ತಪಸ್ಸು ಕಾಲದ ಪವಿತ್ರ ವಾರದಲ್ಲಿ ಪರೀಕ್ಷಾ ಮೌಲ್ಯಮಾಪನ ರದ್ದುಗೊಳಿಸಲು ಕಥೊಲಿಕ್ ಸಭಾ ಒತ್ತಾಯ

ಮನವಿಗೆ ತಕ್ಷಣ ಸ್ಪಂಧಿಸಿದ ಜಿಲ್ಲಾ ಉಸ್ತುವಾರಿ ಸಚಿವರು
ಹತ್ತನೇ ತರಗತಿಯ ಮೌಲ್ಯಮಾಪವನ್ನು ಈ ಬಾರಿ ಏಪ್ರಿಲ್ 15ರಿಂದ 10 ದಿನಗಳ ಕಾಲ ನಡೆಸುವುದು ಕಥೋಲಿಕ ಸಮುದಾಯದ ವ್ಯಾಪಕ ಬೇಸರಕ್ಕೆ ಕಾರಣವಾಗಿದೆ. ಈ ವಾರವು ಕ್ರೈಸ್ತ ಸಮುದಾಯಕ್ಕೆ ಅತ್ಯಂತ ಪವಿತ್ರ ವಾರವಾಗಿದೆ. ತಪಸ್ಸು ಕಾಲದ ಕಟ್ಟ ಕಡೆಯ ವಾರದ ಶುಭ ಗುರುವಾರದಂದು ಏಸುಕ್ರಿಸ್ತರ ಭೋಜನ ಹಾಗೂ ಶುಕ್ರವಾರದಂದು (ಗುಡ್ ಫ್ರೈಡೆ) ಏಸುಕ್ರಿಸ್ತರು ಶಿಲುಬೆಯಲ್ಲಿ ನಿಧನ ಹೊಂದಿದ ದಿನವಾಗಿ ಮತ್ತು ಶನಿವಾರ ಸಾಯಂಕಾಲದಂದೇ ಪ್ರಪಂಚದಾದ್ಯಂತ ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತದೆ.
ಹೀಗಿರುವಾಗ ಕಳೆದ ಏಳುವರೆ ದಶಕಗಳಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಯಾವತ್ತೂ ಶಿಕ್ಷಕರಿಗೆ ಶುಭವಾರದಂದು ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಕರೆದಿರಲಿಲ್ಲ. ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯವು ತಪಸ್ಸು ಕಾಲದ ಈ ಮಾಸವನ್ನು, ಪವಿತ್ರ ಮಾಸವೆಂದು ಪರಿಗಣಿಸಿ 40 ದಿವಸ ಉಪವಾಸವನ್ನು ನಡೆಸಿ ಚರ್ಚ್ ಗಳಲ್ಲಿ ಪ್ರಾರ್ಥನೆ ಯನ್ನು ನಡೆಸುತ್ತಾ ಪಾಪ ಪರಿಹಾರಕ್ಕಾಗಿ ಪ್ರಾರ್ಥಿಸುವ ಸಂಪ್ರದಾಯವನ್ನು ಹಿಂದಿನಿಂದಲೂ ನಡೆದುಕೊಂಡು ಬoದಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಕ್ರೈಸ್ತ ಶಿಕ್ಷಕರು ಇರುವುದರಿಂದಾಗಿ ಮೌಲ್ಯಮಾಪನಕ್ಕೆ ಹೋದರೆ ಶುಭ ಗುರುವಾರ, ಗುಡ್ ಫ್ರೈಡೇ ಮತ್ತು ಈಸ್ಟರ್ ಹಬ್ಬವನ್ನು ಆಚರಿಸಲು ಅಸಾಧ್ಯಗಲಿದೆ. ಈ ದಿನಗಳಲ್ಲಿ ಶಿಕ್ಷಕರಿಗೆ ರಿಯಾಯತಿಯನ್ನು ಕೇಳಿಕೊಂಡು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರ ನೇತತ್ವದಲ್ಲಿ ನಿಯೋಗವು ತೆರಳಿ ಕ್ರೈಸ್ತ ಶಿಕ್ಷಕರಿಗೆ ರಜೆ ನೀಡಬೇಕೆಂದು ಕೇಳಿಕೊಂಡರು. ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ಬೋರ್ಡ್ ಬೆಂಗಳೂರು ಡೈರೆಕ್ಟರ್ ರವರಿಗೆ ಕರೆ ಮಾಡಿ, ಗುರುವಾರ ಮತ್ತು ಶುಕ್ರವಾರದಂದು ರಜೆಯನ್ನು ನೀಡಬೇಕೆಂದು ಹೇಳಿದರು.
ಸಚಿವರು ವಿದ್ಯಾಂಗ ಉಪನಿರ್ದೇಶಕರಲ್ಲಿ ಹಾಗೂ ಅಧಿಕಾರಿ ವರ್ಗದವರಲ್ಲಿ ಸಮಾಲೋಚಿಸಿ ಈ ರಜೆಯನ್ನು ನೀಡುವುದಾಗಿ ಭರವಸೆಯನ್ನು ನೀಡಿರುತ್ತಾರೆ. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇವರ ಮನವಿಗೆ ತಕ್ಷಣ ಸ್ಪಂಧಿಸಿದ ಮಾನ್ಯ ದಿನೇಶ್ ಗುಂಡೂರಾವ್ ರವರಿಗೆ ಕಥೋಲಿಕ್ ಸಮುದಾಯವು ಅಭಿನಂದನೆಯನ್ನು ಸಲ್ಲಿಸುತ್ತಿದೆ.
ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೇರೊ, ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತಾ, ಪೆಜಾರ್ ವಲಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಹಾಗೂ ಸಿಟಿ ವಲಯ ಅಧ್ಯಕ್ಷ ಅರುಣ್ ಡಿಸೋಜ ಉಪಸ್ಥಿತರಿದ್ದರು.