ಕಾರಿನ ಹೊರಭಾಗಕ್ಕೆ ನಿಂತು ಬೊಬ್ಬೆ ಹಾಕಿ ಪ್ರಯಾಣ – ಪ್ರಕರಣ ದಾಖಲು

ಆಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ವಾಹನ ಚಾಲನೆ ಮಾಡಿದ್ದಲ್ಲದೆ ಕಾರು ಚಲಿಸುತ್ತಿರುವಾಗಲೇ ಕಾರಿನ ಕಿಟಕಿಗಳ ಮುಖಾಂತರ ದೇಹವನ್ನು ಹೊರಭಾಗಕ್ಕೆ ಹಾಕಿ, ನಿಂತು ಹಾಗೂ ಬೊಬ್ಬೆ ಹಾಕಿ ಪ್ರಯಾಣಿಸಿದ ಘಟನೆ ಇದೇ ಎಪ್ರಿಲ್ 5ರಂದು ಸಾಯಂಕಾಲ ಮಾಣಿ ಮೈಸೂರು ಹೆದ್ದಾರಿ ರಸ್ತೆಯಲ್ಲಿ ನಡೆದಿದೆ.
ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ಪರಿಸರದಲ್ಲಿ ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಕೆಎ 09 ಎಂ.ಜಿ. 5880 ನಂಬರಿನ ಕಾರಲ್ಲಿ 5 ಯುವಜನರು ನಿಂತು, ಕಿಟಕಿಯಿಂದ ದೇಹಗಳು ಹೊರಗಿದ್ದರೂ, ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳನ್ನು ಅಪಾಯಕರ ರೀತಿಯಲ್ಲಿ ಓವರ್ ಟೇಕ್ ಮಾಡಿದ ಕಾರು ಚಾಲಕನ ಈ ಕೃತ್ಯವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುತ್ತದೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ. 50/25 ಕಲಂ:281 BNS 2023 ಮತ್ತು 184 IMV Act ನಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಸದ್ರಿ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕೃತ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.