ಆಶಾವಾದಿ ಪ್ರಕಾಶನ ಮತ್ತು ಕೊಂಕಣಿ ಲೇಖಕಿಯರ ಸಂಘಗಳ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 9 ಪುಸ್ತಕಗಳ ಲೋಕಾರ್ಪಣೆ

ಮಂಗಳೂರಿನ ಸಿ.ಒ.ಡಿ.ಪಿ. ಸಭಾಂಗಣದಲ್ಲಿ ಮಾರ್ಚ್ 9ರಂದು ಆದಿತ್ಯವಾರ ಆಶಾವಾದಿ ಪ್ರಕಾಶನ ಮತ್ತು ಕೊಂಕಣಿ ಲೇಖಕಿಯರ ಸಂಘಗಳ ಜಂಟಿ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದ ಅಸ್ಸಿಸಿ ಪ್ರೆಸ್‌ನ ವಂದನೀಯ ಫಾದರ್ ಚೇತನ್ ಲೋಬೊರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಣಿಕ್ ಪತ್ರಿಕೆಯ ಮಾಜಿ ಸಹ ಸಂಪಾದಕಿಯಾಗಿದ್ದ ಮಾರಿಯೆಟ್ ರಸ್ಕಿನ್ಹಾ, ಕವಿತಾ ಟ್ರಸ್ಟ್ ಇದರ ಏವ್ರೆಲ್ ರೊಡ್ರಿಗಸ್, ಗೋವಾದ ಪ್ರಖ್ಯಾತ ಕವಯತ್ರಿ ಗ್ವಾದಲಪ್ ಡಾಯಸ್, ಗೋವಾದ ಪ್ರಾಂಶುಪಾಲ ವಿಲ್ಲಿ ಗೋಯೆಸ್, ಆಮ್ಚೊ ಸಂದೇಶ್ ಪತ್ರಿಕೆಯ ಸಂಪಾದಕ ವಿಲ್ಫ್ರೆಡ್ ಲೋಬೊ ಹಾಗೂ ಫ್ಲಾವಿಯಾ ಆಲ್ಬುಕರ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಲೊಮಿ ಮೊಗರ್ನಾಡ್ ರವರು ಲೋಕಾರ್ಪಣೆಗೊಳ್ಳಲಿರುವ ಒಂಭತ್ತು ಪುಸ್ತಕಗಳ (ಕೊಂಕಣ್ ಸರ್ದಾರ್ ಬಸ್ತಿ ವಾಮನ್ ಶೆಣಯ್ ಸ್ಮಾರಕ ಪುಸ್ತಕ ಪ್ರಕಾಶನ ಯೋಜನೆಯಡಿ, ಆಶಾವಾದಿ ಪ್ರಕಾಶನದ ಏಳು ಪುಸ್ತಕಗಳು ಮತ್ತು ಇತರ ಎರಡು ಪುಸ್ತಕಗಳು) ಹಾಗೂ ಲೇಖಕರ ಪರಿಚಯ ಮಾಡಿದರು. ಎವ್ರೆಲ್ ರೊಡ್ರಿಗಸ್ ರಿಂದ ಫುಲಾಂ ತುರೊ, ಮಾರಿಯೆಟ್ ರಸ್ಕಿನಾರಿಂದ ಮೊಳ್ಸುದ್, ವಂದನೀಯ ಫಾದರ್ ಚೇತನ್ ಲೋಬೊರಿಂದ ಸುರ್ಯೊ ಉದೆಲಾ (ಕನ್ನಡ ಲಿಪಿ), ಗ್ವಾದಲುಪ್ ಡಾಯಸ್ ರಿಂದ ಸುರ್ಯೊ ಉದೆಲಾ (ನಾಗರಿ ಲಿಪಿ), ವಿಲ್ಲಿ ಗೋಯೆಸ್ ರಿಂದ ಸುರ್ಯೊ ಉದೆಲಾ (ರೋಮಿ ಲಿಪಿ), ವಿಲ್ಫ್ರೆಡ್ ಲೋಬೊರಿಂದ ಭಿತರ್ಲೊ ಕವಿ, ಅವಿಲ್ ರಸ್ಕಿನ್ಹಾರಿಂದ ರೇಗಿಸ್ಥಾನಾಂತ್ಲೆಂ ಫುಲ್, ಕ್ಯಾಥರಿನ್ ರೊಡ್ರಿಗಸ್ ರಿಂದ ಪ್ಯಾರಿ ಪದಾಂ ಫ್ಲಾವಿಯಾರಿಂದ ಕಾತ್ರಿನ್ ಪುಸ್ತಕಗಳು ಲೋಕಾರ್ಪಣೆಗೊಂಡವು.
ಪರದೆಯ ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸ್ತ್ರೀ ಸಾಧಕಿಯರ ಪರಿಚಯವನ್ನು ಜೋಯ್ಸ್ ಪಿಂಟೊ ಕಿನ್ನಿಗೋಳಿಯವರು ಪರಿಚಯಿಸಿ, ಏವ್ರೆಲ್ ರವರು -ಮಾರಿಯೆಟ್ ರಸ್ಕಿನ್ಹಾರಿಗೆ, ಗ್ವಾದಲುಪ್ ರವರು – ಐರಿನ್ ಪಿಂಟೊರಿಗೆ, ಫೆಲ್ಸಿ ಲೋಬೊರವರು -, ಫ್ಲೋರಾ ಕ್ಯಾಸ್ತೆಲಿನೊರಿಗೆ, ಫ್ಲಾವಿಯಾರವರು – ಶಾಲಿನಿ ವಾಲೆನ್ಸಿಯಾವರಿಗೆ ಹಾಗೂ ವಂದನೀಯ ಫಾದರ್ ಚೇತನ್ ರವರು -ಸಲೊಮಿಯವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನಿತರ ವತಿಯಿಂದ ಫ್ಲೋರಾರವರು ಮಾತನಾಡಿದರು.
ಸಲೋಮಿಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಸ್ಮಿತಾ ಶೆಣೈ, ಗ್ವಾದಲುಪ್ ಡಾಯಸ್, ಜೋಯ್ಸ್ ಪಿಂಟೊ, ಲವಿಟಾ ನಕ್ರೆ, ಜೀತಾ ಬಾರ್ಕೂರ್, ಡಾ. ಆನ್ನಿ ಕ್ಯಾಸ್ತೆಲಿನೊ, ಫೆಲ್ಸಿ ಲೋಬೊ, ಫ್ಲಾವಿಯ ಪುತ್ತೂರ್, ಜೂಲಿಯೆಟ್ ಮೊರಾಸ್‌ರವರು ಪಾಲ್ಗೊಂಡರು. ನಂತರ ಫುಲಾಂ ತುರೊ ಪುಸ್ತಕದ ಕವಯತ್ರಿಯರಿಗೆ ಗೌರವ ಪ್ರತಿ ನೀಡಿದರು. ಕವಿತಾ ವಾಚನ ಮಾಡಿದವರಿಗೆ ವಂದನೀಯ ಫಾದರ್ ಜೇಸನ್‌ರವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಫೆಲ್ಸಿ ಲೋಬೊ ದೇರೆಬೈಲ್ ಕಾರ್ಯಕ್ರಮ ನಿರೂಪಿಸಿದರು. ಫ್ಲಾವಿಯಾ ಪುತ್ತೂರು ಸ್ವಾಗತಿಸಿದರು. ಜೀತಾ ಬಾರ್ಕೂರ್ ವಂದಿಸಿದರು. ಆಶಾವಾದಿ ಪ್ರಕಾಶನದ ವಲ್ಲಿ ಕ್ವಾಡ್ರಸ್ ಉಪಸ್ಥಿತರಿದ್ದರು.