ಪುಣಚ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಸಂತೋಷ್ ರೈ ಬೈಲುಗುತ್ತು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್ ಮಣಿಲ ಆಯ್ಕೆ

ಪುಣಚ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಯುವ ಮುಂದಾಳು ಸಂತೋಷ್ ರೈ ಬೈಲುಗುತ್ತು ಇವರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಯುವ ನಾಯಕ ಯುವ ಹೋರಾಟಗಾರ ಬಡವರ ಬಗ್ಗೆ ಸಮಾಜದ ಜನಸಾಮಾನ್ಯರ ಪರವಾಗಿ ಸದಾ ಕಾಲ ಕೆಲಸ ಮಾಡುವ ಸಿರಾಜ್ ಮಣಿಲ ಆಯ್ಕೆಯಾಗಿದ್ದಾರೆ.
ಸಂತೋಷ್ ರೈ ಬೈಲುಗುತ್ತು ಅವರು ಈ ಹಿಂದೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಮಾಜದಲ್ಲಿ ಅನೇಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಸಮಾಜದ ಸರ್ವ ಧರ್ಮಿಯರ ಪ್ರೀತಿ ವಿಶ್ವಾಸವನ್ನು ಪಡೆದಿದ್ದಾರೆ. ಯುವಕರ ಪ್ರತಿಯೊಂದು ಕಾರ್ಯಕ್ರಮಗಳು ಮತ್ತು ಸಾಮಾಜಿಕ ಚಿಂತನೆಗಳಿಗೆ ಪ್ರೋತ್ಸಾಹವನ್ನು ನಿರಂತರವಾಗಿ ಮಾಡಿಕೊಂಡು ಮುನ್ನಡೆದಿದ್ದಾರೆ.
ಪುಣಚ ವಲಯ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷ ಸಂತೋಷ್ ರೈ ಬೈಲುಗುತ್ತು, ಉಪಾಧ್ಯಕ್ಷರುಗಳಾಗಿ ಸಿರಿಲ್ ಫೆರಾವೋ, ಉಲ್ಲಾಸ್ ಪೂಜಾರಿ, ಅಬ್ದುಲ್ ರಹಿಮಾನ್ ಅಜ್ಜಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್ ಮಣಿಲ, ಕಾರ್ಯದರ್ಶಿಗಳಾಗಿ ಅಶೋಕ್ ಗರಡಿ, ಅನಿತಾ ನಡುಸಾರ್, ಐತಪ್ಪ ಅಗ್ರಾಳ, ರಮೇಶ್ ಕಂಬಲಿಮೂಲೆ ಹಾಗೂ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಉಪಾಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ಹಿತ್ತಿಲು ಆಯ್ಕೆಯಾಗಿದ್ದಾರೆ.
ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳನ್ನು ಪುಣಚ ವಲಯ ಕಾಂಗ್ರೆಸ್ ಅಭಿನಂದಿಸಿದೆ.