ಜೆಸಿಐ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ JFR ಸೂರ್ಯನಾರಾಯಣ ವರ್ಮ ವಿಟ್ಲ ಘಟಕಕ್ಕೆ ಭೇಟಿ

ಮಾರ್ಚ್ 22ರಂದು ಜೆಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕರಾದ JFR ಸೂರ್ಯ ನಾರಾಯಣ ವರ್ಮಾರವರು ಜೆಸಿಐ ವಿಟ್ಲ ಘಟಕಕ್ಕೆ ಅಧಿಕೃತ ಭೇಟಿ ನೀಡಿದರು. ಇವರನ್ನು ಜೆಸಿಐ ವಿಟ್ಲ ಘಟಕದ ಅಧ್ಯಕ್ಷ ಜೆಸಿಐ ಸೇನೆಟರ್ ಸೌಮ್ಯ ಚಂದ್ರಹಾಸ್ ಹಾಗೂ ಸರ್ವ ಸದಸ್ಯರು ಪ್ರೀತಿ ಪೂರ್ವಕವಾಗಿ ಗಜಾನನ ಸಭಾಭವನದಿಂದ ವಾಹನ ಜಾಥಾದ ಮೂಲಕ ಜೆಸಿ ಆಂಗ್ಲ ಮಾಧ್ಯಮ ಶಾಲೆಗೆ ಕರೆತಂದು, ಶಾಲೆಗೆ ಜೆಸಿಐ ವಿಟ್ಲ ಘಟಕದ ವತಿಯಿಂದ ಜೆಸಿಐ ಶಾಶ್ವತ ಯೋಜನೆಯಡಿಯಲ್ಲಿ ಸಿಸಿಟಿವಿ ಕ್ಯಾಮೆರವನ್ನು ರಾಷ್ಟೀಯ ಉಪಾಧ್ಯಕ್ಷರು ಶಾಲೆಯ ಅಧ್ಯಕ್ಷರಾದ ಜೆಸಿ ಶ್ರೀಧರ್ ಶೆಟ್ಟಿ ಇವರಿಗೆ ಹಸ್ತಾಂತರಿಸಿದರು. ರಾಷ್ಟ್ರೀಯ ಉಪಾಧ್ಯಕ್ಷರು ಈ ಸಂದರ್ಭದಲ್ಲಿ ಜೆಸಿಐ ವಿಟ್ಲದ ಬಗ್ಗೆ ಶ್ಲಾಘನೆಯ ಮಾತನಾಡಿ ಇನ್ನು ಹೆಚ್ಚಿನ ವ್ಯಕ್ತಿತ್ವ ವಿಕಸನದ ಜೊತೆಯಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮ ನೀಡಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಝೊನ್ 15ರ ವಲಯ ಅಧ್ಯಕ್ಷ ಜೆಸಿಐ ಸೇನೆಟರ್ ಅಭಿಲಾಷ್ ಬಿ.ಎ., ವಲಯ ಉಪಾಧ್ಯಕ್ಷ ಜೆ.ಫ್. ಸಂತೋಷ್ ಶೆಟ್ಟಿ, ಶಾಲೆಯ ಅಧ್ಯಕ್ಷ ಜೆಸಿ ಶ್ರೀಧರ್ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷ ಜೆಸಿಐ ಸೇನೆಟರ್ ಸೌಮ್ಯ, ಅಧ್ಯಕ್ಷರು ಜೆಸಿ ವಿಟ್ಲ ಹಾಗೂ ಜೋನ್ 15 ರ ಪದಾಧಿಕಾರಿಗಳು, ವಿಟ್ಲ ಜೆಸಿಐನ ಪೂರ್ವಧ್ಯಕ್ಷರುಗಳು ಹಾಗೂ ಹೆಚ್ಚಿನ ಸದಸ್ಯರು ಹಾಜರಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜೆಸಿ ರಾಧಾಕೃಷ್ಣ ಏರುoಬು ವೇದಿಕೆಗೆ ಆಹ್ವಾನಿಸಿದರು. ಹೇಮಲತಾ ಜೈಕಿಶನ್ ವಂದಿಸಿದರು.