ಮಾಣಿ ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ಸ್ಪರ್ಧೆ

ಎಪ್ರಿಲ್ 25 ರಿಂದ 27ರ ತನಕ ನಡೆಯಲಿರುವ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ತಂಡಗಳು ಭಾಗಿ
ಬಾಲವಿಕಾಸ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾ ನಗರ, ಪೆರಾಜೆ, ಮಾಣಿಯಲ್ಲಿ 2025 ಎಪ್ರಿಲ್ 25ರಿಂದ 27ರ ತನಕ ಅಂತರಾಷ್ಟ್ರೀಯ ಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ಅನ್ನು ಇಂಡಿಯನ್ ಡಾಡ್ಜ್ ಬಾಲ್ ಫೆಡರೇಷನ್ (ರಿ.) ಕರ್ನಾಟಕ ರಾಜ್ಯ ಡಾಡ್ಜ್ ಬಾಲ್ ಅಸೋಸಿಯೇಷನ್ (ರಿ.), ದಕ್ಷಿಣ ಕನ್ನಡ ಜಿಲ್ಲಾ ಡಾಡ್ಜ್ ಬಾಲ್ ಅಸೋಸಿಯೇಷನ್ ಹಾಗೂ ಬಾಲವಿಕಾಸ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಾಣಿ ಇದರ ಸಹಯೋಗದೊಂದಿಗೆ ನಡೆಯಲಿದೆ.
ಮಾರ್ಚ್ 20ರಂದು ಗುರುವಾರ ಇದರ ಬಗ್ಗೆ ಸಮಾಲೋಚನ ಸಭೆ ನಡೆಯಿತು. ಇದರಲ್ಲಿ ಊರ ಹಾಗೂ ಪರವೂರ ಗಣ್ಯ ವ್ಯಕ್ತಿಗಳು, ಬಾಲವಿಕಾಸ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಸಂಚಾಲಕ ಪ್ರಹ್ಲಾದ ಶೆಟ್ಟಿ ಜಡ್ತಿಲ, ಕರ್ನಾಟಕ ರಾಜ್ಯ ಡಾಡ್ಜ್ ಬಾಲ್ ಅಸೋಸಿಯೇಷನ್ ಇದರ ಕಾರ್ಯದರ್ಶಿ ಸಚಿನ್ ಉಪ್ಪಿನಂಗಡಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಆಳ್ವ ಕೊಡಾಜೆ, ಕುಶಲ ಪೆರಾಜೆ, ಇಬ್ರಾಹಿಂ ಕೆ. ಮಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಡಿಯನ್ ಡಾಡ್ಜ್ ಬಾಲ್ ಫೆಡರೇಷನ್ ಇದರ ರೆಫ್ರಿ ಬೋರ್ಡ್ ಅಧ್ಯಕ್ಷ ವಿಜೇತ್ ಕುಮಾರ್ ಉಪ್ಪಿನಂಗಡಿ ಇವರು ಕಾರ್ಯಕ್ರಮ ನಿರೂಪಿಸಿ ಅತ್ಯುತ್ತಮವಾಗಿ ಈ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆ ಹೇಗೆ ನಡೆಸಬಹುದು ಎಂಬ ವಿಚಾರ ಸವಿವರವಾಗಿ ತಿಳಿಸಿದರು. ಈ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟದ 22ಕ್ಕೂ ಹೆಚ್ಚು ರಾಜ್ಯ ಮಟ್ಟದ 20 ಹಾಗೂ ಅಂತಾರಾಷ್ಟ್ರೀಯ ಮಟ್ಟದ 3ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು. ಅಂತೆಯೇ ಕಾರ್ಯಕ್ರಮದ ಯಶಸ್ಸಿಗೆ ಬೇರೆ ಬೇರೆ ಕಮಿಟಿಗಳನ್ನು ಮಾಡಲಾಯಿತು.