ಜೀವನ್ ತಾವ್ರೊ ಆತ್ಮಹತ್ಯೆಗೆ ಪ್ರಚೋದನೆ – ಪೋಲೀಸರಿಂದ ಇಬ್ಬರ ದಸ್ತಗಿರಿ

ಆರೋಪಿಗಳಿಗೆ ನ್ಯಾಯಾಲಯದಿಂದ ನ್ಯಾಯಾಂಗ ಬಂಧನ
ತಪ್ಪು ಮಾಡಿದವರನ್ನು ದೇವರು ಒಂದಲ್ಲಾ ಒಂದು ದಿನ ಶಿಕ್ಷೆ ನೀಡೇ ನೀಡುತ್ತಾರೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆ ಬಂಟ್ವಾಳ ತಾಲೂಕಿನ ಆಮ್ಟಾಡಿಯಲ್ಲಿ ನಡೆದಿದೆ. ಅಮ್ಟಾಡಿ ಗ್ರಾಮದ ನಿವಾಸಿ ಜೀವನ್ ತಾವ್ರೊ ಫೆಬ್ರವರಿ 10ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯ ಅ.ಕ್ರ. 14/2025 ಕಲಂ 108, 318 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಸದ್ರಿ ಪ್ರಕರಣದಲ್ಲಿ ಪೋಲಿಸರು ತನಿಖೆ ನಡೆಸಿದಾಗ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ಜೀವನ್ ನೇಣಿಗೆ ಶರಣಾಗಿದ್ದ ಎಂದು ತಿಳಿದು ಬಂದಿದೆ. ಈ ತನಿಖೆಯಂತೆ ಎಪ್ರಿಲ್ 5ರಂದು ಶನಿವಾರ ಆರೋಪಿಗಳಾದ ಬಂಟ್ವಾಳ ಕುರಿಯಾಳ ಗ್ರಾಮದ ನಿವಾಸಿ ಪ್ರವೀಣ್ ಡೇಸಾ ಮತ್ತು ಸೋರ್ನಾಡು ಗ್ರಾಮದ ನಿವಾಸಿ ರೋಹನ್ ಪಿಂಟೋ ಎಂಬವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.