ಕಾರವಾರ ಧರ್ಮಕ್ಷೇತ್ರದ ಕಥೊಲಿಕ್ ಅಸೋಸಿಯೇಶನ್ ವತಿಯಿಂದ ರಾಜಕೀಯ ಜಾಗೃತಿ ಶಿಬಿರ

ಕಾರವಾರ ಥರ್ಮಕ್ಷೇತ್ರದ ಕಥೊಲಿಕ್ ಅಸೋಸಿಯೇಷನ್ ವತಿಯಿಂದ ಕಾರವಾರ ಧರ್ಮಕ್ಷೇತ್ರದ ಮಟ್ಟದಲ್ಲಿ ರಾಜಕೀಯ ಜಾಗೃತಿ ಶಿಬಿರವನ್ನು ಎಪ್ರಿಲ್ 06ರಂದು ಆದಿತ್ಯವಾರ ಕುಮಟಾ ಸೈಂಟ್ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರವಾರ ಧರ್ಮಕ್ಷೇತ್ರದ ಶ್ರೇಷ್ಠ ಧರ್ಮಗುರುಗಳಾದ ಮೊನ್ಸಿಜ್ಞೊರ್ ರಿಚರ್ಡ್ ರೊಡ್ರಿಗಸ್ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮತ್ತು ಅಖಿಲ ಭಾರತ ಕಥೊಲಿಕ್ ಯೂನಿಯನ್ ಇದರ ಕರ್ನಾಟಕ ಪ್ರಾಂತ್ಯದ ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮತ್ತು ಆಲ್ವಿನ್ ಡಿಸೋಜ ಪಾನೀರ್ ಇವರೀರ್ವರನ್ನು ಸನ್ಮಾನಿಸಲಾಯಿತು. ಇಂದಿನ ಪರಿಸ್ಥಿತಿಯಲ್ಲಿ ರಾಜಕೀಯಕ್ಕೆ ಕೊಂಕಣಿಗರ ಅಗತ್ಯತೆ ಬಗ್ಗೆ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಮತ್ತು ಪ್ರಸ್ತುತ ರಾಜಕೀಯ ಆಗೂಹೋಗುಗಳ ಬಗ್ಗೆ ಆಲ್ವಿನ್ ಡಿಸೋಜರವರು ಮಾತಾನಾಡಿದರು. ಕಾರ್ಯಕ್ರಮದಲ್ಲಿ ಕಥೊಲಿಕ್ ಅಸೋಸಿಯೇಷನ್ ಡಯಾಸಿಸ್ ಆಫ್ ಕಾರವಾರದ ಅಧ್ಯಕ್ಷ ಜೋರ್ಜ್ ಫೆರ್ನಾಂಡಿಸ್, ಉಪಾಧ್ಯಕ್ಷ ಸ್ಟಿಫನ್ ರೊಡ್ರಿಗಸ್, ಕಾರ್ಯದರ್ಶಿ ಕ್ಲೆಮೆಂಟ್ ಗುಡಿನ್ಹೂ, ರಾಜಕೀಯ ಸಮಿತಿ ಅಧ್ಯಕ್ಷ ಕೈತಾನಾ ಬಾರ್ಬೋಜಾ, ರಾಜಕೀಯ ಜಾಗೃತಿ ಶಿಬಿರದ ಸಂಘಟನೆಯ ಅಧ್ಯಕ್ಷ ಜೋಸೆಪ್ ನೊರೊನ್ಹಾ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.