November 2, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಕಥೊಲಿಕ್ ಸಭಾ ವಾರ್ಷಿಕ ಚುನಾವಣೆ

ಅಧ್ಯಕ್ಷರಾಗಿ ಎಲಿಯಾಸ್ ಪಿರೇರಾ ಹಾಗೂ ಉಪಾಧ್ಯಕ್ಷರಾಗಿ ಸಿರಿಲ್ ಡಿಸೋಜ ಸರ್ವಾನುಮತದಿಂದ ಆಯ್ಕೆ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಸೂರಿಕುಮೇರು ಬೊರಿಮಾರ್ ಘಟಕದ 2025-26ನೇ ಸಾಲಿನ ವಾರ್ಷಿಕ ಚುನಾವಣೆಯು ಇಂದು ಎಪ್ರಿಲ್ 6ರಂದು ಆದಿತ್ಯವಾರ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ನಡೆಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ತನ್ನ ನಿಷ್ಠಾವಂತ ಸೇವೆ ಸಲ್ಲಿಸಿ ಜನರ ಮನಗೆದ್ದ ಎಲಿಯಾಸ್ ಪಿರೇರಾ ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಕೃಷಿಕ ಸಿರಿಲ್ ಡಿಸೋಜ ಸರ್ವಾನುಮತದಿಂದ ಆಯ್ಕೆಯಾದರು.

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಕಥೊಲಿಕ್ ಸಭಾ ಸಂಘಟನೆಯು ಒಂದು ಬಲಿಷ್ಠ ಸಂಘಟನೆಯಾಗಿದ್ದು ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಎಂಬ ಬೇಧ ಭಾವವಿಲ್ಲದೆ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸಿ ಸೇವೆಯನ್ನು ನೀಡುತ್ತಾ ಬಂದಿರುವ ಜನಮೆಚ್ಚಿದ ಸಂಘಟನೆಯಾಗಿದೆ. ಸೂರಿಕುಮೇರು ಚರ್ಚ್ ಅಭಿವೃದ್ಧಿಯ ಪಥದಲ್ಲಿ ಸಾಗಲು ಕಥೊಲಿಕ್ ಸಭಾ ಸಂಘಟನೆಯು ದಿಟ್ಟ ಹೆಜ್ಜೆಯನ್ನು ಇಡುತ್ತಾ ಬಂದಿದೆ. ಚರ್ಚ್ ಧರ್ಮಗುರುವಿನೊಂದಿಗೆ ಸದಾ ನಿಕಟ ಸಂಪರ್ಕವನ್ನು ಇಟ್ಟು ಚರ್ಚ್ ನಲ್ಲಿ ಆಗುವ ಯಾವುದೇ ಕಾರ್ಯಕ್ರಮಗಳಿಗೆ ಸದಾ ಒಮ್ಮನಸ್ಸಿನಿಂದ ಸಹಕಾರವನ್ನು ನೀಡಿ ಜನರ ಮನಸ್ಸುಗಳನ್ನು ಗೆದ್ದಿದೆ.

2025-26ನೇ ಸಾಲಿಗೆ ಪದಾಧಿಕಾರಿಗಳಾಗಿ ಎಲಿಯಾಸ್ ಪಿರೇರಾ – ಅಧ್ಯಕ್ಷ, ಸಿರಿಲ್ ಡಿಸೋಜ – ಉಪಾಧ್ಯಕ್ಷ, ರೋಷನ್ ಬೊನಿಫಾಸ್ ಮಾರ್ಟಿಸ್ – ಕಾರ್ಯದರ್ಶಿ, ಸ್ಟೀವನ್ ಆಲ್ವಿನ್ ಪಾಯ್ಸ್ – ಸಹಕಾರ್ಯದರ್ಶಿ, ಎವರೆಸ್ಟ್ ಪಿಂಟೊ – ಖಜಾಂಚಿ, ಲೀಯೊ ಡಿಸೋಜ. – ಆಮ್ಚೊ ಸಂದೇಶ್ ಪ್ರತಿನಿಧಿ, ಮೇರಿ ವೇಗಸ್ – ಸ್ತ್ರೀ ಹಿತ ಸಂಚಾಲಕಿ, ಪ್ರೀತಿ ಡಿನ್ನಾ ಪಿರೇರಾ – ರಾಜಕೀಯ ಸಂಚಾಲಕಿ, ಸ್ಟೀವನ್ ಪ್ರಕಾಶ್ ಮಾರ್ಟಿಸ್ – ಸಮುದಾಯ ಅಭಿವೃದ್ಧಿ ಸಂಚಾಲಕ, ವಿಕ್ಟರ್ ಎಂ. – ಯುವ ಹಿತ ಸಂಚಾಲಕರಾಗಿ ಆಯ್ಕೆಯಾಗಿರುತ್ತಾರೆ.

ಆ್ಯಂಟನಿ ಡಿಸೋಜ ಮತ್ತು ಎಮಿಲ್ಡಾ ಡಿಸೋಜ ಚುನಾವಣಾಧಿಕಾರಿಯಾಗಿದ್ದರು. ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳನ್ನು ಸೂರಿಕುಮೇರು ಬೊರಿಮಾರ್ ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಪ್ರಧಾನ ಕಾರ್ಯದರ್ಶಿ ಎ.ಪಿ. ಮೊಂತೇರೊ, ನಿಕಟ ಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ, ಮಾಜಿ ಅಧ್ಯಕ್ಷರಾದ ಪಾವ್ಲ್ ರೋಲ್ಫಿ ಡಿಕೋಸ್ತ, ಅನಿಲ್ ಲೋಬೊ ಹಾಗೂ ಪೆಜಾರ್ ವಲಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಸಿಟಿ ವಲಯ ಅಧ್ಯಕ್ಷ ಅರುಣ್ ಡಿಸೋಜ ಹಾಗೂ ಸೂರಿಕುಮೇರು ಘಟಕದ ಎಲ್ಲಾ ಸದಸ್ಯರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

You may also like

News

ರೌಡಿ ಟೋಪಿ ನೌಫಾಲ್ ಉಪ್ಪಳದಲ್ಲಿ ಬರ್ಬರ ಹತ್ಯೆ  

ರೈಲ್ವೇ ಗೇಟ್ ಬಳಿ ಮಾತುಕತೆಗೆ ಕರೆದು ಕೊಲೆಗೈದ ಶಂಕೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದ 38 ವರ್ಷ ಪ್ರಾಯದ ನಟೋರಿಯಸ್
News

ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ — ಸಚಿವ ದಿನೇಶ್ ಗುಂಡೂರಾವ್ ಅವರ ಉತ್ಸಾಹಭರಿತ ರಾಜ್ಯೋತ್ಸವ ಸಂದೇಶ

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, MLC ಐವನ್ ಡಿಸೋಜ, MLC ಮಂಜುನಾಥ್ ಭಂಡಾರಿ ಇವರ ಘನ ಉಪಸ್ಥಿತಿಯಲ್ಲಿ ನೆಹರು ಮೈದಾನದಲ್ಲಿ ಬಣ್ಣದ ಸಂಭ್ರಮ

You cannot copy content of this page