39ನೇ ಪಳ್ಳೀರು ವಾರ್ಡಿನ ಸೈಂಟ್ ಜೋಸೆಫ್ ನಗರ ಕಾಲೋನಿಯಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ MLC ಐವನ್ ಡಿಸೋಜ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಳ್ಳೀರು ವಾರ್ಡಿನ ಸೈಂಟ್ ಜೋಸೆಫ್ ನಗರದಲ್ಲಿ ಕಾಂಕ್ರೀಟ್ ರಸ್ತೆಯ ಅವಶ್ಯಕತೆ ಬಹಳವಾಗಿದ್ದು ಅನೇಕ ವರ್ಷಗಳಿಂದ ರಸ್ತೆಗಾಗಿ ಅನುದಾನದ ಬೇಡಿಕೆಯನ್ನು ಇಟ್ಟಿದ್ದು ಸ್ಥಳೀಯರ ಬೇಡಿಕೆಯಂತೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಅನುದಾನದಿಂದ ವಿಧಾನ ಪರಿಷದ್ ಸದಸ್ಯ ಐವನ್ ಡಿಸೋಜ ಇವರ ಮುತುವರ್ಜಿಯಲ್ಲಿ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ನಡೆಯಿತು. ಇದರ ಉದ್ಘಾಟನೆಯನ್ನು ಇಂದು ಎಪ್ರಿಲ್ 14ರಂದು ಸೋಮವಾರದಂದು MLC ಐವನ್ ಡಿಸೋಜರವರು ನೆರವೇರಿಸಿದರು. ಕೇವಲ 45 ದಿನಗಳಲ್ಲಿ ಈ ಕಾಮಗಾರಿಯು ನಡೆದಿದ್ದು ಉತ್ತಮವಾದ ರಸ್ತೆ ನಿರ್ಮಾಣ ಮಾಡುವ ಮೂಲಕ ಸ್ಥಳೀಯ ಜನರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಉದ್ಘಾಟನೆಯ ಬಳಿಕ ಅವರು ತಿಳಿಸಿದರು.
ಸಾರ್ವಜನಿಕ ಕೆಲಸಗಳು ಅತ್ಯಂತ ಪಾರದರ್ಶಕದ ಜೊತೆಗೆ ಸಾರ್ವಜನಿಕರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸಂತಸ ತಂದಿದೆ ಎಂದು ಸ್ಥಳೀಯವಾಗಿ ಸಾರ್ವಜನಿಕರು ಕೂಡ ಈ ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಭೂತ ಸೌಕರ್ಯ ಒದಗಿಸಿ ಕೊಡುವಲ್ಲಿ ಬಹಳ ಶ್ರಮ ವಹಿಸಿರುತ್ತಾರೆ ಎಂದು ಶ್ಲಾಘಿಸಿದರು.
ಜೆಪ್ಪುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಇದರ ಧರ್ಮಗುರುಗಳಾದ ವಂದನೀಯ ಫಾದರ್ ಮ್ಯಾಕ್ಸಿಂ ಡಿಸೋಜ ರವರು ಮಾತನಾಡಿ ಬಹಳ ಉತ್ತಮವಾದ ಕಾಮಗಾರಿ. ಈ ಕಾಮಗಾರಿಯ ಅವಶ್ಯಕತೆ ಕಳೆದ ನಾಲ್ಕು ವರ್ಷಗಳಿಂದ ಸಾರ್ವಜನಿಕರು ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಈಡೇರಿಸಿದ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜರವರಿಗೆ ಹಾಗೂ ರಾಜ್ಯ ಸರ್ಕಾರಕ್ಕೂ ಅಭಿನಂದನೆಗಳನ್ನು ಸಲ್ಲಿಸಿದರು. ಮಾಜಿ ಮೇಯರ್ ಹಾಗೂ ಕಾರ್ಪೊರೇಟರ್ ಜೆಸಿಂತಾ ವಿಜಯ ಆಲ್ಪ್ರೇಡ್ ಸ್ವಾಗತಿಸಿದರು. ಸ್ಥಳೀಯರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನೀತು, ಭಾಸ್ಕರ್ ರಾವ್ ಮತ್ತಿತರರು ಉಪಸ್ಥಿತರಿದ್ದರು.