ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಕಾರ್ಯಕಾರಿ ಸಮಿತಿಯ ಸದಸ್ಯರ ಕುಟುಂಬದ ಸಹಮಿಲನ ಕಾರ್ಯಕ್ರಮ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಬೆಳ್ತಂಗಡಿ ವಲಯದ ಕಾರ್ಯಕಾರಿ ಸಮಿತಿಯ ಸದಸ್ಯರ ಕುಟುಂಬ ಸಹಮಿಲನ ಕಾರ್ಯಕ್ರಮವು ಮಾರ್ಚ್ 16ರಂದು ಆದಿತ್ಯವಾರ ಮಡಂತ್ಯಾರ್ ಚರ್ಚ್ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು.
ವಲಯ ಆದ್ಯಾತ್ಮಿಕ ನಿರ್ದೇಶಕ ಹಾಗೂ ಬೆಳ್ತಂಗಡಿ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊ ಕಾರ್ಯಕ್ರಮಧ ಉದ್ಘಾಟನೆಯನ್ನು ಮಾಡಿ ಸಂದೇಶ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರೀಯ ಸಮಿತಿಯ ಮಾಜಿ ಅಧ್ಯಕ್ಷೆ ಫ್ಲೇವಿ ಡಿಸೋಜ ನಾಯಕತ್ವದ ಬಗ್ಗೆ ಮಾಹಿತಿ ನೀಡಿದರು. ಮಡಂತ್ಯಾರ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಸ್ಟ್ಯಾನಿ ಗೋವಿಯಸ್ ಪ್ರಾರ್ಥನಾ ವಿಧಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಲಯದ 12 ಘಟಕಗಳ ಅಧ್ಯಕ್ಷರಿಗೆ, ವಲಯದ ಮಾಜಿ ಅಧ್ಯಕ್ಷರಿಗೆ, ಕೇಂದ್ರೀಯ ಸಮಿತಿಯ ಮಾಜಿ ಅಧ್ಯಕ್ಷರಿಗೆ, ಮಾಜಿ ಪದಾಧಿಕಾರಿಗಳಿಗೆ, ವಲಯದ ಪ್ರಸ್ತುತ ಪದಾಧಿಕಾರಿಗಳಿಗೆ ಹಾಗೂ ವಲಯದ ಭಾಷಣ ಸ್ಪರ್ಧೆಯ ಸಂಚಾಲಕರಿಗೆ ಗೌರವಿಸಲಾಯಿತು. ವಲಯದ ಪ್ರಸ್ತುತ ಸಹಕಾರಿ ಕ್ರೇತ್ರದ ನಿರ್ದೇಶಕರಾಗಿ ಆಯ್ಕೆಯಾದ ಅಮಿತ್ ಲೋಬೊ, ಅಧ್ಯಕ್ಷ ಜೋಯಲ್ ಮೆಂಡೋನ್ಸಾ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಲೂಸಿ ಅಲ್ಬುಕರ್ಕ್ , ಮೈಕಲ್ ಡಿಸೋಜಾ, ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ, ಕೃಷಿ ಕ್ರೇತ್ರದಲ್ಲಿ ಸಾಧನೆ ಮಾಡಿದ ಜೋನ್ ಡಿಸೋಜ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೀನಾ ಫೆರ್ನಾಂಡೀಸ್ ಮಡಂತ್ಯಾರು, ವಿಲೊನಾ ಡಿಕುನ್ಹಾ ಉಜೆರೆ, ಶಿಕ್ಷಣ ಕ್ಷೇತ್ರದಲ್ಲಿ ಚಿನ್ನದ ಪದಕ ಪಡೆದ ಪ್ರೀಮಲ್ ನಿಶಾ ರೊಡ್ರಿಗಸ್ ರವರನ್ನು ಸನ್ಮಾನಿಸಲಾಯಿತು.
ವಲಯ ಅಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊರವರ 70ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಪ್ರಸ್ತುತ ವಲಯ ಅಧ್ಯಕ್ಷ ಲಿಯೋ ರೊಡ್ರಿಗಸ್ ರವರು ಸಲ್ಲಿಸಿದ 2 ವರ್ಷಗಳ ನಿರಂತರ ಸೇವೆಗೆ ಗೌರವಿಸಲಾಯಿತು.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಸನ್ಮಾನ ಸ್ವೀಕರಿಸಿ ತಮ್ಮ ಸಂದೇಶ ನೀಡಿದರು. ಬೆಳ್ತಂಗಡಿ ವಲಯ ಅದ್ಯಕ್ಷ ಲಿಯೋ ರೊಡ್ರಿಗಸ್, ಮಾಜಿ ಕೇಂದ್ರೀಯ ಅಧ್ಯಕ್ಶ ಪಾವ್ಲ್ ರಾಲ್ಫಿ ಡಿಕೋಸ್ತ ಹಾಗೂ ಪೆಜಾರ್ ವಲಯ ಅಧ್ಯಕ್ಷ ಸಂತೋಷ ಡಿಸೋಜ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು.
ವಲಯದ ಉಪಾಧ್ಯಕ್ಷ ಸುನಿಲ್ ಮೊನಿಸ್ ರವರು ಸ್ವಾಗತಿಸಿ, ವಿನ್ಸಿ ಮೊರಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಫಿಲಿಪ್ ಡಿಕುನ್ಹಾ ವಂದಿಸಿದರು.