೆದಿದೆ.
ಕಲ್ಲಡ್ಕ ಬಳಿಯ ರಿಕ್ಷಾ ಸೂರಿಕುಮೇರು ಜಂಕ್ಷನ್ ಬಳಿ ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿರುತ್ತಾರೆ. ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.