ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎಸ್.ಸಿ.ಎಸ್. ಇನ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪದವಿ ಪ್ರಧಾನ ಸಮಾರಂಭ – 2025

ಎಸ್.ಸಿ.ಎಸ್. ಕಾಲೇಜ್ ಮತ್ತು ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಇದರ ಪದವಿ ಮತ್ತು ಡಿಪ್ಲೊಮಾ ಪ್ರದಾನ ಸಮಾರಂಭವು ಮಾರ್ಚ್ 19ರಂದು ಬುಧವಾರ ಮಂಗಳೂರಿನ ಬೆಂದೂರಿನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮವು ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿದರು. ಸಮಾರಂಭದ ಮುಖ್ಯ ಅತಿಥಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಸಂತೋಷ್ ಸುಭಾಷ್ ಇಂಡಿ ಪದವೀಧರರನ್ನು ಪ್ರೀತಿ, ಸಹಾನುಭೂತಿ ಮತ್ತು ಸಮರ್ಪಣೆಯೊಂದಿಗೆ ಶುಶ್ರೂಷೆ ಆರೈಕೆಯನ್ನು ನೀಡುವಂತೆ ಮತ್ತು ಶುಶ್ರೂಷೆ ಆರೈಕೆಯಲ್ಲಿ ನೈತಿಕ ಮೌಲ್ಯಗಳನ್ನು ಒತ್ತಿ ಹೇಳಿದರು. ಸಮಾರಂಭದ ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ಶ್ರೀದೇವಿ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲ ಡಾ. ಡಾರ್ಲಿಂಗ್ ಬಿ. ಬಿಬಿಯಾನಾ ಪದವೀಧರರನ್ನು ಉದ್ದೇಶಿಸಿ ಮಾತನಾಡುತ್ತಾ, ಜಗತ್ತಿನ ಯಾವುದೇ ಭಾಗದಲ್ಲಿ ಸ್ಪರ್ಧಿಸಲು ಮತ್ತು ಗುಣಮಟ್ಟದ ಸೇವೆಗಳನ್ನು ನೀಡಲು ನರ್ಸಿಂಗ್ ಅಭ್ಯಾಸದಲ್ಲಿ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುವ ಬಗ್ಗೆ ಮಾತನಾಡಿದರು.
ಕರ್ನಾಟಕ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿ ಡಾ. ಅಭಿನಯ್ ಸೊರಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಅನಿಲ್ ಕುಮಾರ್ ಸಿ.ಎಂ. ಸ್ವಾಗತಿಸಿದರು. ಕ್ಲೇಸಿಯಾ ಫೆರ್ನಾಂಡಿಸ್ ಬಿ.ಎಸ್ಸಿ. ಮತ್ತು ಎಂ.ಎಸ್ಸಿ. ಪದವೀಧರರು ಮತ್ತು ಡಿಪ್ಲೊಮಾ ಪಡೆದವರ ಪಟ್ಟಿಯನ್ನು ಓದಿದರು. ಪ್ರಾಂಶುಪಾಲ ಪ್ರೊ. ಲೋಲಿತಾ ಎಸ್.ಎಂ. ಡಿಸೋಜಾ ಅವರು ಪದವೀಧರರಿಗೆ ಪ್ರಮಾಣ ವಚನ ಬೋಧಿಸಿ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕರ್ನಾಟಕ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷ ಡಾ. ಅಮರನಾಥ್ ಸೊರಕೆ, ಎಸ್.ಸಿ.ಎಸ್. ಸಮೂಹ ಸಂಸ್ಥೆಗಳ ಆಡಳಿತ ಅಧಿಕಾರಿ ಯು.ಕೆ. ಖಾಲಿದ್, ಎಸ್.ಸಿ.ಎಸ್. ಸಮೂಹ ಸಂಸ್ಥೆಗಳ ಸಹಾಯಕ ಆಡಳಿತ ಅಧಿಕಾರಿ ಪವನ್ ಕುಮಾರ್ ಬಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ರೆಕಿತ್ ಮ್ಯಾಕ್ಲಿಯನ್ ಪಿಂಟೊ ಅವರು ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕ ರೋಹನ್ ಸಿಕ್ವೇರಾರವರು ವಂದನಾರ್ಪಣೆ ಮಾಡಿದರು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.