August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಗೋಳ್ತಮಜಲಿನ ನೆಟ್ಲ ಶಾಲೆಯಲ್ಲಿ ಮಕ್ಕಳ ಸಂಭ್ರಮದ ಹಪ್ಪಳ ತಯಾರಿಕಾ ಶಿಬಿರ

ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಭ್ರಮದ ಹಪ್ಪಳ ತಯಾರಿಕಾ ಶಿಬಿರ ಜರಗಿತು.

ಶಾಲಾ ಹಿರಿಯ ವಿದ್ಯಾರ್ಥಿ ಜಯರಾಮ್ ನಾವಡರವರ ನೇತೃತ್ವದಲ್ಲಿ ದೂರದ ಪುತ್ತೂರಿನಿಂದ ಹಲಸಿನಕಾಯಿ ತಂದು ಶಾಲೆಯಲ್ಲಿ ಮಕ್ಕಳಿಗೆ ಹಪ್ಪಳ ಮಾಡುವ ರೀತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ಮಕ್ಕಳ ಜೊತೆ ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಜೊತೆ ಸೇರಿಕೊಂಡರು.

ಹಿಂದಿನ ಕಾಲದ ಅನೇಕ ವಿದ್ಯೆಗಳು ಮರೆತು ಹೋಗುವ ಸಂದರ್ಭದಲ್ಲಿ ಅಂತಹ ವಿದ್ಯೆಗಳನ್ನು ನೆನಪಿಸುವ ಉದ್ದೇಶಕ್ಕೋಸ್ಕರ ಹಪ್ಪಳ ತಯಾರಿಕ ಶಿಬಿರವನ್ನು ಹಮ್ಮಿಕೊಂಡಿದ್ದೇವೆ, ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ತೀರ ಬಡತನದ ಮಧ್ಯೆಯು ಮಳೆಗಾಲದ ಆಹಾರಕ್ಕೋಸ್ಕರ ಯಾವ ರೀತಿ ಆಹಾರ ಪದಾರ್ಥಗಳನ್ನು ಮಾಡಿ ಶೇಖರಣೆ ಮಾಡುತ್ತಿದ್ದರು ಎಂದು ಈಗಿನ ಮಕ್ಕಳಿಗೆ ತಿಳಿಪಡಿಸುವ ಉದ್ದೇಶದಿಂದ ಈ ಹಪ್ಪಳ ತಯಾರಿಕ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ಕಾರ್ಯಕ್ರಮದ ರೂವಾರಿ ಶಾಲಾ ಹಿರಿಯ ವಿದ್ಯಾರ್ಥಿ ಜಯರಾಮ ನಾವಡ ತಿಳಿಸಿದರು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page