April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರೋಹನ್ ಕಾರ್ಪೋರೇಶನ್ ಮಾಲಕತ್ವದ ರೋಹನ್ ಗಾರ್ಡನ್-ಶಿವಭಾಗ್ ವಸತಿ ಸಮುಚ್ಚಯ ಎಪ್ರಿಲ್ 12ರಂದು ಭೂಮಿಪೂಜೆ

ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳಿಗೂ ಮಿಕ್ಕಿ ಸೇವೆ ನೀಡುತ್ತಿರುವ ರೋಹನ್ ಕಾರ್ಪೋರೇಶನ್, ತನ್ನ ಮತ್ತೊಂದು ವಸತಿ ಸಮುಚ್ಚಯ ‘ರೋಹನ್ ಗಾರ್ಡನ್ ಯೋಜನೆಯ ಭೂಮಿಪೂಜೆಯನ್ನು, 2025ರ ಎಪ್ರಿಲ್ 12ರ ಶನಿವಾರ ಸಂಜೆ 5:00 ಗಂಟೆಗೆ ನಡೆಸಲಿದೆ. ಕದ್ರಿ – ಶಿವಬಾಗ್, ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಧುನಿಕ ವಸತಿ ಸಮುಚ್ಚಯ ಪ್ರಕೃತಿ ಮತ್ತು ಅನುಕೂಲತೆಗಳ ಸಮ್ಮಿಲನವಾಗಿದೆ.

ರೋಹನ್ ಗಾರ್ಡನ್ ಐಶಾರಾಮಿ, ಸುರಕ್ಷತೆ ಮತ್ತು ಪರಿಸರ ಸ್ನೇಹಿ ವಾಸಯೋಗ್ಯ ವ್ಯವಸ್ಥೆಯನ್ನು ಒದಗಿಸುವ ಆಧುನಿಕ ವಸತಿ ಸಮುಚ್ಚಯವಾಗಿದೆ. ಐದು ಅಂತಸ್ತುಗಳ ಈ ಕಟ್ಟಡದಲ್ಲಿ 28 ಸುಂದರವಾಗಿ ವಿನ್ಯಾಸಗೊಳಿಸಲಾದ ಅಪಾರ್ಟ್‌ಮೆಂಟ್‌ಗಳು ಇದ್ದು, ಇದು ಆರಾಮ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಜಿಮ್ನೇಶಿಯಂ, 24X7 ಸಿಸಿಟಿವಿ ಮತ್ತು ಸ್ಮಾರ್ಟ್ ಸೆನ್ಸರ್ ದೀಪಗಳಂತಹ ಪ್ರೀಮಿಯಂ ಸೌಲಭ್ಯಗಳಿವೆ. ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ಸ್, ಸಾಕಷ್ಟು ಪಾರ್ಕಿಂಗ್, ಮಕ್ಕಳ ಆಟದ ಸ್ಥಳ ಮತ್ತು ಹಿರಿಯರಿಗಾಗಿ ವಿಶ್ರಾಂತಿ ಸ್ಥಳಗಳೂ ಇವೆ. ಫೈರ್ ಫೈಟಿಂಗ್ ವ್ಯವಸ್ಥೆ, ವೀಡಿಯೋ ಡೋರ್ ಫೋನ್ ಮತ್ತು ಎ.ಆರ್.ಡಿ. ಅಟ್ಯಾಚ್ಡ್ ಲಿಫ್ಟ್’ಗಳ ಸುರಕ್ಷತೆಯನ್ನು ಒದಗಿಸಿದೆ. ರೋಹನ್ ಗಾರ್ಡನ್ ನಗರದ ಪ್ರಮುಖ ಸ್ಥಳಗಳಿಗೆ ಸುಲಭ ಸಂಪರ್ಕವನ್ನು ಹೊಂದಿರುವುದಲ್ಲದೆ, ಶಾಂತ ಮತ್ತು ಹಸಿರು ಪರಿಸರದ ಅನುಭವವನ್ನು ನೀಡಲಿದೆ.

ಈ ಯೋಜನೆಯು 1,105 ರಿಂದ 1,550 ಚದರ ಅಡಿಗಳ 2 ಮತ್ತು 3 ಬಿ.ಎಚ್.ಕೆ. ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಅಪಾರ್ಟ್‌ಮೆಂಟ್‌ ವಿಟ್ರಿಫೈಡ್ ಫ್ಲೋರಿಂಗ್, ಪ್ರೀಮಿಯಂ ಸ್ಯಾನಿಟರಿ ವೇರ್ ಮತ್ತು ಯುಪಿವಿಸಿ/ಅಲ್ಯೂಮಿನಿಯಂ ಕಿಟಕಿಗಳೊಂದಿಗೆ ಉತ್ತಮ ಗುಣಮಟ್ಟದ ನಿರ್ಮಾಣವನ್ನು ಹೊಂದಿದೆ. ವಿಶಾಲವಾದ ಒಳಾಂಗಣ, ಸೊಗಸಾದ ಬಾಲ್ಕನಿಗಳು, ಮತ್ತು ಸಮಕಾಲೀನ ವಾಸ್ತುಶಿಲ್ಪವನ್ನು ಹೊಂದಿದೆ.

ಕರಾವಳಿ ಕರ್ನಾಟಕದಾದ್ಯಂತ 30ಕ್ಕೂ ಮಿಕ್ಕಿ ಯಶಸ್ವಿ ಯೋಜನೆಗಳನ್ನು ನಿರ್ಮಿಸಿರುವ ರೋಹನ್ ಕಾರ್ಪೋರೇಶನ್, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳನ್ನು ಮಾಡಿದೆ. ರೋಹನ್ ಗಾರ್ಡನ್‌ ಯೋಜನೆಯು – ನವೀನತೆ, ಗುಣಮಟ್ಟ ಮತ್ತು ಉತ್ತಮ ವಿನ್ಯಾಸವನ್ನು ಹೊಂದಿದ್ದು, ತನ್ನ ಗ್ರಾಹಕರಿಗ ಅತ್ತ್ಯುತ್ತಮ ವಾಸ ಯೋಗ್ಯ ಅನುಭವವನ್ನು ನೀಡಲಿದೆ.

ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: [email protected], ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page