October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು ಬೆಳ್ತಂಗಡಿಯ ಶಂಸುಲ್ ಉಲಮಾ ನಗರದಲ್ಲಿ ಬರುವ ಡಿಸೆಂಬರ್ 17ರಿಂದ 20ರವರೆಗೆ “ದಿಶೆ ತೋರಿದ ದಶ ವರ್ಷಗಳು” ಎಂಬ ಅರ್ಥಪೂರ್ಣ ಧ್ಯೇಯವಾಕ್ಯದೊಂದಿಗೆ ಅತ್ಯಂತ ಸಡಗರದಿಂದ ಜರುಗಲಿದೆ.

ಇದರ ಪೂರ್ವಭಾವಿಯಾಗಿ ಮಿತ್ತಬೈಲ್‌ನ ಮುಹಿಯ್ಯುದ್ದೀನ್ ಕಮ್ಯುನಿಟಿ ಹಾಲ್‌ನಲ್ಲಿ ಸ್ವಾಗತ ಸಮಿತಿ ರಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ದಾರುಸ್ಸಲಾಂ ಸೆಂಟರ್‌ನ ಗೌರವಾನ್ವಿತ ಅಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಗಳ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯನ್ನು ಮಿತ್ತಬೈಲ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಝಾಕ್ ನಿಝಾಮಿ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ಸ್ವಾಗತ ಸಮಿತಿಯ ಪದಾಧಿಕಾರಿಗಳ ವಿವರ:

ಮಹಾಸಭೆಯನ್ನು ಯಶಸ್ವಿಗೊಳಿಸಲು ವಿವಿಧ ಜವಾಬ್ದಾರಿಗಳೊಂದಿಗೆ ಸಮಿತಿಯನ್ನು ರೂಪಿಸಲಾಗಿದ್ದು, ಪ್ರಮುಖ ಪದಾಧಿಕಾರಿಗಳ ಆಯ್ಕೆ ಈ ಕೆಳಗಿನಂತಿದೆ:

* ನಿರ್ದೇಶಕರು: ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್, ಶೈಖುನಾ ಸುಲೈಮಾನ್ ಫೈಝಿ ಚುಂಗತ್ತರ, ಸಯ್ಯಿದ್ ಅಸ್ಗರ್ ಅಲಿ ತಂಗಳ್ ಯು.ಎ.ಇ.

* ಗೌರವಾಧ್ಯಕ್ಷರು: ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಗಳ್ ಬೆಳ್ತಂಗಡಿ

* ಅಧ್ಯಕ್ಷರು: ಸಾಗರ್ ಮುಹಮ್ಮದ್ ಹಾಜಿ ಮಿತ್ತಬೈಲ್

* ಕಾರ್ಯಾಧ್ಯಕ್ಷರು: ಸಯ್ಯಿದ್ ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿ

* ಪ್ರಧಾನ ಸಂಚಾಲಕರು: ಡಿ.ಡಿ. ಅಬ್ದುಲ್ ರಝಾಕ್ ಹಾಜಿ ಕನ್ನಡಿಕಟ್ಟೆ

* ಕೋಶಾಧಿಕಾರಿ: ರಫೀಕ್ ಗಂಡಿ ಬಾಗಿಲು

* ವರ್ಕಿಂಗ್ ಕನ್ವೀನರ್: ಅಬ್ದುಲ್ ಅಝೀಝ್ ಅಶ್ಶಾಫೀ

ಉಪಾಧ್ಯಕ್ಷರುಗಳು:

ಮೂಸಾ ದಾರಿಮಿ ಕಕ್ಕಿಂಜೆ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಸಾಗರ್ ಮಜೀದ್ ಹಾಜಿ, ಸಿ.ಕೆ. ಇಬ್ರಾಹಿಂ ಹಾಜಿ ಮೂಡಿಗೆರೆ, ಝುಬೈರ್ ದಾರಿಮಿ ಪೈಕ, ಅಹ್ಮದ್ ಹುಸೈನ್ ಮೂಡುಬಿದಿರೆ.

ಸಹ ಸಂಚಾಲಕರುಗಳು:

ರಫೀಕ್ ಫೈಝಿ ಕನ್ಯಾನ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಅಯ್ಯುಬ್ ಕರಾಯ, ರಫೀಕ್ ಹೊಸಂಗಡಿ, ಶಾಕಿರ್ ರಾಜಧಾನಿ, ಯೂಸುಫ್ ಪೊಂಜಿಲ, ಮಜೀದ್ ಮೆಲ್ಕಾರ್.

ವಿವಿಧ ಉಪಸಮಿತಿಗಳ ರಚನೆ:

ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗಾಗಿ ಪ್ರತ್ಯೇಕ ವಿಭಾಗೀಯ ಸಮಿತಿಗಳನ್ನು ರಚಿಸಲಾಗಿದೆ:

* ಹಣಕಾಸು (ಫೈನಾನ್ಸಿಯಲ್) ಸಮಿತಿ: ಲತೀಫ್ ಫೈಝಿ ಸುಂಕದಕಟ್ಟೆ (ಅಧ್ಯಕ್ಷರು), ಅಶ್ರಫ್ ಮರೋಡಿ (ಕನ್ವೀನರ್), ಯು.ಕೆ. ಮೋನು ಕಕ್ಕಿಂಜೆ (ಕೋಶಾಧಿಕಾರಿ).

* ನಿರ್ವಾಹಕ ಸಮಿತಿ: ಅಝೀಝ್ ಕಿಡ್ಸ್ (ಅಧ್ಯಕ್ಷರು), ಶರೀಫ್ ಕಲಾಯಿ ಮತ್ತು ಸಿರಾಜ್ ಚಿಲಿಂಬಿ (ಸಂಚಾಲಕರು).

* ಅತಿಥಿ ಸ್ವೀಕಾರ ಸಮಿತಿ: ಬಶೀರ್ ದಾರಿಮಿ ನಾವೂರು (ಅಧ್ಯಕ್ಷರು), ಅಬ್ದುಲ್ ರಹಿಮಾನ್ ಹಾಜಿ ಸಿಟಿಲ್ಯಾಂಡ್ (ಸಂಚಾಲಕರು).

* ಸ್ವಯಂ ಸೇವಕರ ಸಮಿತಿ: ಲತೀಫ್ ಕರಾಯ (ಅಧ್ಯಕ್ಷರು), ಲತೀಫ್ ಪಾಂಡವರಕಲ್ಲು (ಸಂಚಾಲಕರು).

* ಮಾಧ್ಯಮ ಸಮಿತಿ: ನಿಯಾಝ್ ನಿಝಾಮಿ ಪರಪ್ಪು ಹಾಗೂ ಮುಹಮ್ಮದ್ ಇಸ್ಹಾಕ್ ಕೌಸರಿ ಪರ್ಲೋಟ್ಟು (ಅಧ್ಯಕ್ಷರುಗಳು).

ಸಭೆಯ ಆರಂಭದಲ್ಲಿ ದಾರುಸ್ಸಲಾಂ ಸೆಂಟ್ರಲ್ ಕಮಿಟಿಯ ಜೊತೆ ಕಾರ್ಯದರ್ಶಿ ಹಮೀದ್ ಕಣ್ಣೂರು ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಝಕರಿಯಾ ಫೈಝಿ ಮಾಡನ್ನೂರು ಅವರು ಧನ್ಯವಾದ ಸಮರ್ಪಿಸುವುದರೊಂದಿಗೆ ಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

You may also like

News

ಮಂಡ್ಯ ASP ತಿಮ್ಮಯ್ಯ ಇನ್ನಿಲ್ಲ – ಪೊಲೀಸ್ ಇಲಾಖೆಯಲ್ಲಿ ಶೋಕ

ಉಡುಪಿ, ಮಣಿಪಾಲ, ಕೋಟದಲ್ಲೂ ಸೇವೆ ಸಲ್ಲಿಸಿದ್ದ ಅಧಿಕಾರಿ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ASP) ತಿಮ್ಮಯ್ಯ ಅವರು ಅನಾರೋಗ್ಯದಿಂದ ಇಂದು ಅಕ್ಟೋಬರ್ 10ರಂದು ಶನಿವಾರ ನಿಧನರಾಗಿದ್ದಾರೆ.
News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು

You cannot copy content of this page