September 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಶೃದ್ಧಾಭಕ್ತಿಯಿಂದ ಶುಭ ಶುಕ್ರವಾರ ಆಚರಣೆ

ಆಧುನಿಕ ಜೀವನದಲ್ಲಿ ನಾವು ಕ್ರಿಸ್ತನಿಗೆ ಯಾವ ರೀತಿಯ ಶಿಲುಬೆಯನ್ನು ನೀಡುತ್ತೇವೆ – ಫಾದರ್ ವಿಜಯ್ ಮಚಾದೊ

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಇಂದು ಎಪ್ರಿಲ್ 18ರಂದು ಶೃದ್ಧಾಭಕ್ತಿಯಿಂದ ಶುಭ ಶುಕ್ರವಾರದ ಆಚರಣೆಯನ್ನು ಮಾಡಲಾಯಿತು. ಪ್ರಧಾನ ಧರ್ಮಗುರುಗಳಾಗಿ ಮಂಗಳೂರು ಧರ್ಮಕ್ಷೇತ್ರದ ಮಂಗಳ ಜ್ಯೋತಿಯ ನಿರ್ದೇಶಕ ವಂದನೀಯ ಫಾದರ್ ವಿಜಯ್ ಮಚಾದೊ ಆಗಮಿಸಿದ್ದರು. ಆಧುನಿಕ ಜೀವನದಲ್ಲಿ ನಾವು ಕ್ರಿಸ್ತನಿಗೆ ಯಾವ ರೀತಿಯ ಶಿಲುಬೆಯನ್ನು ನೀಡುತ್ತೇವೆ? ನೈಜ ಜೀವನದಲ್ಲಿ ಒಂದೇ ಕುಟುಂಬದ ಅಣ್ಣ – ತಮ್ಮ, ಅಕ್ಕ – ತಂಗಿಯರಲ್ಲಿ ಯಾರೊಬ್ಬರು ಉನ್ನತಿಗೇರಿದರೆ ಇತರರು ಯಾಕೆ ಸಂತೋಷ ಪಡುವುದಿಲ್ಲ? ಹಣ, ಅಧಿಕಾರಕ್ಕೆ ಪ್ರಲೋಭನೆಯೇಕೆ? ಮನುಷ್ಯ ಮನುಷ್ಯತ್ವಕ್ಕೆ ಬೆಲೆ ನೀಡದೆ ಹಗೆತನಕ್ಕೆ ಒತ್ತು ನೀಡಿದಾಗ ಕಷ್ಟಗಳು ಹೆಚ್ಚುತ್ತವೆ. ಇಂದು ನಾವು ಕ್ರಿಸ್ತನ ಶಿಲುಬೆಯಲ್ಲಿ ಮರಣವನ್ನು ಸ್ಮರಿಸುವಾಗ ನಾವು ನಮ್ಮದೇ ದೈನಂದಿನ ಜೀವನದ ಶಿಲುಬೆಗಳ ಬಗ್ಗೆ ಕಷ್ಟಗಳ ಬಗ್ಗೆ ಹಾಗೂ ಇವುಗಳಿಗೆ ಪರಿಹಾರ ಎಲ್ಲಿಂದ ದೊರೆಯುತ್ತದೆ ಎಂದು ಯೋಚಿಸೋಣ. ನಾವು ದೇವರ ಕೈಗಳಲ್ಲಿ ನಮ್ಮನ್ನು ಸಮರ್ಪಿಸೋಣ. ಉಪವಾಸವಿದ್ದು ಪವಿತ್ರ ಪುಸ್ತಕದ ವಾಕ್ಯಗಳನ್ನು ಓದಿ ಶಿಲುಬೆಯ ಹಾದಿ ನಡೆಸಿ ಪುನೀತರಾಗೋಣ ಇದೇ ಶುಭ ಶುಕ್ರವಾರದ ಪ್ರಮುಖ ಆಶಯವಾಗಿದೆ ಎಂದು ಶುಭ ಶುಕ್ರವಾರದ ಪ್ರಾರ್ಥನಾ ಯಾತ್ರೆಯ ನೇತೃತ್ವವನ್ನು ವಹಿಸಿ ಪ್ರವಚನದಲ್ಲಿ ಅವರು ಹೇಳಿದರು.

ಸೂರಿಕುಮೇರು ಬೊರಿಮಾರ್ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ ಯೇಸುಕ್ರಿಸ್ತನ ಭಾವೋದ್ರೇಕ ಮತ್ತು ಮರಣದ ಸ್ಮರಣೆಯನ್ನು ಆಳವಾದ ಭಕ್ತಿ ಮತ್ತು ಗೌರವದಿಂದ ನಡೆಸಿಕೊಟ್ಟರು. ಅವರು ಬಲಿಪೀಠದ ಸೇವಕರೊಂದಿಗೆ ಪ್ರಾರ್ಥನೆಯನ್ನು ಪ್ರಾರ್ಥನಾಪೂರ್ವಕ ನಿಖರತೆ ಮತ್ತು ಕಾಳಜಿಯೊಂದಿಗೆ ಸಂಯೋಜಿಸಿದರು, ಎಲ್ಲಾ ವಯಸ್ಸಿನ ಭಕ್ತರು ಪ್ರಾರ್ಥನಾ ಏಕತೆಯಲ್ಲಿ ನಡೆದರು. ಇಡೀ ಆಚರಣೆಯು ಆಧ್ಯಾತ್ಮಿಕ ಶ್ರೀಮಂತಿಕೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಿತ್ತೆಂದು ಖಚಿತಪಡಿಸಿಕೊಂಡರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ, ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ತೊಮಸ್ ಲಸ್ರಾದೊ ಹಾಗೂ ನೂರಾರು ಭಕ್ತಾಧಿಗಳು ಪವಿತ್ರ ಆಚರಣೆಯಲ್ಲಿ ಭಾಗವಹಿಸಿದ್ದರು. ಬಲಿಪೀಠ ಸೇವಕಿ ಲೆನೊರಾ ಸ್ಯಾನ್ಸಿಯಾ ಪಿಂಟೊ ಶುಭ ಶುಕ್ರವಾರದ ಆಚರಣೆಯನ್ನು ನಿರೂಪಿಸಿದರು.

You may also like

News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ–2026’ ಅನ್ನು ಸೆಪ್ಟೆಂಬರ್ 1ರಂದು
News

ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್

You cannot copy content of this page