ದಕ್ಷಿಣ ಕನ್ನಡ ಜಿಲ್ಲಾ SP ಯತೀಶ್ ಎನ್. ಸಹಿತ ಜಿಲ್ಲೆಯ ಇತರ ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಪೋಲಿಸ್ ಕರ್ತವ್ಯದಲ್ಲಿ ಅಪರಿಮಿತ ಸಾಧನೆಗೈದಾಗ ಅವರಿಗೆ ನೀಡುವ ಮುಖ್ಯಮಂತ್ರಿ ಪದಕದ ಪಟ್ಟಿಯಲ್ಲಿ 2022, 2023 ಹಾಗೂ 2024ರ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪೊಲೀಸರಿಗೆ ಮುಖ್ಯಮಂತ್ರಿ ಪದಕವು ದಕ್ಕಿದೆ.
2022ರ ಪದಕವು ಕಠಿಣ ಪರಿಶ್ರಮ ನಿಸ್ವಾರ್ಥ ಸೇವೆ ಹಾಗೂ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದ ಆಜಡ್ಕ ಪರಮೇಶ್ವರ ಗೌಡ ASI ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ; ಪದ್ಮಯ ರಾಣೆ ಪೊಲೀಸ್ ಇನ್ಸ್ ಪೆಕ್ಟರ್ ವೈಯರ್ ಲೆಸ್ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ; ನಾಗರಾಜ್ ಹೆಚ್.ಇ. ಪೊಲೀಸ್ ನಿರೀಕ್ಷಕರು ವಿಟ್ಲ ಪೊಲೀಸ್ ಠಾಣೆ ಹಾಗೂ ಎಸ್. ವಿಜಯ ಪ್ರಸಾದ್ ಪೊಲೀಸ್ ಉಪಾಧೀಕ್ಷಕರು ಬಂಟ್ವಾಳ ಉಪ ವಿಭಾಗ ಇವರಿಗೆ ದೊರಕಲಿರುವುದು.
2023ರ ಪದಕವು ಯತೀಶ್. ಎನ್. IPS ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಅದ್ರಾಮ. ಎನ್. ಮುಖ್ಯ ಪೇದೆ ಪುತ್ತೂರು ನಗರ ಠಾಣೆ ಇವರು ಪಡೆದು ಕೊಳ್ಳಲಿದ್ದಾರೆ. ಶಿವಕುಮಾರ ಬಿ., ಪೊಲೀಸ್ ಇನ್ಸ್ಪೆಕ್ಟರ್ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಪ್ರವೀಣ್ ಎಂ. ಹೆಡ್ ಕಾನ್ಸ್ಟೇಬಲ್ ಸೆನ್ ಪೊಲೀಸ್ ಠಾಣೆ, ದಕ್ಷಿಣ ಕನ್ನಡ ಜಿಲ್ಲೆ ಇವರಿಗೆ 2024ರ ಮುಖ್ಯಮಂತ್ರಿ ಪೊಲೀಸ್ ಪದಕವು ದಕ್ಕಲಿದೆ.
ಪೋಲಿಸ್ ಪದಕವು ಸಿಕ್ಕಿದ ಎಲ್ಲಾ ಪೊಲೀಸರು ಇನ್ನು ಮುಂದೆಯೂ ಕರ್ತವ್ಯದಲ್ಲಿ ಕಾರ್ಯತತ್ವರತೆ ತಂದು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ನೀಡುವ ಮುಖ್ಯಮಂತ್ರಿ ಪದಕ ಪ್ರಧಾನ ಕಾರ್ಯಕ್ರಮವು, ನಾಳೆ ಎಪ್ರಿಲ್ 2ರಂದು ಬುಧವಾರ ಬೆಳಿಗ್ಗೆ 8:00 ಗಂಟೆಗೆ ಕೆ.ಎಸ್.ಆರ್.ಪಿ. ಪೆರೇಡ್ ಗ್ರೌಂಡ್ ಕೋರಮಂಗಲ ಬೆಂಗಳೂರು ಇಲ್ಲಿ ನಡೆಯಲಿದೆ.