ಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಪರೀಕ್ಷೆಯಲ್ಲಿ ಮೂಡಿಗೆರೆಯ ರೀಶಲ್ ಡೇಸಾ ರಾಜ್ಯಕ್ಕೆ 7ನೇ ಸ್ಥಾನ

ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್ ಮಂಗಳೂರು ಇದರ ವಿದ್ಯಾರ್ಥಿನಿ
ಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ (MHA) ಕೋರ್ಸ್ ಪರೀಕ್ಷೆಯಲ್ಲಿ ಮೂಡಿಗೆರೆ ತಾಲೂಕು ಬಾಳೂರು ಹೋಬಳಿ ನಿಡುವಾಳೆಯ ರೊನಾಲ್ಡ್ ಡೇಸಾ ಮತ್ತು ಸಿಲ್ವಿ ಜೆಸಿಂತಾ ಡೇಸಾ ಇವರ ಪುತ್ರಿ ರೀಶಲ್ ಶಾಲೆಟ್ ಡೇಸಾ ಇವರು ರಾಜ್ಯಮಟ್ಟದಲ್ಲಿ 7ನೇ ರ್‍ಯಾಂಕ್ ಗಳಿಸಿ ಉನ್ನತ ಸಾಧನೆ ತೋರಿದ್ದಾರೆ. ಇವರು ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್ ಮಂಗಳೂರು ಇಲ್ಲಿಯ ವಿದ್ಯಾರ್ಥಿನಿಯಾಗಿರುತ್ತಾರೆ.
ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ನಡೆದ ಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ (MHA) ಕೋರ್ಸ್ ಪರೀಕ್ಷೆಯಲ್ಲಿ ರೀಶಲ್ ಶಾಲೆಟ್ ಡೇಸಾ ಇವರು ರಾಜ್ಯಕ್ಕೆ 7ನೇ ರ್‍ಯಾಂಕ್ ಪಡೆದು ಮಹತ್ವದ ಸಾಧನೆಗೈದಿದ್ದಾರೆ.
ಇವರ ಪರಿಶ್ರಮ ಮತ್ತು ಸಾಧನೆಗೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.