November 9, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾಶ್ಮೀರ ಭಯೋತ್ಪಾದಕ ದಾಳಿ – ರಾಜ್ಯ ದಾರಿಮಿ ಉಲಮಾ ಒಕ್ಕೂಟ ಖಂಡನೆ 

ಕಾಶ್ಮೀರ ರಾಜ್ಯದ ಪಹಲ್ಗಾಂ ಪ್ರವಾಸಿ ತಾಣಕ್ಕೆ ಬೇಟಿ ನೀಡಿದ ನಾಗರಿಕರ ಮೇಲೆ ನಡೆದ ರಾಕ್ಷಸೀಯ ಭಯೋತ್ಪಾದಕ ದಾಳಿಯನ್ನು ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅತ್ಯುಗ್ರವಾಗಿ ಖಂಡಿಸುತ್ತಿದೆ. ನರ ರಾಕ್ಷಸ ಭಯೋತ್ಪಾದಕರ ಹುಟ್ಟಡಗಿಸಲು ಸರಕಾರಗಳು ಇಚ್ಚಾ ಶಕ್ತಿ ಪ್ರದರ್ಶಿಸ ಬೇಕೆಂದು ಒಕ್ಕೂಟ ಆಗ್ರಹಿಸುತ್ತಿದೆ.

ಪ್ರಜೆಗಳಿಗೆ ಸುರಕ್ಷತೆ ನೀಡ ಬೇಕಾದದ್ದು ಸರಕಾರಗಳ ಆದ್ಯ ಕರ್ತವ್ಯವಾಗಿದೆ‌.ಸುಮಾರು ಐನೂರರಷ್ಟು ಪ್ರವಾಸಿಗರಿದ್ದ ಜಾಗದಲ್ಲಿ ಪೋಲೀಸರ ಕಾವಲು ಇಲ್ಲದೇ ಇದ್ದದ್ದು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆಯಾದರೂ ಈ ವಿಷಮ ಘಟ್ಟದಲ್ಲಿ ಪರಸ್ಪರ ಟೀಕಾ ಪ್ರಹಾರಗಳನ್ನು ಬದಿಗಿರಿಸಿ ಸರಕಾರದ ಜೊತೆ ಕೈ ಜೋಡಿಸ ಬೇಕಾಗಿದೆ ಎಂದು ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಟಿದೆ.ಇದರ ಹಿಂದಿರುವ ಕ್ಷುದ್ರ ಶಕ್ತಿಯನ್ನು ಅತೀ ಶೀಘ್ರದಲ್ಲೇ ಪತ್ತೆ ಹಚ್ಚಿ ಅದರ ಮೂಲವನ್ನು ನಾಶ ಮಾಡಲು ಸರಕಾರ ಪಣತೊಡಬೇಕಿದೆ. ಆದರೆ ನಿರಪರಾಧಿಗಳು ಬಲಿಯಾಗದಂತೆ ಜಾಗೃತೆ ವಹಿಸುವುದೂ ಅಗತ್ಯವಾಗಿದೆ. ಅದೇ ವೇಳೆ ಭಯೋತ್ಪಾಕ ದಾಳಿಯನ್ನು ಮುಂದಿಟ್ಟು ದೇಶದ ಮುಸ್ಲಿಮರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿ ಶಾಂತಿ ಕದಡುವವರ ವಿರುದ್ದ ಕಾನೂನು ಕ್ರಮ ಕೈ ಗೊಳ್ಳುವುದು ಕೂಡಾ ಅಗತ್ಯ ಎಂದು ಉಲಮಾ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 

You may also like

News

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಡಳಿತ ಮಂಡಳಿ ಚುನಾವಣೆ 2025-28

ನವಂಬರ್ 9ರಂದು ನಾಳೆ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಸಿದ್ಧ ಘಟಾನುಘಟಿಗಳ ನಡುವೆ ನಡೆಯಲಿದೆ ಫೈಟ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ
News

ಸೈಂಟ್ ತೆರೆಸಾ ಆಫ್ ಲಿಶುಕ್ಸ್ ರವರ ಸಂತ ಪದವಿಯ ಶತಮಾನೋತ್ಸವ

ನಾಳೆ ನವೆಂಬರ್ 9ರಂದು ಬೆಂದೂರ್ ಚರ್ಚ್ ಇಲ್ಲಿ ದಿವ್ಯ ಬಲಿಪೂಜೆ   ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರ ನೇತೃತ್ವ ಸೈಂಟ್ ತೆರೆಸಾ ಆಫ್

You cannot copy content of this page