ಪುಣಚ ಪರಿಯಾಲ್ತಡ್ಕದಲ್ಲಿ ಸೌಹಾರ್ದ ಇಫ್ತಾರ್ ಸಂಗಮ

ಪುಣಚ ಪಿರ್ಸತ್ತೆ ಚಂಗಾಯಿಮಾರ್ ಪುಣಚ ಪ್ರೀತಿಯ ಗೆಳೆಯರು ಇವರ ಆಶ್ರಯದಲ್ಲಿ ರಂಝಾನ್ ಪ್ರಯುಕ್ತ ಬೃಹತ್ ಸೌಹಾರ್ದ ಇಫ್ತಾ ಕೂಟ ಮಾರ್ಚ್ 29ರಂದು ಶನಿವಾರ ಪುಣಚ ಪರಿಯಾಲ್ತಡ್ಕ ಜಂಕ್ಷನ್ ನಲ್ಲಿ ನಡೆಯಿತು.
ಪ್ರಗತಿಪರ ಕೃಷಿಕ ಜಯಶ್ಯಾಂ ನೀರ್ಕಜೆ ಮಾತನಾಡಿ ಪುಣಚ ಗ್ರಾಮವು ಸೌಹಾರ್ದತೆಯ ಗ್ರಾಮವಾಗಿದೆ. ಇದೇ ಮಾದರಿಯಲ್ಲಿ ಶಾಂತಿ ಸೌಹಾರ್ದತೆ ಎಲ್ಲಡೆ ನೆಲೆಗೊಳ್ಳಲಿ ಎಂದು ಆಶಿಸಿದರು. ಪುಣಚ ಪರಿಯಾಲ್ತಡ್ಕ ಜಮ್ಮ ಮಸೀದಿ ಅಧ್ಯಕ್ಶ ಎಂ.ಎಸ್. ಮಹಮ್ಮದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸೌಹಾರ್ದ ಇಫ್ತಾರ್ ಕೂಟದ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಶ್ರೀಧರ್ ಶೆಟ್ಟಿ ದೇವಗುಂಡಿ, ಉದಯ ಕುಮಾರ್ ದಂಬೆ, ಶ್ರೀಧರ್ ಶೆಟ್ಟಿ ಬೈಲುಗುತ್ತು, ರವಿಕಿರಣ್ ಆಜೇರು, ರಾಜೇಂದ್ರ ರೈ ಬೈಲುಗುತ್ತು, ಮೌರೀಸ್ ಟೆಲ್ಲಿಸ್, ಜಗನ್ನಾಥ ಶೆಟ್ಟಿ ಕೋಡಂದ್ರು, ಯೂಸುಪ್ ಗೌಸಿಯಾ ಸಾಜ ಹಾಗೂ ಪುಣಚ ಮಸೀದಿ ಧರ್ಮಗುರುಗಳು ಉಪಸ್ಥಿತರಿದ್ದರು.
ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಪುಣಚ ಪರಿಸರದ ಹಾಗೂ ವಿವಿಧ ಕಡೆಗಳಿಂದ ಹಲವಾರು ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಬಾಂಧವರು ಭಾಗವಹಿಸಿದ್ದರು.