MLC ಐವನ್ ಡಿಸೋಜಾರವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸೌಹಾರ್ದ ಇಫ್ತಾರ್ ಕೂಟ

ಮಂಗಳೂರು ಪಂಪ್ ವೆಲ್ ಬಳಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾರವರ ನೇತೃತ್ವದಲ್ಲಿ 10ನೇ ವರ್ಷದ ಸೌಹಾರ್ಧ ಇಪ್ತಾರ್ ಕೂಟವನ್ನು ಮಾರ್ಚ್ 23ರಂದು ಆದಿತ್ಯವಾರ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೂಡಬಿದರೆ ಶ್ರೀ ಕೆಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿಯವರು ಮಾತನಾಡಿ ನಾವು ಒಳ್ಳೆಯ ಮನಸ್ಸಿನಿಂದ ನೀಡಿದ್ದಲ್ಲಿ ನಮಗೆ ಒಳ್ಳೆಯ ಪ್ರತಿಫಲವೇ ಸಿಗುತ್ತದೆ. ಉತ್ತಮ ಹೃದಯ ಇದ್ದಲ್ಲಿ ಜಗತ್ತು ಗೆಲ್ಲಲು ಸಾಧ್ಯವಿದೆ ಸಮಾಜಕ್ಕೆ ಏನು ನೀಡುತ್ತೇವೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ನುಡಿದರು.
ಸೈಂಟ್ ಅಲೋಷಿಯಸ್ ಡೀಮ್ಡ್ ಯುನಿರ್ವಸಿಟಿಯ ಕುಲಪತಿ ಅತೀ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ರವರು ಮಾತನಾಡಿ ದಾನಕ್ಕೆ ಮತ್ತೊಂದು ಹೆಸರು ರಂಜಾನ್. ಉಪವಾಸದೊಂದಿಗೆ ಆಧ್ಯಾತ್ಮಿಕ ನಂಬಿಕೆ ಮುಖ್ಯವಾಗಿದೆ. ಸೌಹಾರ್ದ ಇಫ್ತಾರ್ ಮೂಲಕ ಮನಕುಲವನ್ನು ತಲುಪಲು ಸಾದ್ಯವಾಗಲಿದೆ ಎಂದು ನುಡಿದರು. ಮುಸ್ಲಿಂ ಧರ್ಮಗುರು ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು ಇದರ ಅಧ್ಯಕ್ಷ ಕೆ.ಪಿ. ಮಹಮ್ಮದ್ ಇಸಾಕ್ ಮಾತನಾಡಿ ಎಲ್ಲಾ ಮನುಷ್ಯನನ್ನು ಸೃಷ್ಟಿಸಿರುವುದು ಒಬ್ಬನೇ ದೇವರಾಗಿದ್ದು ಜನಿಸಿದ ಪ್ರತಿಯೊಬ್ಬನಿಗೂ ಬಾಳುವ ಸಮಾನ ಹಕ್ಕಿದೆ ಎಂದು ನುಡಿದರು.
ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾಜಿ ಸವಿವ ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೋ, ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಶೆಟ್ಟಿ, ಡಾ. ಕವಿತಾ ಡಿಸೋಜಾ, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯ್ಲಿ, ಕಾರ್ಪೊರೇಟರ್ ಗಳಾದ ನವೀನ್ ಡಿಸೋಜಾ, ಪ್ರವೀಣ್ ಚಂದ್ರ ಆಳ್ವ, ಅಶ್ರಫ್, ಶಂಶುದ್ದೀನ್, ಡಾ. ಜನಾರ್ಧನ್, ರೋಹನ್ ಮೊಂತೆರೋ, ಹೇಮನಾಥ ಶೆಟ್ಟಿ ಪುತ್ತೂರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಗಣೇಶ್ ಶೆಟ್ಟಿ ಫುಡ್ ಲ್ಯಾಂಡ್, ಹಾಜಿ ಗಲಾಂ ಮಹಮ್ಮದ್ ಹೆಜಮಾಡಿ, ಫೆಲಿಕ್ಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ವಿದಾನ ಪರಿಷತ್ ಶಾಸಕ ಐವನ್ ಡಿಸೋಜಾ ಸ್ವಾಗತಿಸಿ, ದಾಯ್ಜಿವಲ್ಡ್‌ನ ನಿರೂಪಕ ಚೇತನ್ ಹಾಗೂ ಲೋಕೆಶ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಮಾಜಿ ಕಾರ್ಪೊರೇಟರ್ ಜೆ. ನಾಗೇಂದ್ರ ಕುಮಾರ್ ಧನ್ಯವಾದವಿತ್ತರು.