ಬೆದರಿಕೆಯ ದೈಹಿಕ ಸಂಪರ್ಕದಿಂದಾಗಿ ಬಾಲಕಿ ಗರ್ಭಿಣಿ – ಆರೋಪಿಯ ಮೇಲೆ ಕೇಸು ದಾಖಲು

ಆಟೋ ಚಾಲಕ ಮಂಜುನಾಥ್ ಕಟ್ಟತಡ್ಕ ಎಂಬಾತನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕಾಲೇಜಿಗೆ ರಜೆ ಇದ್ದ ದಿನದಂದು, ಬಾಲಕಿ ಮನೆಯಲ್ಲಿ ಒಬ್ಬಳೇ ಇರುವಾಗ ನೀರು ಕೇಳುವ ನೆಪದಲ್ಲಿ ಬಂದು ಬಲಾತ್ಕಾರವಾಗಿ ದೈಹಿಕ ಸಂಪರ್ಕವನ್ನು ಹೊಂದಿದ್ದಾನೆ.
ಬಳಿಕ ಯಾರಲ್ಲೂ ಹೇಳದಂತೆ ಬೆದರಿಕೆಯನ್ನು ಒಡ್ಡಿತ್ತಾನೆ. ಈ ಘಟನೆಯ ಬಳಿಕ ಆರೋಪಿತನು ಬಾಲಕಿಯನ್ನು ಬೆದರಿಸಿ ಇದೇ ರೀತಿ ಏಳೆಂಟು ಬಾರಿ ದೈಹಿಕ ಸಂಪರ್ಕ ಮಾಡಿದ್ದು, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕೊನೆಯ ಬಾರಿ ದೈಹಿಕ ಸಂಪರ್ಕ ಮಾಡಿರುತ್ತಾನೆ.
ಏಪ್ರಿಲ್ 5 ರಂದು ಬಾಲಕಿಯ ಆರೋಗ್ಯ ತಪಾಸಣೆಗೆ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವಳು ಗರ್ಭಿಣಿ ಎಂದು ತಿಳಿದುಬಂತು.
ಅಪ್ರಾಪ್ತೆ ಸಂತ್ರಸ್ತೆ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿರುವ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ಧ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 64(2) (m), 352(3) BNS 2023 ಮತ್ತು ಕಲಂ 5(l) ಜೊತೆಗೆ 6 ಪೋಕ್ಸೋ ಕಾಯಿದೆ 2012 ರಂತೆ ಪ್ರಕರಣ ದಾಖಲಾಗಿರುತ್ತದೆ.