ಪೊಯೆಟಿಕಾ ಕಾರ್ಯಗಾರ 3 ಹಾಗೂ ಪೊಯೆಟಿಕಾ ಕವಿಗೋಷ್ಠಿ 38

ನವೀನ್ ಪಿರೇರಾ ಸುರತ್ಕಲ್ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಪೊಯೆಟಿಕಾ ಕಾರ್ಯಗಾರ 3 ಹಾಗೂ ಪೊಯೆಟಿಕಾ ಕವಿಗೋಷ್ಠಿ 38, ಮಂಗಳೂರಿನ ಸೈಂಟ್ ಆಗ್ನೆಸ್ ವಿದ್ಯಾಲಯ (ಸ್ವಾಯತ್ತ)ದಲ್ಲಿ ನಡೆಯಿತು.
ಜೇಮ್ಸ್ ಮತ್ತು ಶೋಭಾ ಮೆಂಡೋನ್ಸಾ ದುಬಾಯ್/ವಾಮಂಜೂರು, ಈ ಕಾರ್ಯದ ಪ್ರಮುಖ ಪ್ರಾಯೋಜಕರಾಗಿದ್ದರು. ಉದ್ಘಾಟನಾ ಸಮಾರಂಬದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಭಗಿನಿ ಡಾ. ವೆನಿಸ್ಸಾ ಎ.ಸಿ. ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಹಿರಿಯ ಕವಿ ಮಾರ್ಸೆಲ್ ಡಿಸೋಜ ಹಾಗೂ ಸಮಾರೋಪ ಕಾರ್ಯಕ್ಕೆ ಕ್ರಿಸ್ಟೋಫರ್ ಸಿಕ್ವೇರಾ ಕಾರ್ಕಳ ಹಾಜರಿದ್ದರು. ಕಾಲೇಜು ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ, ಸ್ವಾಗತ ಭಾಷಣ ಹಾಗೂ ಸ್ವಾಗತ ನೃತ್ಯದ ಮೂಲಕ ಕಾರ್ಯಕ್ರಮ ಆರಂಭವಾಯಿತು.
“ಕವಿತೆ ಹಾಗೂ ಕವಿತೆಯ ತಂತ್ರಮಂತ್ರ” ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಪ್ರಖ್ಯಾತ ಕವಿ ಮಾವ್ರಿಸ್ ಶಾಂತಿಪುರ, ಲವಿ ಗಂಜಿಮಠ, ಹಾಗೂ ಪೊಯೆಟಿಕಾ ಮುಖ್ಯಸ್ಥ ನವೀನ್ ಪಿರೇರಾ, ಸುರತ್ಕಲ್ ಕವಿತೆ ಬರೆಯುವ ಬಗ್ಗೆ ತಮ್ಮ ಅನುಭವವನ್ನು ವಿಧ್ಯಾರ್ಥಿಗಳಲ್ಲಿ ಹಂಚಿಕೊಂಡರು. ಮಧ್ಯಾಹ್ನ ಭೋಜನದ ನಂತರ ಡಾ. ಫ್ಲಾವಿಯಾ ಕ್ಯಾಸ್ತೆಲಿನೊ ಮಣಿಪಾಲ ಹಾಗೂ ನವೀನ್ ಪಿರೇರಾ ಸುರತ್ಕಲ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 26 ಕವಿಗಳು ಕವಿತಾ ವಾಚನ ಮಾಡಿದರು.
ಕೊಂಕಣಿ ಸಂಘದ ಸಂಯೋಜಕ ಮೆಲ್ಸನ್ ಡಿಸೋಜರವರು ಧನ್ಯವಾದ ಸಮರ್ಪಿಸಿದರು. ಪೊಯೆಟಿಕಾ ಕವಿಗಳ ಪಂಗಡ ಕಳೆದ ವರುಷ 3 ಕನ್ನಡ ಮೀಡಿಯಂ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಲೇಖನಾ ಸಾಮಾಗ್ರಿ, ಯುನಿಫಾರ್ಮ್ ಮತ್ತು ಆಟಿಕೆಗಳನ್ನು ಹಂಚಿ ಜನಪ್ರೀಯಗೊಂಡಿದೆ. ಹಾಗೂ ಪ್ರತಿ ತಿಂಗಳು ನಿರಂತರವಾಗಿ ಕವಿಗೋಷ್ಠಿಗಳನ್ನು ನಡೆಸಿ ಪ್ರಖ್ಯಾತಗೊಂಡಿದೆ.