April 21, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 35ನೇ ಪದವಿ ಪ್ರದಾನ ಸಮಾರಂಭ

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 35ನೇ ಪದವಿ ಪ್ರದಾನ ಸಮಾರಂಭವನ್ನು ಎಪ್ರಿಲ್ 03 ರಂದು ಗುರುವಾರ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಯಿತು.

ಪ್ರವೇಶದ್ವಾರದಿಂದ ಬ್ಯಾಂಡ್ ಹಾಗೂ ಭವ್ಯ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವಂತಹ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಮುಖ್ಯ ಅತಿಥಿಗಳಾದ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ SJ, ಗೌರವ ಅತಿಥಿಗಳಾದ ಕೋಲ್ಕತ್ತಾದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೋಮಿಯೋಪಥಿ ಇದರ ಮಾಜಿ ನಿರ್ದೇಶಕರು ಡಾ. ಸುಭಾಸ್ ಸಿಂಗ್,  ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ನಿಯೋಜಿತ ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಮತ್ತು ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವಂದನೀಯ ಫಾದರ್ ಫೌಸ್ಟಿನ್ ಲೂಕಸ್ ಲೋಬೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂದನೀಯ ಅಶ್ವಿನ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್ ಇದರ ಆಡಳಿತಾಧಿಕಾರಿ ವಂದನೀಯ ಫಾದರ್ ನೆಲ್ಸನ್ ಧೀರಜ್ ಪಾಯ್ಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್, ಉಪ ಪ್ರಾಂಶುಪಾಲ ಡಾ. ವಿಲ್ಮಾ ಮೀರಾ ಡಿಸೋಜಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನವಾಡ ಯು.ಕೆ., 2025 ರ ಪದವಿ ಪ್ರದಾನ ಸಮಾರಂಭದ ಸಂಚಾಲಕಿ ಡಾ. ರೆಶೆಲ್ ನೊರೊನ್ಹಾ ಅವರನ್ನು ಸಾಂಪ್ರದಾಯಿಕ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯಲ್ಲಿ ಸರ್ವಶಕ್ತನ ಆಶೀರ್ವಾದವನ್ನು ಕೋರುವ ಮೂಲಕ ಔಪಚಾರಿಕ ಕಾರ್ಯಕ್ರಮವು ಪ್ರಾರಂಬಿಸಲಾಯಿತು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಸ್ವಾಗತ ಭಾಷಣದಲ್ಲಿ ಮಾನವಕುಲದ ಸೇವೆಯನ್ನು ಸಂಕೇತಿಸುವ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಶತಮಾನೋತ್ಸವ ಆಚರಣೆಯಲ್ಲಿ ಹೋಮಿಯೋಪಥಿ ಕಾಲೇಜಿನ ಪ್ರಾರಂಭದ ನೆನಪುಗಳನ್ನು ಮೆಲುಕು ಹಾಕಿದರು. ಹೋಮಿಯೋಪಥಿ ವಿಜ್ಞಾನವು ಪ್ರತಿನಿಧಿಸುವ ಸೇವೆಯನ್ನು ಇದು ಪ್ರತಿನಿಧಿಸುತ್ತದೆ ಎಂದು ವಿವರಿಸಿದರು ಮುಖ್ಯ ಅತಿಥಿ ಮತ್ತು ಗೌರವಾನ್ವಿತ ಅತಿಥಿಯನ್ನು ಪರಿಚಯಿಸಿದರು ಮತ್ತು ಸ್ವಾಗತಿಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರು 2024-25ನೇ ಶೈಕ್ಷಣಿಕ ವರ್ಷದ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಚಟುವಟಿಕೆಗಳ ವಿವರಣಾತ್ಮಕ ವಾರ್ಷಿಕ ವರದಿಯನ್ನು ಮಂಡಿಸಿದರು.

ಮುಖ್ಯ ಅತಿಥಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ SJ ಹಾಗೂ ಗೌರವ ಅತಿಥಿಗಳಾದ ಡಾ. ಸುಭಾಸ್ ಸಿಂಗ್ ಅವರು ಪದವೀಧರರನ್ನು ಸನ್ಮಾನಿಸಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು, ನಂತರ ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರ ನೇತೃತ್ವದಲ್ಲಿ ಪ್ರಮಾಣ ವಚನ ಬೋಧಿಸಿದರು. ಗೌರವ ಅತಿಥಿ ಡಾ. ಸುಭಾಸ್ ಸಿಂಗ್, ತಮ್ಮ ಸಂದೇಶದಲ್ಲಿ ಪದವಿದರರಿಗೆ ಫಾದರ್ ಮುಲ್ಲರ್ ಮತ್ತು ಮಾಸ್ಟರ್ ಹ್ಯಾನೆಮನ್ ಅವರ ಪರಂಪರೆಯನ್ನು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಎಲ್ಲಾ ಹೋಮಿಯೋಪಥಿ ಪಂಥದವರಿಗೆ ಗೌರವ ಸಲ್ಲಿಸುವ ಹೋಮಿಯೋಪಥಿ ವೈದ್ಯರುಗಳು ರಾಯಭಾರಿಗಳಾಗಿ ಜವಾಬ್ದಾರಿಗಳನ್ನು ವಹಿಸಬೇಕೆಂದು ನೆನಪಿಸಿದರು. ಈ ಸಂದರ್ಭದಲ್ಲಿ 89 ಹೋಮಿಯೋಪಥಿ ಪದವೀಧರರು ಪದವಿ ಪಡೆದರು ಮತ್ತು 26 ಸ್ನಾತಕೋತ್ತರ ಪದವೀಧರರಿಗೆ ಸ್ನಾತಕೋತ್ತರ ಪದವಿಯನ್ನು ನೀಡಲಾಯಿತು. ಮುಖ್ಯ ಅತಿಥಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ SJ, ತಮ್ಮ ಸಂದೇಶದಲ್ಲಿ ಪದವಿ ಪ್ರದಾನ ಭಾಷಣದಲ್ಲಿ ದಕ್ಷಿಣ ಕನ್ನಡದಲ್ಲಿ 40 ವರ್ಷಗಳ ಸ್ಥಾಪನೆಯ ಪ್ರಮುಖ ಮೈಲಿಗಲ್ಲನ್ನು ಪೂರೈಸಿದಕ್ಕಾಗಿ ಸಂಸ್ಥೆಯನ್ನು ಅಭಿನಂದಿಸಿದರು. ಫಾದರ್ ಮುಲ್ಲರ್ ಅವರ ದೃಷ್ಟಿಕೋನ ಮತ್ತು ಹೋಮಿಯೋಪಥಿಯ ಭವಿಷ್ಯದ ರಾಯಭಾರಿಗಳಾಗಿ ಉದಯೋನ್ಮುಖ ವೈದ್ಯರಿಗೆ ಜೀವನದ ಕೆಲವು ತತ್ವಗಳನ್ನು ಅಳವಡಿಸಲು ತಿಳಿಸಿದರು – ಎಂದಿಗೂ ಕಲಿಯುವುದನ್ನು ನಿಲ್ಲಿಸಬೇಡಿ, ಸಹಾನುಭೂತಿಯಿಂದ ಸೇವೆ ಮಾಡಿ ಸ್ಥಿತಿಸ್ಥಾಪಕರಾಗಿರಿ ಎಂದು ತಿಳಿಸಿದರು. ಪದವೀಧರರ ಪರವಾಗಿ, ಡಾ. ಆಶಾ ಡಿಸೋಜಾ ಸಂಸ್ಥೆಗಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಘೋಷಿಸಿದ ಸೆಪ್ಟೆಂಬರ್ 2018 ರಿಂದ ಅಕ್ಟೋಬರ್ 2022 ರವರೆಗೆ ನಡೆಸಿದ ಹೋಮಿಯೋಪಥಿ ಪದವಿ ಪರೀಕ್ಷೆಯಲ್ಲಿ 6 ಪದವಿ ರ‍್ಯಾಂಕ್‌ ಪಡೆದ ಹಾಗೂ ಅಕ್ಟೋಬರ್2022 ಹಾಗೂ ಮಾರ್ಚ್ 2024 ರ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 11 ಸ್ನಾತಕೋತ್ತರ ಪದವಿ ರ‍್ಯಾಂಕ್‌ ಪಡೆದವರನ್ನು ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವಂತಹ ಮಂಗಳೂರು ಧರ್ಮಕ್ಷೇತ್ರದ  ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು, 2021-22ರ ಸಾಲಿನ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗೆ ಮುಲ್ಲೇರಿಯನ್ಸ್ ಪ್ರಾಯೋಜಿಸಿದ ಡಾ. ಸುಮೋದ್ ಜಾಕೋಬ್ ಸೊಲೊಮನ್ ಪ್ರಶಸ್ತಿಯನ್ನು ಡಾ. ಶ್ರೆಯ್ಯಾಂಕ್. ಎಸ್ ಕೋಟ್ಯಾನ್ ಗೆ ನೀಡಲಾಯಿತು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯು ನೀಡುವ ಅಧ್ಯಕ್ಷರ ಚಿನ್ನದ ಪದಕವನ್ನು5½ ವರ್ಷದ ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಮತ್ತು ಶಿಕ್ಷಕೇತರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮುತ್ತು ವಲ್ಲಿಯಮ್ಮೈ ನಾಚಿಯಪ್ಪನ್ ನೀಡಲಾಯಿತು. ಪದವಿ ವಿದ್ಯಾರ್ಥಿಗಳ ಶ್ರೇಷ್ಠತಾ ಪ್ರಶಸ್ತಿಯನ್ನು ಡಾ. ಎ.ಕೆ. ದೇವಿಕಾ ಮತ್ತು ಸ್ನಾತಕೋತ್ತರ ಪದವೀಧರ ಶ್ರೇಷ್ಠತಾ ಪ್ರಶಸ್ತಿಯನ್ನು ಡಾ. ವಿ.ಆರ್. ಕೃಷ್ಣ ಕಿರಣ್ ಭಟ್ ಪಡೆದರು.

ಕಾರ್ಯಕ್ರಮದ ಮುಖ್ಯ ಅತಿಥಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ SJ ಮತ್ತು ಗೌರವ ಅತಿಥಿಗಳಾದ ಡಾ. ಸುಭಾಸ್ ಸಿಂಗ್ ಅವರನ್ನು ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಸನ್ಮಾನಿಸಿದರು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲಾ ಪದವೀಧರರು ಮತ್ತು ಬಹುಮಾನ ವಿಜೇತರನ್ನು ಅಭಿನಂದಿಸಿದರು. ಹೋಮಿಯೋಪಥಿ ತತ್ವಗಳೊಂದಿಗೆ ಸಮಗ್ರವಾಗಿ ಹೋಮಿಯೋಪಥಿ ಕಲಿಕೆ ಮತ್ತು ಗುಣಪಡಿಸುವಿಕೆಯ ಪ್ರಯಾಣವನ್ನು ಹಾಗೂ ತಾಂತ್ರಿಕ ಪ್ರಗತಿಯನ್ನು ಗುರುತಿಸಿ, ಕಲಿಯುವುದನ್ನು ಮುಂದುವರಿಸಿ, ಮಾನವೀಯತೆಯ ಸೇವೆಯಲ್ಲಿ ಮಾನವ ಸ್ಪರ್ಶ ಮತ್ತು ಸಹಾನುಭೂತಿಯ ಶಕ್ತಿಯನ್ನು ಎತ್ತಿಹಿಡಿಯಬೇಕೆಂದು ಅವರು ತಿಳಿಸಿದರು. ನಂತರ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಕಾರ್ಯಕ್ರಮದ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ಕೃತಜ್ಞತೆಯ ಸಂಕೇತದೊಂದಿಗೆ ಸನ್ಮಾನಿಸಿದರು.

ನಿಯೋಜಿತ ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಮತ್ತು ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವಂದನೀಯ ಫಾದರ್ ಫೌಸ್ಟಿನ್ ಲೂಕಸ್ ಲೋಬೊ ಅವರು ವಂದಾನರ್ಪಣೆಗೈದರು. ಪದವಿ ಪ್ರದಾನ ಸಮಾರಂಭವು ಸಂಸ್ಥೆಯ ಗೀತೆ ಮತ್ತು ಪದವೀಧರರು ಮತ್ತು ಗಣ್ಯರ ಗೌರವದೊಂದಿಗೆ ಮುಕ್ತಾಯಗೊಂಡಿತು. ಡಾ. ಸ್ಕಂದನ್ ಎಸ್. ಕುಮಾರ್ ಮತ್ತು ಡಾ. ಆ್ಯಡ್ಲಿನ್ ಆರ್. ಗೊನ್ಸಾಲ್ವಿಸ್ ಅವರು ಪದವಿ ಪ್ರದಾನ ಸಮಾರಂಭವನ್ನು ನಿರೂಪಿಸಿದರು.

ಅದೇ ದಿನ ಬೆಳಿಗ್ಗೆ 6.30ಕ್ಕೆ ದೇರಳಕಟ್ಟೆಯ ಅವರ್ ಲೇಡಿ ಆಫ್ ಲೂರ್ಡ್ಸ್ ಚಾಪೆಲ್‌ನಲ್ಲಿ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅವರಿಂದ ಕೃತಜ್ಞತಾ ಪ್ರಸಾದ ವಿನಿಯೋಗ ನಡೆಯಿತು. ಇದರಲ್ಲಿ ಪದವೀಧರರು, ಅವರ ಪೋಷಕರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂದನೀಯ ಅಶ್ವಿನ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್ ನ ಆಡಳಿತಾಧಿಕಾರಿ ವಂದನೀಯ ಫಾದರ್ ನೆಲ್ಸನ್ ಧೀರಜ್ ಪಾಯ್ಸ್,  ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪ ಪ್ರಾಂಶುಪಾಲ ಡಾ. ವಿಲ್ಮಾ ಮೀರಾ ಡಿಸೋಜಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನವಾಡ ಯು.ಕೆ., ಕಾರ್ಯಕ್ರಮದ ಸಂಚಾಲಕಿ ಡಾ. ರೆಶೆಲ್ ನೊರೊನ್ಹಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

 

You may also like

News

MLC ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರಿಂದ ಬಿಷಪ್ಸ್ ಹೌಸ್ ನಲ್ಲಿ ಪೋಪ್ ರವರಿಗೆ ಅಂತಿಮ ನಮನ

ಕ್ರಿಶ್ಚಿಯನ್ನರ ಪರಮೋಚ್ಚ ಜಗದ್ಗುರು ಪೋಪ್ ಫ್ರಾನ್ಸಿಸ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಂದು ಎಪ್ರಿಲ್ 21ರಂದು ಸೋಮವಾರ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್
News

ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಮತ್ತು ಆಧುನಿಕ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪರಿವರ್ತನಾಶೀಲ ವ್ಯಕ್ತಿಯಾಗಿದ್ದ ಜಗದ್ಗುರು ಪೋಪ್ ಫ್ರಾನ್ಸಿಸ್ ಇಂದು ಏಪ್ರಿಲ್ 21ರಂದು ಸೋಮವಾರ ತಮ್ಮ 88

You cannot copy content of this page